ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಸಂಭ್ರಮ

| Published : Sep 22 2025, 01:02 AM IST

ಸಾರಾಂಶ

ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹತ್ತು ದಿನಗಳ ಸಂಭ್ರಮದ ವಾತಾವರಣ ಕಂಡು ಬರಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ದಸರಾ- ಜನೋತ್ಸವ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹತ್ತು ದಿನಗಳ ಸಂಭ್ರಮದ ವಾತಾವರಣ ಕಂಡುಬರಲಿದೆ.

ಮಡಿಕೇರಿ ನಗರ ದಸರಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ 23ರಿಂದ ಅಕ್ಟೋಬರ್ 2ರವರೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ ಕಾರ್ಯಕ್ರಮಗಳು ಜರುಗಲಿವೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

23ರಂದು ಸಂಜೆ 6ಗಂಟೆಗೆ ಭಾಗಮಂಡಲ ಜಾನ್ ಡ್ಯಾನ್ಸ್ ಗ್ಯಾಲರಿ ತಂಡದಿಂದ ನೃತ್ಯ ವೈಭವ, ಮೈಸೂರಿನ ನಿತ್ಯ ನಿರಂತರ ಟ್ರಸ್ಟ್ನ ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ಬೆಂಗಳೂರು ಸ್ವರ ಸಿಂಚನ ತಂಡದಿಂದ ಸಂಗೀತ ರಸಮಂಜರಿ.

24ರಂದು ಬೆಳಿಗ್ಗೆ 10 ಗಂಟೆಗೆ ಕಾಫಿ ದಸರಾ, ಸಂಜೆ 6 ಗಂಟೆಯಿಂದ ಅಂತರ ರಾಷ್ಟ್ರೀಯ ಖ್ಯಾತಿಯ ಹರಿ, ಚೇತನ ಮತ್ತು ತಂಡದವರಿಂದ ಆಕರ್ಷಕ ಕಥಕ್ ನೃತ್ಯ, ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯಿಂದ ಸಾಂಸ್ಕೃತಿಕ ವೈವಿಧ್ಯ, ಮಡಿಕೇರಿ ಡ್ಯಾನ್ಸ್ ಲ್ಯಾಬ್ ಫಿಟ್‌ನೆಸ್ ಸ್ಟುಡಿಯೋದಿಂದ ನೃತ್ಯ ವೈವಿಧ್ಯ.

25ರಂದು ಬೆಳಗ್ಗೆ 10 ಗಂಟೆಗೆ ಕವಿಗೋಷ್ಠಿ, ಸಂಜೆ 6 ಗಂಟೆಯಿಂದ ಕೂರ್ಗ್ ಸನ್‌ರೈಸ್ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ, ನಾಟ್ಯ ಮಯೂರಿ ಮೆಲೋಡೀಸ್ ತಂಡದವರಿಂದ ಸಾಂಸ್ಕೃತಿಕ ವೈವಿಧ್ಯ, ಸುಳ್ಯದ ಸುಗಿಪು ಜಾನಪದ ತಂಡದಿಂದ ಜಾನಪದ ವೈವಿಧ್ಯ, ಹೆಜ್ಜೆನಾದ ಮಂಗಳೂರು ತಂಡದಿಂದ ಸಾಂಸ್ಕೃತಿಕ ವೈವಿಧ್ಯ.

26ರಂದು ಸಂಜೆ 6ಗಂಟೆಯಿಂದ ಕುಶಾಲನಗರ ಕುಂದನ ನೃತ್ಯಾಲಯದಿಂದ ನೃತ್ಯ ವೈವಿಧ್ಯ, ಭಾರತೀಯ ಸಂಗೀತ ನೃತ್ಯ ಕಲಾಶಾಲೆಯಿಂದ ಸಾಂಸ್ಕೃತಿಕ ವೈವಿಧ್ಯ, ಕನ್ನಡ ಸಿರಿ ಕಲಾ ವೃಂದದವರಿಂದ ಸಂಗೀತ ರಸಮಂಜರಿ.

27ರಂದು ಯುವ ದಸರಾ ನಡೆಯಲಿದೆ. 28ರಂದು ಬೆಳಿಗ್ಗೆ 10ಗಂಟೆಗೆ 8ನೇ ವರ್ಷದ ಮಹಿಳಾ ದಸರಾ. ಸಂಜೆ 6ಗಂಟೆಯಿಂದ ಹಾಸನದ ನಾಟ್ಯ ನಿನಾದ ಡ್ಯಾನ್ಸ್ ಅಕಾಡೆಮಿಯವರಿಂದ ನೃತ್ಯ ವೈವಿಧ್ಯ, ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ನೃತ್ಯ ವೈವಿಧ್ಯ, ಕೊಡಗು ಗೌಡ ಮಹಿಳಾ ಒಕ್ಕೂಟದವರಿಂದ ಸಾಂಸ್ಕೃತಿಕ ವೈವಿಧ್ಯ, ಹಿಂದೂ ಮಲಯಾಳಿ ಸಂಘದವರಿಂದ ನೃತ್ಯ ವೈವಿಧ್ಯ, ಕೊಡಗು ಜಿಲ್ಲಾ ಕುಲಾಲ ಸಂಘದವರಿಂದ ಸಾಂಸ್ಕೃತಿಕ ವೈಭವ.

