ಸಾರಾಂಶ
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಫೆ.1 ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ.
ಚಳ್ಳಕೆರೆ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಫೆ.1 ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಿರಸ್ತೇದಾರ್ ಸದಾಶಿವಪ್ಪ ತಿಳಿಸಿದರು.
ಸೋಮವಾರ ಮಧ್ಯಾಹ್ನ ತಾಲೂಕು ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಶ್ರೇಷ್ಠದಾರ್ಶನಿಕರಾದ ಮಡಿವಾಳ ಮಾಚಿದೇವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಅವರು ಉಂಟು ಮಾಡಿದ ಹಲವಾರು ಬದಲಾವಣೆಯಿಂದ ಇಂದು ಸಮಾಜದಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಿದೆ. ಈ ಜಯಂತಿ ಆಚರಣೆಗೆ ಮಡಿವಾಳ ಸಮುದಾಯದ ಮುಖಂಡರು ಕೈಜೋಡಿಸುವಂತೆ ಮನವಿ ಮಾಡಿದರು.ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಬುಡ್ನಹಟ್ಟಿ ನಾಗರಾಜು ಮಾತನಾಡಿ, ನಮ್ಮ ಸಮುದಾಯದ ಆರಾಧ್ಯ ದೈವ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಸಮುದಾಯಕ್ಕೆ ಹೆಚ್ಚು ಸಂತಸವನ್ನುಂಟು ಮಾಡಿದೆ. ಫೆ.1ರ ಜಯಂತಿ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ಆಗಮಿಸುವರು. ಸಮುದಾಯದವತಿಯಿಂದ ಪ್ರತ್ಯೇಕವಾಗಿ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ ನಡೆಸಿ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಲಾಗುವುದು ಎಂದರು.
ಪೂರ್ವಭಾವಿ ಸಭೆಯಲ್ಲಿ ಗೌರವಾಧ್ಯಕ್ಷ ಎನ್.ಮಂಜುನಾಥ, ಯುವಘಟಕದ ಅಧ್ಯಕ್ಷ ಕರೀಕೆರೆ ನಾಗರಾಜು, ಖಜಾಂಚಿ ಪ್ರಕಾಶ್, ಮುಖಂಡರಾದ ಎಂ.ಎನ್.ಮೃತ್ಯುಂಜಯ, ಎಂ.ರಘುನಾಗ, ಓಂಕಾರಪ್ಪ, ರಾಜು, ರಂಗಪ್ಪ, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಬಿಸಿಎಂ ಅಧಿಕಾರಿ ದಿವಾಕರ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))