ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಗೌಡ ಯುವ ವೇದಿಕೆಯಿಂದ ದ್ವಿತೀಯ ಆವೃತ್ತಿಯ ಗೌಡ ಕ್ರಿಕೆಟ್ ಟಿ-10 ಪ್ರೀಮಿಯರ್ ಲೀಗ್ ಪಂದ್ಯಾವಳಿ ಮತ್ತು ಗೌಡ ಜನಾಂಗದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ‘ಗ್ರಾಮ ಪೈಪೋಟಿ’ ಸ್ಪರ್ಧಾ ಕಾರ್ಯಕ್ರಮವನ್ನು ಏಪ್ರಿಲ್ ನಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ವೇದಿಕೆಯ ಕಾರ್ಯದರ್ಶಿ ರಿಷಿತ್ ಮಾದಯ್ಯ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಏ.15 ರಿಂದ ಏ.28ರ ವರೆಗೆ ನಡೆಯಲಿದ್ದು, ಏ.26 ರಿಂದ 28 ರವರೆಗೆ ಸಂಜೆಯ ವೇಳೆ ಗ್ರಾಮ ಪೈಪೋಟಿ ಕಾರ್ಯಕ್ರಮ ನಡೆಯಲಿದೆ ಎಂದರು.ಅರೆಭಾಷಾ ಗೌಡ ಜನಾಂಗದ ಸಂಸ್ಕೃತಿಯನ್ನು ಪ್ರತ್ರಿಬಿಂಬಿಸುವ ಚಿಂತನೆಯಡಿ 10 ನಿಮಿಷಗಳ ‘ನೃತ್ಯ ರೂಪಕ’ದ ಗ್ರಾಮ ಪೈಪೋಟಿಯನ್ನು ರೂಪಿಸಲಾಗಿದೆ. ಈ ನೃತ್ಯ ರೂಪಕದಲ್ಲಿ ಅರೆಭಾಷೆಯ ಹಾಡಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.ಈ ಗ್ರಾಮ ಪೈಪೋಟಿಯಲ್ಲಿ ಜಿಲ್ಲಾ ವ್ಯಾಪ್ತಿಯ ಗ್ರಾಮವಾರು ತಂಡಗಳು ಪಾಲ್ಗೊಳ್ಳಬಹುದಾಗಿದ್ದು, ಒಂದು ಗ್ರಾಮದಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸ ಬಹುದಾಗಿದೆ. ಒಂದು ತಂಡದಲ್ಲಿ ಕನಿಷ್ಟ 5 ರಿಂದ ಗರಿಷ್ಠ 15 ಸದಸ್ಯರನ್ನು ಹೊಂದಲು ಅವಕಾಶ ನೀಡಲಾಗಿದೆ. ಆಸಕ್ತ ತಂಡಗಳು ಮಾ.30 ರೊಳಗೆ 1000 ನೋಂದಣಿ ಶುಲ್ಕ ಪಾವತಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಕಾಂಚನ ಗೌಡ 9008198955, ಕುಕ್ಕೆರ ಲಕ್ಷ್ಮಣ್ 9482197200, ಸೋನಿ ಪರಿಚನ 8867021167, ಪರ್ಲಕೋಟಿ ಡೀನಾ 9535915916 ಇವರುಗಳನ್ನು ಸಂಪರ್ಕಿಸಬಹುದೆಂದರುಗ್ರಾಮ ಪೈಪೋಟಿಯಲ್ಲಿ 50-60 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಜೇತ ತಂಡಕ್ಕೆ ಗೌಡ ನಟರಾಜ ಪುರಸ್ಕಾರ ನೀಡಲಾಗುವುದು. ಇದರೊಂದಿಗೆ 50 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ತಂಡಗಳಿಗೆ ನಗದು ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ವಿವರಿಸಿದರು.ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಸಹ ಕಾರ್ಯದರ್ಶಿ ಕೆದಂಬಾಡಿ ಕಾಂಚನ ಗೌಡ, ವೇದಿಕೆಯ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್ ತಿಮ್ಮಯ್ಯ ಹಾಗೂ ವೇದಿಕೆಯ ನಿರ್ದೇಶಕ ದೇರಳ ನವೀನ್ ಸುದ್ದಿಗೋಷ್ಠಿಯಲ್ಲಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))