ಹುಚ್ಚುನಾಯಿ ಕಡಿತದಿಂದ ಮೂವರಿಗೆ ಗಾಯ

| Published : Jun 22 2024, 12:46 AM IST

ಸಾರಾಂಶ

ಹೊಸದುರ್ಗ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು, ತಾಲೂಕಿನ ಅನಿವಾಳ, ಕುಂದೂರು, ಶ್ರೀರಂಗಪುರದಲ್ಲಿ ಹುಚ್ಚು ನಾಯಿ ಮೂವರಿಗೆ ಕಡಿದು ಗಾಯಗೊಳಿಸಿರುವ ಘಟನೆ ಶುಕ್ರವಾರ ನಡೆದಿದೆ.

ಹೊಸದುರ್ಗ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು, ತಾಲೂಕಿನ ಅನಿವಾಳ, ಕುಂದೂರು, ಶ್ರೀರಂಗಪುರದಲ್ಲಿ ಹುಚ್ಚು ನಾಯಿ ಮೂವರಿಗೆ ಕಡಿದು ಗಾಯಗೊಳಿಸಿರುವ ಘಟನೆ ಶುಕ್ರವಾರ ನಡೆದಿದೆ. ಅನಿವಾಳ ಗ್ರಾಮದ ರಂಗನಾಥ ಎನ್ನುವರಿಗೆ ಕಣ್ಣು ಮತ್ತು ಮೂಗಿಗೆ ಬಲವಾಗಿ ನಾಯಿ ಕಚ್ಚಿದೆ. ಹಾಗೂ ಹೊಸಕುಂದೂರು ಗ್ರಾಮದ ಪರಪ್ಪ ಅವರ ಕೈಗೆ ನಾಯಿ ಕಚ್ಚಿದ್ದು, ಎದೆ ಭಾಗದಲ್ಲಿ ತರಚಿದ ಗಾಯಗಳಾಗಿವೆ. ಹಾಗೆಯೇ ಶ್ರೀರಂಗಾಪುರ ಗ್ರಾಮದ ಮಹಿಳೆಯೊಬ್ಬರಿಗೆ ಮುಖಕ್ಕೆ ಗಾಯಗೊಳಿಸಿದೆ ಎನ್ನಲಾಗಿದೆ. ಎಲ್ಲರೂ ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

----------------

21hsd2:

ರಂಗನಾಥ