ಸಾರಾಂಶ
ಮಾದನ ಹಿಪ್ಪರಗಾ ವಲಯ ಪಟ್ಟದ ವಾರ್ಷಿಕ ಕ್ರೀಡಾ ಕೂಟದಲ್ಲಿ ಮಾದನ ಹಿಪ್ಪರಗಾ ಗ್ರಾಮದ ಶಿವಲಿಂಗೇಶ್ವರ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು, ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಂದಾಗಿ ವಲಯ ಮಟ್ಟದ ಚಾಂಪಿಯನ್ ಪಟ್ಟವನ್ನು ತಂದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಆಳಂದ
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಮಾದನ ಹಿಪ್ಪರಗಾ ವಲಯ ಪಟ್ಟದ ವಾರ್ಷಿಕ ಕ್ರೀಡಾ ಕೂಟದಲ್ಲಿ ಮಾದನ ಹಿಪ್ಪರಗಾ ಗ್ರಾಮದ ಶಿವಲಿಂಗೇಶ್ವರ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು, ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಂದಾಗಿ ವಲಯ ಮಟ್ಟದ ಚಾಂಪಿಯನ್ ಪಟ್ಟವನ್ನು ತಂದುಕೊಂಡಿದ್ದಾರೆ.ಈ ವಲಯಮಟ್ಟದ ಚಾಂಪಿಯನ್ ಪಟ್ಟವನ್ನು ಗಿಟಿಸಿಕೊಂಡು ಕ್ರೀಡಾ ವಿಜೇತ ವಿದ್ಯಾರ್ಥಿಗಳು ಹೋಬಳಿ ತಾಲೂಕು ಕ್ರೀಡಾ ಕೂಟಕ್ಕೆ ಆಯ್ಕೆಯಾಗಿ ಸಂಭ್ರಮಿಸಿದ್ದಾರೆ. ತಮ್ಮ ಶಾಲೆಯ ಮಕ್ಕಳ ಸಾಧನೆಗೆ ಶ್ರೀ ಶಿವಲಿಂಗೇಶ್ವರ ಮಠದ ಪೀಠಾಧಿಪತಿ ಹಾಗೂ ಶಾಲೆಯ ಅಧ್ಯಕ್ಷರಾದ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಆಡಳಿತ ಮಂಡಳಿಯ ಪದಾಧಿಕಾರಿಗಳು ವಿಜೇತ ಮಕ್ಕಳಿಗೆ ಶುಭಹಾರೈಸಿದ್ದಾರೆ.
ಪ್ರೌಢಶಾಲೆಗಳ ಬಾಲಕರ ವಿಭಾಗದ ಕ್ರೀಡೆಯಲ್ಲಿ ಖೋ ಖೋ, ಕಬ್ಬಡಿ, ವಾಲಿಬಾಲ್‍ಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ವೈಯುಕ್ತಿಕ ರೀಲೆ, ಉದ್ದ ಜಿಗಿತ, ಓಟ, ಚಕ್ರ ಎಸೆತದಲ್ಲೂ ಪ್ರಥಮಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲೂ ಶಾಲೆಯ ವಿದ್ಯಾರ್ಥಿನಿಯರು ಸ್ಪರ್ಧಿಸಿದ್ದು ಥ್ರೋಬಾಲ್, ವಾಲಿಬಾಲ್‌ನಲ್ಲೂ ಪ್ರಥಮ ಸ್ಥಾನ,ಖೋ ಖೋ ಮತ್ತು ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ವಿದ್ಯಾರ್ಥಿ ಶಿವಲಿಂಗ ಎಸ್. ಪಾಟೀಲ, ಚಕ್ರ ಎಸೆತ ಮತ್ತು ಗುಂಡು ಎಸೆತದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ಮಂಜುನಾಥ ಪ್ಯಾಟಿ, ಓಟದಲ್ಲಿ ರಾಜಕುಮಾರ ಓನಾಮಶೆಟ್ಟಿ ಪ್ರಥಮ, ನಾಗೇಶ ಬಂಬಾಸೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯ ವಿಭಾಗದಲ್ಲಿ ಖೋ ಖೋ ರಿಲೆ, ಮತ್ತು ಥ್ರೋಬಾಲನಲ್ಲಿ ವಿದ್ಯಾರ್ಥಿನಿಯ ತಂಡವು ಪ್ರಥಮ ಸ್ಥಾನ ಪಡೆದಿದೆ. ರಿಲೆಯಲ್ಲಿ ಭವಾನಿ ಚ. ಜಮಾದಾರ, ಪವಿತ್ರ ಪರತಗಾರ ಪ್ರಥಮ, ಉದ್ದ ಜಿಗಿತದಲ್ಲಿ ಭವಾನಿ ಜಮಾದಾರ, ಚಕ್ರ ಎಸೆತದಲ್ಲಿ ವಿದ್ಯಾ ತೋಳನೂರ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಆನಂದರಾಜ ಪಾಟೀಲ ಅವರು ಹರ್ಷವ್ಯಕ್ತಪಡಿಸಿದ್ದಾರೆ.