ಮಡಿಕೇರಿ ನಗರದ ಹೊರ ವಲಯದಲ್ಲಿರುವ ಜಿಲ್ಲಾ ನ್ಯಾಯಾಲಯವನ್ನು ಮಧ್ಯಾಹ್ನ 2 ಗಂಟೆಗೆ ಸೈನೆಡ್ ಬಾಂಬ್ ಬಳಸಿ ಸ್ಫೋಟಿಸುತ್ತೇವೆ ಎಂಬ ಇಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ ಆತಂಕ ಸೃಷ್ಟಿಯಾಯಿತು.
ಮಡಿಕೇರಿ: ಮಡಿಕೇರಿ ನಗರದ ಹೊರ ವಲಯದಲ್ಲಿರುವ ಜಿಲ್ಲಾ ನ್ಯಾಯಾಲಯವನ್ನು ಮಧ್ಯಾಹ್ನ 2 ಗಂಟೆಗೆ ಸೈನೆಡ್ ಬಾಂಬ್ ಬಳಸಿ ಸ್ಫೋಟಿಸುತ್ತೇವೆ ಎಂಬ ಇಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ ಆತಂಕ ಸೃಷ್ಟಿಯಾಯಿತು. ಸೆಷನ್ಸ್ ಜಡ್ಜ್ ಕಚೇರಿಗೆ ಬಂದ ಬೆದರಿಕೆ ಸಂದೇಶದಿಂದ ಮಂಗಳವಾರ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಪೊಲೀಸರು ನ್ಯಾಯಾಲಯದಲ್ಲಿ ತಪಾಸಣೆ ನಡೆಸಿದರು. ನ್ಯಾಯಲಯದ ಹೊರಗೆ ನ್ಯಾಯಾಧೀಶರು, ವಕೀಲರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಾಯುವ ಪ್ರಸಂಗ ಎದುರಾಯಿತು. ಮಡಿಕೇರಿ ಜಿಲ್ಲಾ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ಬೆದರಿಕೆ ಸಂದೇಶ ಬಂದಿದೆ.