ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ ಜೀವನ ಆದರ್ಶನೀಯ: ಡಾ. ಅನ್ನದಾನಿ ಮೇಟಿ

| Published : Feb 12 2024, 01:31 AM IST / Updated: Feb 12 2024, 03:12 PM IST

ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ ಜೀವನ ಆದರ್ಶನೀಯ: ಡಾ. ಅನ್ನದಾನಿ ಮೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನಾದ್ಯಂತ ಕರ್ನಾಟಕ ಸಂಭ್ರಮ 50ರ ಶೀರ್ಷಿಕೆಯಡಿ ಮಹನೀಯರ ಆದರ್ಶ ಜೀವನವನ್ನು ಇಂದಿನ ಯುವ ಪೀಳಿಗೆಗೆ ಮುಟ್ಟಿಸುವ ಕಾರ್ಯ ಶ್ಲಾಘನೀಯವಾದುದು.

ಮುಂಡರಗಿ: ಮಾದರ ಚೆನ್ನಯ್ಯನವರು 12ನೇ ಶತಮಾನದ ಪ್ರಮುಖ ಶರಣರಾಗಿದ್ದರು. ಡೋಹರ ಕಕ್ಕಯ್ಯನವರು ಇಷ್ಟಲಿಂಗ ನಿಷ್ಠ ಆಚಾರ ಸಂಪನ್ನನಾಗಿದ್ದರು. ಇಬ್ಬರ ಜೀವನ ಆದರ್ಶನೀಯವಾದುದು ಎಂದು ಪಟ್ಟಣದ ವೈದ್ಯ ಡಾ. ಅನ್ನದಾನಿ ಮೇಟಿ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ಮಜ್ಜುರಮ್ಮ ದೇವಸ್ಥಾನ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಕರ್ನಾಟಕ ಸಂಭ್ರಮ-50ರ ಉಪನ್ಯಾಸ ಕಾರ್ಯಕ್ರಮ‌, ಶರಣರ ಜೀವನ ಚಿಂತನದಲ್ಲಿ ಮಾದರ ಚೆನ್ನಯ್ಯ ಮತ್ತು ಡೋಹರ ಕಕ್ಕಯ್ಯನವರ ಜೀವನ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನಾದ್ಯಂತ ಕರ್ನಾಟಕ ಸಂಭ್ರಮ 50ರ ಶೀರ್ಷಿಕೆಯಡಿ ಮಹನೀಯರ ಆದರ್ಶ ಜೀವನವನ್ನು ಇಂದಿನ ಯುವ ಪೀಳಿಗೆಗೆ ಮುಟ್ಟಿಸುವ ಕಾರ್ಯ ಶ್ಲಾಘನೀಯವಾದುದು. 

ಇದೊಂದು ವಿಶೇಷವಾದ ಕಾರ್ಯಕ್ರಮವಾಗಿದೆ. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನವರು ತಮ್ಮ ವಚನಗಳ ಮೂಲಕ, ಕಾಯಕ ಮಾಡುವ ಮೂಲಕ ಎಲ್ಲರಂತೆ ಜೀವನ ನಡೆಸಿದವರಾಗಿದ್ದರು. 

ಅವರ ವಚನ ಹಾಗೂ ಕಾಯಕನಿಷ್ಠೆ ಸರ್ವರೂ ಮೆಚ್ಚುವಂಥದ್ದು ಎಂದರು. ಅಧ್ಯಕ್ಷತೆ ವಹಿಸಿದ್ದ ವಾರ್ಡಿನ ಸದಸ್ಯ ಪವನ್ ಮೇಟಿ‌ ಮಾತನಾಡಿ, ಅಂಬೇಡ್ಕರ್‌ ನಗರದಲ್ಲಿ ಶರಣರ ಚಿಂತನ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ.

 ಮಾದಾರ ಚೆನ್ನಯ್ಯ ಹಾಗೂ ಡೋಹರ ಕಕ್ಕಯ್ಯನವರ ಜೀವನ ಮಾದರಿಯಾಗಿದೆ. ನಮ್ಮ ಪಟ್ಟಣವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನಮ್ಮ ಪೌರ ಕಾರ್ಮಿಕರು ನಿತ್ಯವೂ ಮಾಡುತ್ತಿದ್ದಾರೆ. 

ಶರಣರ ಹಾದಿಯಲ್ಲಿ ಕಾಯಕ ನಿಷ್ಠೆಯ ಮೂಲಕ ಸರ್ವರೂ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಕಾಯಕವನ್ನು ಮಾಡುತ್ತಿದ್ದಾರೆ. ಬಸವಾದಿ ಶಿವಶರಣರ ಜೀವನ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು.

ತಾಲೂಕು ಶ.ಸಾ.ಪ. ಅಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇವುಂಡಿ ಪ್ರೌಢಶಾಲಾ ಶಿಕ್ಷಕ ಬಿ.ಬಿ. ಬೆನಕಣವಾರಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು. 

ಸದಸ್ಯ ಸಂತೋಷ ಹಿರೇಮನಿ, ನಾಗೇಶ ಹುಬ್ಬಳ್ಳಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ಪರಶುರಾಮ ಕರಡಿಕೊಳ್ಳ, ಗೋವಿಂದಪ್ಪ ದೊಡ್ಡಮನಿ, ನಿಂಗಪ್ಪ ಮಾಯಮ್ಮನವರ, ಯಮನವ್ವ ಮುಂಡವಾಡ, ಗಾಳೆವ್ವ ದೊಡ್ಡಮನಿ, ನಿಂಗರಾಜ ಹಾಲಿನವರ, ಶಂಕರ ಕೂಕನೂರ.

 ಸುರೇಶ ಭಾವಿಹಳ್ಳಿ, ಕೃಷ್ಣ ಸಾಹುಕಾರ, ರಮೇಶಗೌಡ ಪಾಟೀಲ, ಶಿವಪುತ್ರಪ್ಪ ಇಟಗಿ, ಅಕ್ಕಮ್ಮ ಕೊಟ್ಟೂರ ಶೆಟ್ಟರ, ಮುಲ್ಲಾ, ಕಾಶೀನಾಥ ಶಿರಬಡಗಿ, ಚಂದ್ರಕಾಂತ ಮಟ್ಟಿ, ಆರ್.ಕೆ. ರಾಯನಗೌಡ್ರ, ಮಂಜುನಾಥ ಇಟಗಿ, ಮೈಲಪ್ಪ ದೊಡ್ಡಮನಿ, ಸುರೇಶ ಮಾಯಮ್ಮನವರ ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ಕಾರ್ಯಕ್ರಮ ನಿರೂಪಿಸಿದರು. ರತ್ನಾ ಕಾಗನೂರಮಠ ವಂದಿಸಿದರು.