ಕೂರ್ಗ್ ಹ್ಯಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ ಅಧೀನದಲ್ಲಿ ನಗರದ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ 3 ದಿನಗಳ ಕಾಲ ಆಯೋಜಿತ 2ನೇ ಆವೃತ್ತಿಯ ‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ಮಡಿಕೇರಿ : ಕೂರ್ಗ್ ಹ್ಯಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ ಅಧೀನದಲ್ಲಿ ನಗರದ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ 3 ದಿನಗಳ ಕಾಲ ಆಯೋಜಿತ 2ನೇ ಆವೃತ್ತಿಯ ‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅವರು ಹಾಕಿ ಸ್ಟಿಕ್‌ನಿಂದ ಚೆಂಡನ್ನು ಗೋಲ್ ಪೋಸ್ಟ್‌ಗೆ ಬಾರಿಸುವ ಮೂಲಕ ಹಾಕಿ ಪಂದ್ಯಾಳಿಯನ್ನು ಉದ್ಘಾಟಿಸಿ ಶುಭ ಕೋರಿದರು.ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಬರಗಾಲ ಎದುರಾಗಿದ್ದರೂ ಕ್ರೀಡೆಗಳಿಗೆ ಯಾವುದೇ ಬರವಿಲ್ಲ. ಪಾಂಡಂಡ ಕುಟ್ಟಪ್ಪ ಅವರು ಹಾಕಿ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ವಿವಿಧ ಕ್ರೀಡೆಗಳು ಜಿಲೆಯಲ್ಲಿ ತಳವೂರಲು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.

ಹಾಕಿ ಕೂರ್ಗ್ ಸಂಸ್ಥೆಯ ಸ್ಥಾಪಕ ಸದಸ್ಯ ಪಾರ್ಥ ಚಂಗಪ್ಪ ಮಾತನಾಡಿ, ಇಂದು ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದೆ. ಯುವ ಕ್ರೀಡಾಪಟುಗಳನ್ನು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಾಕಿ ಕೂರ್ಗ್ ಸಂಸ್ಥೆ ಅಧ್ಯಕ್ಷ ಲವ ಕುಮಾರ್ ಮಾತನಾಡಿ, ಅಜ್ಜಿಕುಟ್ಟಿರ ಹಾಕಿ ಪಂದ್ಯಾವಳಿಯಲ್ಲಿ ಪ್ರೀ ಕ್ವಾಟರ್ ಪಂದ್ಯಾವಳಿಯ ಬಳಿಕ ಎಲ್ಲಾ ಪಂದ್ಯಾಟವನ್ನು ಟರ್ಫ್ ಮೈದಾನದಲ್ಲಿ ಆಯೋಜಿಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕೂರ್ಗ್ ಹಾಕ್ಸ್ ಕ್ಲಬ್ ಸ್ಥಾಪಕ ಮೇಕೇರಿರ ಬೆಲ್ಲು ಕುಟ್ಟಪ್ಪ ಅವರು ಪಂದ್ಯಾವಳಿ ನಿರ್ದೇಶಕ ಕರವಂಡ ಅಪ್ಪಣ್ಣ, ಹಿರಿಯ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ವಾಂಡರರ್ಸ್ ಕ್ಲಬ್ ಸದಸ್ಯ ಬಾಬು ಸೋಮಯ್ಯ, ಕೋಟೇರ ನಾಣಯ್ಯ, ಬೊಪ್ಪಂಡ ಶ್ಯಾಮ್ ಪೂಣಚ್ಚ, ಹಾಕಿ ಕೂರ್ಗ್ ಉಪಾಧ್ಯಕ್ಷೆ ಯಮುನಾ ಚಂಗಪ್ಪ, ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಪ್ರಮುಖರಾದ ಮೂಸಾ, ಜಾವಿದ್, ರಾಜಶೇಖರ್, ಹಿರಿಯ ಪತ್ರಕರ್ತ ಕಾಯಪಂಡ ಶಶಿ ಸೋಮಯ್ಯ, ಸಾಯಿ ಕ್ರೀಡಾ ಶಾಲೆ ನಿರ್ದೇಶಕ ಮಿನ್ನಿ ವರ್ಗೀಸ್ ಮತ್ತಿತರರಿದ್ದರು.