ಸಾರಾಂಶ
ಹಲವು ಕಾರ್ಯಕರ್ತರು ಮತ್ತು ಬೆಂಬಲಿಗರ ಗುಂಪು ಮೈಸೂರು ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನ, ಶ್ರೀಮಹದೇಶ್ವರ ಬೆಟ್ಟದ ಶ್ರೀಮಹದೇಶ್ವರ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರಿಗೆ ಭಗವಂತ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಕನ್ನಡಪ್ರಭವಾರ್ತೆ ಮದ್ದೂರು
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರು ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ತಮ್ಮ ಕಾರ್ಯಕರ್ತರು, ಬೆಂಬಲಿಗರು ಮತ್ತು ಅಭಿಮಾನಿಗಳೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ತಾಲೂಕಿನ ಹನುಮಂತನಗರದ ತಮ್ಮ ತಂದೆ ದಿ.ಜೀ.ಮಾದೇಗೌಡ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ನಂತರ ಪಟ್ಟಣಕ್ಕೆ ಆಗಮಿಸಿ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.
ಹಲವು ಕಾರ್ಯಕರ್ತರು ಮತ್ತು ಬೆಂಬಲಿಗರ ಗುಂಪು ಮೈಸೂರು ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನ, ಶ್ರೀಮಹದೇಶ್ವರ ಬೆಟ್ಟದ ಶ್ರೀಮಹದೇಶ್ವರ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರಿಗೆ ಭಗವಂತ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.ನಂತರ ಕಾರ್ಯಕರ್ತರು ಮಧು ಅವರ 60ನೇ ಹುಟ್ಟುಹಬ್ಬದ ಅಂಗವಾಗಿ ಮಾಲಾರ್ಪಣೆ ಮಾಡಿ ಕೇಕ್‌ಕತ್ತರಿಸಿ ಸಂಭ್ರಮಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಬೇಡ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದೆ. ಆದರೂ ಸಹ ತಮ್ಮ ಅಭಿಮಾನದಿಂದಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ. ನನ್ನ ಎಲ್ಲಾ ಕಾರ್ಯಕರ್ತ ಬಂಧುಗಳಿಗೂ ಚಿರ ಋಣಿಯಾಗಿರುತ್ತೇನೆ ಎಂದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕದಲೂರು ರಾಮಕೃಷ್ಣ, ತೊರೆಶೆಟ್ಟಹಳ್ಳಿ ಸಿ.ನಾಗೇಗೌಡ, ಪುರಸಭಾ ಮಾಜಿ ಸದಸ್ಯ ಎಂ.ಪಿ.ಅಮರ್‌ಬಾಬು, ಗೊರವನಹಳ್ಳಿ ಸುದೀಪ್, ಸಂದೀಪ್, ಭಾರತೀನಗರ ಶಿಕ್ಷಣ ಸಂಸ್ಥೆ ವಸತಿ ಶಾಲೆ ಪ್ರಾಂಶುಪಾಲ ಪುಟ್ಟಸ್ವಾಮಿ, ಸಿಬ್ಬಂದಿ, ಕೆ.ಪಿ.ಶ್ರೀಧರ, ತಾಪಂ ಮಾಜಿ ಸದಸ್ಯರಾದ ಬಿ.ಗಿರೀಶ್, ಎನ್.ಕೆ.ಭರತೇಶ್, ಗ್ರಾಪಂ ಸದಸ್ಯರಾದ ಮಹೇಶ್, ಮುಖಂಡರಾದ ಅಣ್ಣೂರು ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್‌ಚಂದ್ರ, ಮನು, ಬಸಂತ್, ಮಧು, ನಟರಾಜು, ಕೃಷ್ಣ, ಸಿ.ಎ.ಕೆರೆ ಗ್ರಾಮದ ಯಜಮಾನರಾದ ಶಿವಲಿಂಗೇಗೌಡ, ಪುಟ್ಟೇಗೌಡ, ವಿಜಯ್‌ಕುಮಾರ್, ಶೇಖರ್, ಸಿ.ಕೆ.ಮಹದೇವು, ಕರೀಗೌಡ ಮತ್ತಿತರರು ಇದ್ದರು.