ಸಾರಾಂಶ
ಮಾದಿಗ ಸಮಾಜದವರು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಆದರೆ ಈ ಸಮಾಜದಲ್ಲಿ ಶಿಕ್ಷಣ ಹಾಗೂ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಈ ಕೊರೆತೆಗಳ ನಿವಾರಿಸಲು ಎಲ್ಲರೂ ಶ್ರಮಿಸಬೇಕಿದೆ. ಮಾದಿಗ ಸಮಾಜದ ಮುಖಂಡರೊಬ್ಬರಿಗೆ ರಾಜಕೀಯ, ಸಾಮಾಜಿಕ ಸ್ಥಾನ ನೀಡಲು ಇತರೆ ಸಮಾಜದವರು ಶಿಫಾರಸ್ಸು ಮಾಡುವಂತೆ ಸಾಮರಸ್ಯದೊಂದಿಗೆ ಗುರುತಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಹರಿಹರ
ಶಿಕ್ಷಣ ಮತ್ತು ಸಂಘಟನೆ ಅಪ್ಪಿಕೊಳ್ಳುವ ಮೂಲಕ ಮಾದಿಗ ಸಮಾಜದವರು ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ಕೋಡಿಹಳ್ಳಿ ಬೃಹನ್ಮಠದ ಷಡಾಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.ತಾಲೂಕು ಮಾದಿಗ ಸಮಾಜದಿಂದ ಮಾದಾರ ಚನ್ನಯ್ಯ ಜಯಂತಿ ಅಂಗವಾಗಿ ಬುಧವಾರ ನಗರದ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ಜನಜಾಗೃತಿ ಸಮಾವೇಶ ಹಾಗೂ ಸರಳ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಮಾತನಾಡಿ ಮಾದಿಗ ಸಮಾಜದವರು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಆದರೆ ಈ ಸಮಾಜದಲ್ಲಿ ಶಿಕ್ಷಣ ಹಾಗೂ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಈ ಕೊರೆತೆಗಳ ನಿವಾರಿಸಲು ಎಲ್ಲರೂ ಶ್ರಮಿಸಬೇಕಿದೆ. ಮಾದಿಗ ಸಮಾಜದ ಮುಖಂಡರೊಬ್ಬರಿಗೆ ರಾಜಕೀಯ, ಸಾಮಾಜಿಕ ಸ್ಥಾನ ನೀಡಲು ಇತರೆ ಸಮಾಜದವರು ಶಿಫಾರಸ್ಸು ಮಾಡುವಂತೆ ಸಾಮರಸ್ಯದೊಂದಿಗೆ ಗುರುತಿಸಿಕೊಳ್ಳಬೇಕೆಂದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಉಚಿತ ಶಿಕ್ಷಣ, ಹಾಸ್ಟೆಲ್, ವಿದ್ಯಾರ್ಥಿ ವೇತನದ ಜೊತೆಗೆ ಸರ್ಕಾರಗಳಿಂದ ಹತ್ತಾರು ಸೌಲಭ್ಯಗಳ ರೂಪಿಸಿದ್ದು, ಅವುಗಳ ಉಪಯೋಗಿಸಿ ಮಾದಿಗ ಸಮಾಜದವರು ಅಭಿವೃದ್ಧಿ ಹೊಂದಬೇಕೆಂದರು. ಮಾದಿಗ ಸಮಾಜದವರ ಅಭಿವೃದ್ಧಿಗೆ ಸರ್ಕಾರ ಮೀಸಲಿಟ್ಟಿರುವ ಅನುದಾನ ಪೂರ್ಣ ಬಳಕೆಯಾಗದೆ ಅನುದಾನ ಉಳಿಯುತ್ತಿದೆ. ಸಮಾಜದ ಮುಖಂಡರು ಈ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.ಜಿಪಂ ಮಾಜಿ ಅಧ್ಯಕ್ಷ ಎ.ಗೋವಿಂದರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಮಾದಿಗ ಸಮಾಜದವರ ಸಂಖ್ಯೆ ಒಂದು ಕೋಟಿಗೂ ಹೆಚ್ಚಿದೆ, ಆದರೆ ಅದಕ್ಕೆ ತಕ್ಕ ಸ್ಥನ, ಮಾನ ಈ ಸಮಾಜದವರಿಗೆ ದಕ್ಕಿಲ್ಲ, ಇದಕ್ಕೆ ಶಿಕ್ಷಣ ಹಾಗೂ ಜಾಗೃತಿ ಕೊರತೆಯೆ ಕಾರಣವಾಗಿದೆ. ಮಕ್ಕಳ ಶಿಕ್ಷಣಕ್ಕೆ ಪೋಷಕರು ಆದ್ಯತೆ ನೀಡಬೇಕೆಂದರು.
ಸಮಾರಂಭದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು. ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಎಂ.ಎಸ್.ಆನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮಾತೆ ಚರ್ಚ್‌ನ ಫಾ.ಜಾರ್ಜ್, ಸಂಸದ ಜಿ.ಎಂ.ಸಿದ್ದೇಶ್ವರ್, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್, ಮಾಜಿ ಶಾಸಕ ಎಸ್.ರಾಮಪ್ಪ, ಎಸ್.ಎಸ್.ಟ್ರಸ್ಟ್ ನ ಪ್ರಭಾ ಮಲ್ಲಿಕಾರ್ಜುನ್, ಶ್ರೀನಿವಾಸ್, ಎಲ್.ಬಿ.ಹನುಂತಪ್ಪ, ಎಚ್.ಶಿವಪ್ಪ, ಸಿ.ಎನ್.ಹುಲಿಗೇಶ್, ಎನ್.ರುದ್ರಮುನಿ, ಚಂದ್ರಶೇಖರ್ ಪೂಜಾರ್, ಪರಶುರಾಮ, ನಾಗೇಂದ್ರಪ್ಪ ಹಾಗೂ ಇತರರಿದ್ದರು.