29ರಂದು ಬೆಳಿಗ್ಗೆ 10 ಗಂಟೆಯಿಂದ 6ನೇ ವರ್ಷದ ಜಾನಪದ ದಸರಾ. ಸಂಜೆ 6ಗಂಟೆಯಿಂದ ಮಂಗಳೂರು ಯಶಸ್ವಿ ಡ್ಯಾನ್ಸ್ ಗ್ರೂಪ್‌ನವರಿಂದ ತುಳುನಾಡು ಸಾಂಸ್ಕೃತಿ ವೈವಿಧ್ಯ, ಹುಬ್ಬಳ್ಳಿಯ ಭೂಮಿಕ, ದೀಪಿಕಾ ತಂಡದವರಿಂದ ಗಾನಸುಧೆ, ವಿರಾಜಪೇಟೆ ನಾಟ್ಯಾಂಜಲಿ ನೃತ್ಯ ಸಂಸ್ಥೆಯವರಿಂದ ನೃತ್ಯ ವೈವಿಧ್ಯ.

30ರಂದು ಬೆಳಿಗ್ಗೆ 10 ಗಂಟೆಯಿಂದ 12ನೇ ವರ್ಷದ ಮಕ್ಕಳ ದಸರಾ. ಸಂಜೆ 6ಗಂಟೆಯಿಂದ ‘ಸು ಫ್ರಂ ಸೋ’ ಸಿನಿಮಾ ಖ್ಯಾತಿಯ (ಬಾವ) ಪುಷ್ಪರಾಜ್ ಬೊಳ್ಳಾರ್ ತಂಡದಿಂದ ಕಾಮಿಡಿ, ಮೈಸೂರಿನ ಸುಮಾ ರಾಜ್‌ಕುಮಾರ್ ಅವರಿಂದ ಮಾತನಾಡುವ ಗೊಂಬೆ ಪ್ರದರ್ಶನ( ಹಾಸ್ಯ), ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡದವರಿಂದ ನೃತ್ಯ ವೈವಿಧ್ಯ, ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದವರಿಂದ ನೃತ್ಯ ವೈವಿಧ್ಯ.

ಅ.1ರ ಆಯುಧಾ ಪೂಜಾ ಸಮಾರಂಭದಂದು ಸಂಜೆ 6ಗಂಟೆಯಿಂದ ಬೆಂಗಳೂರಿನ ಪೊನಿಧ್ವನಿ ತಂಡದಿಂದ ಕೊಡಗಿನ ಸಂಸ್ಕೃತಿ ವೈಭವ, ಮೈಸೂರಿನ ರಾಜೇಶ್ ಪಡಿಯಾರ್ ತಂಡದಿಂದ ಗಾನಸುಧೆ, ವಿರಾಜಪೇಟೆ ಟೀಂ ಇಂಟೋಪೀಸ್ ತಂಡದಿಂದ ನೃತ್ಯ ವೈವಿಧ್ಯ, ನಂತರ ಖ್ಯಾತ ಕಲಾವಿದರಿಂದ ಸಂಗೀತ ರಸಸಂಜೆ ಕಾರ್ಯಕ್ರಮಗಳು ನಡೆಯಲಿವೆ.

ಅ.2ರ ವಿಜಯದಶಮಿಯಂದು ಸಂಜೆ 6 ಗಂಟೆಯಿಂದ ಸರಿಗಮಪ ಖ್ಯಾತಿಯ ಕಲಾವಿದರಿಂದ ಗಾನ ಲಹರಿ, ಬೆಂಗಳೂರಿನ ಮಿಲನ್ ಮ್ಯೂಸಿಕಲ್ ಈವೆಂಟ್ಸ್ ತಂಡದವರಿಂದ ಸಾಂಸ್ಕೃತಿಕ ವೈವಿಧ್ಯ, ಹೈದರಾಬಾದ್‌ನ ಋತ್ವಿಕ್ ವೆಂಕಟ್ ಅವರಿಂದ ಕೂಚುಪುಡಿ ನೃತ್ಯ. ಹಾಗೂ ಖ್ಯಾತ ಕಲಾವಿದರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಪ್ರತಿದಿನ ಇತರ ಸ್ಥಳೀಯ ಹಾಗೂ ಹೊರ ಜಿಲ್ಲಾ ಕಲಾವಿದರುಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂತೋಷ್ ಮಾಹಿತಿ ನೀಡಿದ್ದಾರೆ.