ಸಾರಾಂಶ
ಕೊಡಗಿನ ಹೆಸರಾಂತ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್‌ನ ನವೀಕೃತ ಚಿನ್ನದ ಮಳಿಗೆ ಸಿಲ್ವೇರಿಯಾ ಶೋರೂಂ ಅನ್ನು ಶುಕ್ರವಾರ ಚಿತ್ರನಟ ರಮೇಶ್ ಅರವಿಂದ್ ಅನಾವರಣಗೊಳಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನಮ್ಮಲ್ಲಿರುವುದನ್ನು ಧಾರಾಳವಾಗಿ ಹಾಗೂ ನಿಸ್ವಾರ್ಥವಾಗಿ ಇನ್ನೊಬ್ಬರಿಗೆ ನೀಡಿ ಎಂದು ಚಿತ್ರನಟ ರಮೇಶ್ ಅರವಿಂದ್ ಸಲಹೆ ನೀಡಿದರು.ಕೊಡಗಿನ ಹೆಸರಾಂತ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್‌ನ ನವೀಕೃತ ಚಿನ್ನದ ಮಳಿಗೆ ಸಿಲ್ವೇರಿಯಾ ಶೋರೂಂ ಅನ್ನು ಶುಕ್ರವಾರ ಅನಾವರಣ ಮಾಡಿ ಮಾತನಾಡಿದ ಅವರು, ನಿಸ್ವಾರ್ಥದಿಂದ ಮಾಡಿದ ಸೇವೆ ಬದುಕಿನಲ್ಲಿ ಸಂತೋಷ ತರುತ್ತದೆ ಎಂದರು.
ಒಂದು ಉದ್ಯಮ ಅಭಿವೃದ್ಧಿಯತ್ತ ಸಾಗಲು ಏನು ಕಾರಣ ಎಂಬುದಕ್ಕೆ ಮುಳಿಯ ಜ್ಯುವೆಲ್ಸ್ ಉದಾಹರಣೆ. ಬೇರನ್ನು ಗಟ್ಟಿಯಾಗಿಸಿ ಆವಿಷ್ಕಾರಿಕ ಪರಿಕಲ್ಪನೆಯಲ್ಲಿ ಸಾಗಿದರೆ ಯಾವುದೇ ಉದ್ಯಮದಲ್ಲಿ ಮೇಲೇರಲು ಸಾಧ್ಯ ಎಂದು ಹೇಳಿದರು.ಕಾವೇರಿ ಹಲವು ಜೀವ ರಾಶಿಗಳಿಗೆ ನೀರು ನೀಡುತ್ತದೆ. ಇದರಿಂದಲೇ ಕಾವೇರಿಯನ್ನು ಜೀವನದಿ ಎಂದು ಕರೆಯಲಾಗುತ್ತದೆ. ಕಾವೇರಿ ನದಿಯ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ತಲಕಾವೇರಿಯಿಂದ ಕಾವೇರಿ ತೀರ್ಥವನ್ನು ತಂದು ಮುಳಿಯ ನವೀಕೃತ ಮಳಿಗೆಗೆ ಹಾಕುವ ಮೂಲಕ ಚಾಲನೆ ನೀಡಲಾಯಿತು.ಮುಳಿಯ ಜ್ಯುವೆಲ್ಸ್ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಇನ್ನಷ್ಟು ಮಳಿಗೆಯನ್ನು ತೆರೆಯಲಾಗುವುದು ಎಂದರು.
ಮುಳಿಯ ಜ್ಯುವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ನಾರಾಯಣ ಇದ್ದರು.