ಕೃಷಿಯಲ್ಲಿ ಅಧಿಕ ಕೀಟನಾಶಕ ಬಳಸದೆ ರೈತರು ಸಾವಯವ ಕೃಷಿಗೆ ಹೆಚ್ಚಿನ ಹೊತ್ತು ನೀಡಬೇಕು ಎಂದು ಸಲಹೆ ನೀಡಿದರು. ಬೇಸಾಯದಲ್ಲಿ ತಾಂತ್ರಿಕ ಕೃಷಿ ಪದ್ಧತಿಗಳನ್ನು ಅಳವಡಿಸಿ ಕೊಂಡು ಕೃಷಿ ಇಲಾಖೆ ಶಿಫಾರಸ್ಸಿಗೆ ಅನುಗುಣವಾಗಿ ರಸಗೊಬ್ಬರಗಳನ್ನು ಬೆಳೆಗಳಿಗೆ ಬಳಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ತಾಲೂಕಿನ ಆರು ಮಂದಿ ಹಾಗೂ ಇಬ್ಬರು ರೈತರಿಗೆ ಜಿಲ್ಲಾ ಮಟ್ಟದ ಆತ್ಮ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪಟ್ಟಣದ ಕೃಷಿ ಇಲಾಖೆ ವತಿಯಿಂದ ನಡೆದ ಸಮಾರಂಭದಲ್ಲಿ ಘಟ್ಟಹಳ್ಳಿ ಜಿ.ಎನ್ .ಮಹೇಶ್, ಚಾಮನಹಳ್ಳಿ ನರಸಿಂಹ ಮೂರ್ತಿ, ಗೊಲ್ಲರದೊಡ್ಡಿ ಗ್ರಾಮದ ಜಿ.ಸಿ.ಕೃಷ್ಣ, ಅವ್ವೇರಹಳ್ಳಿ ಎ.ಎಸ್.ನಾಗೇಶ್‌, ಉಪ್ಪಿನಕೆರೆ ಗ್ರಾಮದ ಸಿ. ಕೃಷ್ಣಪ್ಪ, ಬನ್ನಹಳ್ಳಿ ಶಿವು ಅವರುಗಳಿಗೆ ತಾಲೂಕು ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಅಲ್ಲದೇ, ದೇಶಹಳ್ಳಿ ಡಿ.ಪಿ.ಶೈಲೇಂದ್ರ ಹಾಗೂ ತಗ್ಗಹಳ್ಳಿ ಟಿ.ಜಿ.ರಂತಿಲ್ ಕುಮಾರ್ ಅವರುಗಳಿಗೆ ಜಿಲ್ಲಾ ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರೈತರಿಗೆಪ್ರಶಸ್ತಿ ಪ್ರದಾನ ಮಾಡಿದ ಜಂಟಿ ಕೃಷಿ ನಿರ್ದೇಶಕ ವಿ ಎಸ್ ಅಶೋಕ್ ಮಾತನಾಡಿ, ಕೃಷಿಯಲ್ಲಿ ಅಧಿಕ ಕೀಟನಾಶಕ ಬಳಸದೆ ರೈತರು ಸಾವಯವ ಕೃಷಿಗೆ ಹೆಚ್ಚಿನ ಹೊತ್ತು ನೀಡಬೇಕು ಎಂದು ಸಲಹೆ ನೀಡಿದರು.

ಬೇಸಾಯದಲ್ಲಿ ತಾಂತ್ರಿಕ ಕೃಷಿ ಪದ್ಧತಿಗಳನ್ನು ಅಳವಡಿಸಿ ಕೊಂಡು ಕೃಷಿ ಇಲಾಖೆ ಶಿಫಾರಸ್ಸಿಗೆ ಅನುಗುಣವಾಗಿ ರಸಗೊಬ್ಬರಗಳನ್ನು ಬೆಳೆಗಳಿಗೆ ಬಳಸಬೇಕು ಹಾಗೂ ಬೆಳೆಗಳಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧ ನೇಮಾಡಿ ಬ್ರಾಂಡಿನಲ್ಲಿ ಮಾರಾಟ ಮಾಡಿದರೆ ರೈತರು ಹೆಚ್ಚಿನ ಲಾಭ ಗಳಿಸಬಹುದು ಎಂದು ಕಿವಿಮಾತು ಹೇಳಿದರು.

ಉಪ ಕೃಷಿ ನಿರ್ದೇಶಕ ಮುನೇಗೌಡ ಮಾತನಾಡಿದರು. ಕೃಷಿ ಇಲಾಖೆ ನಿರ್ದೇಶಕಿ ರೇಷ್ಮಾ ರಾಣಿ ಸಂಪನ್ಮೂಲ ಭಾಷಣ ಮಾಡಿದರು. ಸಹಾಯಕ ಕೃಷಿ ನಿರ್ದೇಶಕಿ ಹೆಚ್.ಜಿ.ಪ್ರತಿಭಾ, ಮಂಡ್ಯ ವಿ.ಸಿ.ಫಾರಂ ನ ಹಿರಿಯ ತಾಂತ್ರಿಕ ಸಹಾಯಕ ಶಿವಕುಮಾರ್, ನೇಚರ್ ಪ್ಯೂರ್ ರೈತ ಉತ್ಪಾದನಾ ಕಂಪನಿ ಅಧ್ಯಕ್ಷ ತಿಮ್ಮೇಶ್, ಸಕ್ಕರೆ ನಾಡು ರೈತ ಉತ್ಪಾದನಾ ಕಂಪನಿ ಅಧ್ಯಕ್ಷ ಜಿ.ಸಿ.ಮಹೇಂದ್ರ, ವಿಶ್ವೇಶ್ವರಯ್ಯ ರೈತ ಉತ್ಪಾದನಾ ಕಂಪನಿ ಅಧ್ಯಕ್ಷ ಎನ್‌.ಟಿ .ಪುಟ್ಟಸ್ವಾಮಿ, ಚಿಕ್ಕೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ .ಬಿ .ನಾಗರಾಜು, ಉಪಾಧ್ಯಕ್ಷ ತಮ್ಮಣ್ಣ ಗೌಡ, ಪ್ರಧಾನ ಕಾರ್ಯದರ್ಶಿ ಬಸವರಾಜು, ಪ್ರಜಾಕಿ ಕೆ.ವಿ.ಶ್ರೀನಿವಾಸ, ಜಿಲ್ಲಾ ಪ್ರತಿನಿಧಿ ಜಿ.ಬಿ. ಚಂದ್ರಶೇಖರ ಹಾಗೂ ಸದಸ್ಯರು, ಕೃಷಿ ಅಧಿಕಾರಿಗಳಾದ ಎಸ.ದಯಾನಂದ ಕುಮಾರ್, ಕೆ . ಎನ.ಕರುಣ, ರೂಪಶ್ರೀ, ಭವಾನಿ, ಎನ್.ವಿ.ಕೃಷ್ಣೆಗೌಡ ಭಾಗವಹಿಸಿದ್ದರು.