ಮಡಿವಾಳೇಶ್ವರ ಮಠದ ರಥದ ಕಳಸಾರೋಹಣ ಪೂಜೆ

| Published : Jan 06 2024, 02:00 AM IST

ಸಾರಾಂಶ

ಜ.೮ ರಂದು ಜರುಗಲಿರುವ ಮಹಾ ರಥೋತ್ಸವದ ನಿಮಿತ್ತ ಗುರುವಾರ ಪಟ್ಟಣದ ಜವಳಿ ಕೂಟಿನಲ್ಲಿ ರಥದ ಕಳಸಾರೋಹಣ ಪೂಜೆ ಜರುಗಿತು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪಟ್ಟಣದ ಶ್ರೀ ಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜ.೮ ರಂದು ಜರುಗಲಿರುವ ಮಹಾ ರಥೋತ್ಸವದ ನಿಮಿತ್ತ ಗುರುವಾರ ಪಟ್ಟಣದ ಜವಳಿ ಕೂಟಿನಲ್ಲಿ ರಥದ ಕಳಸಾರೋಹಣ ಪೂಜೆ ಜರುಗಿತು. ಮಠದ ಶ್ರೀ ಮಡಿವಾಳೇಶ್ವರ ಸ್ವಾಮೀಜಿ, ಅರಳಿಕಟ್ಟಿಯ ಶಿಮೂರ್ತಿ ಸ್ವಾಮೀಜಿ, ವೇಮೂ. ಗದಗಯ್ಯ ರುದ್ರಾಕ್ಷೀಮಠ ಕಳಸಕ್ಕೆ ಪೂಜೆ ಸಲ್ಲಿದರು. ಮಠದಿಂದ ಕಳಸ, ಬೆಳ್ಳಿ ನವಿಲನ್ನು, ಪಲ್ಲಕ್ಕಿ ಉತ್ಸವದೊಂದಿಗೆ ಮೆರವಣಿಗೆ ಮೂಲಕ ತಂದು ಕಳಸಾರೋಹಣ ನೆರವೇರಿಸಲಾಯಿತು. ಮಡಿವಾಳೇಶ್ವರ ಮೂರ್ತಿಯ ಮೆರವಣಿಗೆ ರಾಮನಗೌಡ ಪಾಟೀಲರ ಮನೆಗೆ ತೆರಳಿ ಪೂಜೆ ಮಾಡಲಾಯಿತು. ಭಕ್ತ ಸಣ್ಣಬಸಪ್ಪ ಕುಡಸೋಮಣ್ಣವರ, ಈಶ್ವರ ಕೊಪ್ಪದ, ವಿಜಯ ಬೆಳವಡಿ, ಮಹಾಂತೇಶ ಅಕ್ಕಿ, ಗಂಗಪ್ಪ ತುರಮರಿ, ಉಳವಪ್ಪ ಉಂಡಿ, ಪುಂಡಲೀಕ ಕಡಕೋಳ, ಶಿವಲಿಂಗಯ್ಯ ಎಣಗಿಮಠ, ಬಸವರಾಜ ಕಲಾದಗಿ, ಉಳವೇಶ ಚಲವಾದಿ, ಮಾರುತಿ ಹೊಸಮನಿ, ಈರಪ್ಪ ಹಣಸಿ, ರವಿ ಲಕ್ಕನ್ನವರ, ಈಶ್ವರ ವಾಲಿ, ಗುಂಡಪ್ಪ ಸನದಿ, ರುದ್ರಪ್ಪ ತುರಮರಿ, ಮಹಾದೇವ ಯಡಳ್ಳಿ, ರವಿ ಹೊಸಮನಿ, ಮೌನೇಶ ಬಡಿಗೇರ, ಮಲಕಾರ್ಜುನ ಕಡಕೋಳ ಮುಂತಾದವರು ಇದ್ದರು.