ಮಡಿಕೇರಿ: ಎನರ್ಜಿ ಡ್ರಿಂಕ್‌ ಸೇವಿಸಿ ಯುವಕ ಅಸ್ವಸ್ಥ

| Published : Feb 06 2024, 01:33 AM IST

ಮಡಿಕೇರಿ: ಎನರ್ಜಿ ಡ್ರಿಂಕ್‌ ಸೇವಿಸಿ ಯುವಕ ಅಸ್ವಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿಯ ಜೋತಿ ನಗರದ ನಿವಾಸಿ ವಿನೋದ್ ಎಂಬವರು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಸಮೀಪ ಇರುವ ಅಂಗಡಿಯಲ್ಲಿ ಎನರ್ಜಿ ಡ್ರಿಂಕ್ ತೆಗೆದುಕೊಂಡು ಕುಡಿದಿದ್ದಾರೆ. ಕುಡಿಯುವ ಸಂದರ್ಭದಲ್ಲಿ ಅದರ ಒಳಗೆ ಲೋಳೆಯಂಥ ವಸ್ತು ಪತ್ತೆಯಾಗಿದೆ. ಪಾನೀಯ ಹೊಟ್ಟೆ ಸೇರುತ್ತಿದ್ದಂತೆಯೇ ವಿನೋದ್‌ಗೆ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಡಿಕೇರಿ: ಜನಪ್ರಿಯ ಪೇಯ ಎನರ್ಜಿ ಡ್ರಿಂಕ್ ಸೇವಿಸಿದ ಕೂಡಲೇ ಯುವಕನೊಬ್ಬ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.ಮಡಿಕೇರಿಯ ಜೋತಿ ನಗರದ ನಿವಾಸಿ ವಿನೋದ್ ಎಂಬವರು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಸಮೀಪ ಇರುವ ಅಂಗಡಿಯಲ್ಲಿ ಎನರ್ಜಿ ಡ್ರಿಂಕ್ ತೆಗೆದುಕೊಂಡು ಕುಡಿದಿದ್ದಾರೆ. ಎನರ್ಜಿ ಡ್ರಿಂಕ್ ಟಿನ್ ಓಪನ್ ಮಾಡುತ್ತಿದಂತೆ ಕೆಟ್ಟ ವಾಸನೆ ಬಂದಿದೆಯಂತೆ. ಆದರೂ ಅವರು ಇದು ಇದೇ ರೀತಿ ಇರುತ್ತದೆಯೇನೋ ಅಂದುಕೊಂಡು ಕುಡಿದಿದ್ದಾರೆ.ಕುಡಿಯುವ ಸಂದರ್ಭದಲ್ಲಿ ಅದರ ಒಳಗೆ ಲೋಳೆಯಂಥ ವಸ್ತು ಪತ್ತೆಯಾಗಿದೆ. ಪಾನೀಯ ಹೊಟ್ಟೆ ಸೇರುತ್ತಿದ್ದಂತೆಯೇ ವಿನೋದ್‌ಗೆ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.ಎನರ್ಜಿ ಡ್ರಿಂಕ್‌ ಕ್ಯಾನ್ ಪರಿಶೀಲಿಸಿದಾಗ ಇದರ ಎಕ್ಸ್‌ ಪೈಯರಿ ಡೇಟ್ ಇನ್ನೂ ಕೂಡಾ ಮುಗಿಯದಿರುವುದು ಕಂಡು ಬಂದಿದೆ. ಆದರೆ ಕ್ಯಾನ್‌ ಒಳಗೆ ಮಾತ್ರ ಪಂಗಸ್ ರೀತಿಯ ಲೋಳೆಯಂಥ ಗಟ್ಟಿವಸ್ತು ಪತ್ತೆಯಾಗಿದೆ.ಈ ಸಂಬಂದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು. ಅಂಗಡಿಯಿಂದ ಖರೀದಿಸಿದ ಎನರ್ಜಿ ಡಿಂಕ್ ನ ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರವೆ ಪ್ರಕಣದ ನೈಜಾಂಶ ಬೆಳಕಿಗೆ ಬರಲಿದೆ. ಸದ್ಯ ವಿನೋದ್‌ಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಆಯುರ್ವೇದ ವೈದ್ಯರಿಗೆನಿರಂತರ ಶಿಕ್ಷಣ ಕಾರ್ಯಕ್ರಮ

ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ), ಕೊಡಗು ಸಂಘದ ವತಿಯಿಂದ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣ ಕಾರ್ಕ್ರಯಮ ಏರ್ಪಡಿಸಲಾಗಿತ್ತು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಕುಮಾರ್, ಆಯುರ್ವೇದದಲ್ಲಿ ಮಧುಮೇಹದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಹೊಸ ಯುಕ್ತಿ ಹಳೆ ತತ್ವಗಳನ್ನು ಒಳಗೂಡಿಸಿಕೊಂಡು ಹೇಗೆ ನಮ್ಮ ಸುತ್ತಲೂ ಲಭ್ಯವಿರುವ ಗಿಡಮೂಲಿಕೆಗಳನ್ನು ಸೂಕ್ತವಾಗಿ ಬಳಸುವುದರಿಂದ, ಸೂಕ್ತ ಯೋಗಾಭ್ಯಾಸದಿಂದ ಮಧುಮೇಹವನ್ನು ಯಾವ ರೀತಿಯಲ್ಲಿ ನಿಯಂತ್ರಿಸಬಹುದು ಎಂದು ತಿಳಿಸಿದರು.ನೀಮಾ ಕೊಡಗು ಅಧ್ಯಕ್ಷ ಡಾ. ರಾಜಾರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾಯಾ೯ಗಾರದ ಪ್ರಯೋಜನವನ್ನು ಕೊಡಗಿನ 30ಕ್ಕೂ ಹೆಚ್ಚು ಆಯುಷ್ ವೈದ್ಯರು ಪಡೆದುಕೊಂಡರು. ಡಾ. ಸೌಮ್ಯ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು. ಡಾ. ಅನುಷಾ ವಂದಿಸಿದರು.ನೀಮಾ ಕೊಡಗು ಮಹಿಳಾ ಘಟಕದ ಅಧ್ಯಕ್ಷೆ ಡಾ. ಶೈಲಜಾ ರಾಜೇಂದ್ರ, ಹಿರಿಯ ವೈದ್ಯರಾದ ಡಾ. ಉದಯಶಂಕರ್, ಡಾ. ಉದಯಕುಮಾರ್, ಡಾ. ಶೈಲಜಾ ಮುರಳೀಧರ, ಡಾ. ರಾಜೇಂದ್ರ, ಡಾ. ಷೆನೋಯ್, ಡಾ. ವಿವೇಕ್ ಮತ್ತು ಇತರರು ಇದ್ದರು.