ಮಧ್ವರು ಪ್ರಚಾರ ಮಾಡಿದ ದ್ವೈತ ತತ್ವಶಾಸ್ತ್ರವು ಜೀವ ಮತ್ತು ಪರಮಾತ್ಮನ ನಡುವಿನ ಭೇದ ಸಾರುತ್ತದೆ.

ಕನಕಗಿರಿ: ದ್ವೈತ ಸಿದ್ಧಾಂತದ ಮೂಲಕ ಉಡುಪಿಯಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿ ಹರಿದಾಸ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಗಂಗಾವತಿಯ ಲಯನ್ಸ್ ಶಾಲೆಯ ಮುಖ್ಯಶಿಕ್ಷಕ ಜಗನ್ನಾಥದಾಸ ಮುಕ್ತೆದಾರ್ ಹೇಳಿದರು.

ಅವರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಭೋಗಾಪುರೇಶ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಧ್ವನವಮಿ ಉತ್ಸವದಲ್ಲಿ ಮಂಗಳವಾರ ಮಾತನಾಡಿದರು.

ಮಧ್ವರು ಪ್ರಚಾರ ಮಾಡಿದ ದ್ವೈತ ತತ್ವಶಾಸ್ತ್ರವು ಜೀವ ಮತ್ತು ಪರಮಾತ್ಮನ ನಡುವಿನ ಭೇದ ಸಾರುತ್ತದೆ. ದ್ವೈತ ಮತ ಪ್ರಚಾರಕ್ಕಾಗಿ ಅನೇಕ ಗ್ರಂಥ ರಚಿಸಿ ಮಧ್ವರು ಕರ್ನಾಟಕ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನುಯಾಯಿಗಳನ್ನು ದ್ವೈತ ಮತ ಹೊಂದಿದೆ. ಮಧ್ವಚಾರ್ಯರ ತತ್ವಗಳಿಂದ ಹರಿದಾಸ ಸಾಹಿತ್ಯದ ಬಳವಣಿಗೆಗೆ ಸ್ಫೂರ್ತಿಯಾಗಿವೆ ಎಂದು ತಿಳಿಸಿದರು.

ಕನಕಗಿರಿಯ ಶ್ರೀರಾಘವೇಂದ್ರಸ್ವಾಮಿ ಭಜನಾ ಮಂಡಳಿಯವರು ಮಧ್ವಾಚಾರ್ಯರ ಕುರಿತು ಹಾಡುಗಳನ್ನಾಡಿ ಭಕ್ತಿ ಭಾವ ಮೆರೆದರು.ಇದಕ್ಕೂ ಮೊದಲು ಮಧ್ವರ ಭಾವಚಿತ್ರ ಮೆರವಣಿಗೆಯು ದೇವಸ್ಥಾನದ ಪ್ರಾಂಗಣದಲ್ಲಿ ವೈಭವದಿಂದ ನಡೆಯಿತು. ಗೋವಿಂದಾಚಾರ್ ನವಲಿ ಕುಟುಂಬದಿಂದ ಭಕ್ತರಿಗೆ ತೀರ್ಥ, ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ವಿದ್ವಾನ್ ಶ್ರೀನಾಥ ಆಚಾರ್ ಅವರಿಂದ ಭೋಗಾಪುರೇಶಸ್ವಾಮಿಗೆ ಮಧು ಅಭಿಷೇಕ, ವಾಯುಸ್ತುತಿ ಪುನಶ್ಚರಣ, ಪುಷ್ಪಲಂಕಾರ, ನೈವೈದ್ಯ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ರಾಜ್ಯ ಬ್ರಾಹ್ಮಣ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ವೆಂಕಟೇಶ ಕುಲಕರ್ಣಿ, ನಾರಾಯಣರಾವ್ ಕುಲಕರ್ಣಿ, ಸತ್ಯಬೋಧಚಾರ್, ಮುರುಳಿಧರ ಆಚಾರ್, ಕೆ.ಎಚ್. ಕುಲಕರ್ಣಿ, ಕೃಷ್ಣಚಾರ್ ಕನಕಗಿರಿ, ಸುಮ್ಮಣ್ಣ ಕನಕಗಿರಿ, ಭಜನಾ ಸಂಘದ ಸುರೇಶರೆಡ್ಡಿ ಮಹಲಿನಮನಿ, ಭೀಮರೆಡ್ಡಿ ಓಣಿಮನಿ, ಸುರೇಶ ಬೊಂದಾಡೆ, ಈರಣ್ಣ ಶ್ರೇಷ್ಠಿ, ಹನುಮಂತ ಸಿರಿವಾರ, ಯಂಕಪ್ಪ ಕುಂಡೇರ, ರಾಮಣ್ಣ ಗುಂಜಳ್ಳಿ, ಭೀಮರಾವ್ ದುಮ್ಮಾಳ್,ವಿರೇಶ ವಸ್ತ್ರದ್, ಕರುಣಕಾರರೆಡ್ಡಿ, ನಾಗರೆಡ್ಡಿ ಎಂ, ಚಂದ್ರಶೇಖರ ಹಾದಿಮನಿ ಸೇರಿದಂತೆ ಬ್ರಾಹ್ಮಣ ಸಮಾಜದ ಮಹಿಳೆಯರು ಇದ್ದರು.