ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು, ಅರಸ ಮೇಲಲ್ಲ ಅಗಸ ಕೀಳಲ್ಲ ಎನ್ನುವ ಸಮದೃಷ್ಟಿಯಿಂದ ಎಲ್ಲರೂ ಒಂದೇ ಎಂದು ಪ್ರತಿಪಾದಿಸಿದ ಮಡಿವಾಳ ಮಾಚಿದೇವ 12ನೇ ಶತಮಾನದ ಶರಣರ ಪರಂಪರೆಯಲ್ಲಿ ಪ್ರಕಾಶಮಾನವಾಗಿ ಕಂಡವರು ಬಸವಣ್ಣನವರ ಅನುಯಾಯಿ ಶರಣ ಮಾಚಿದೇವರು. ಶರಣರಲ್ಲೇ ವೀರರಾಗಿದ್ದ ಅವರು, ವಚನಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಿದರು ಎಂದು ಹಿರಿಯ ಪತ್ರಕರ್ತ ಜಯರಾಮ ಶೆಟ್ಟಿ ಹೇಳಿದರು.ಸ್ಥಳೀಯ ದೋಬಿ ಘಾಟದಲ್ಲಿ ಜರುಗಿದ ದೋಬಿ ಘಾಟ್ ದ್ವಾರ ಬಾಗಿಲು (ಕಮನಾ) ಉದ್ಘಾಟನೆ ಹಾಗೂ ಮಡಿವಾಳ ಮಾಚಿದೇವರ 904ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಲ್ಲಿಕಾರ್ಜುನಯ್ಯ ಸ್ವಾಮಿಗಳ ಶಿಷ್ಯನಾಗಿ ಅಪಾರ ಜ್ಞಾನ, ಶಿಕ್ಷಣ ಪಡೆದುಕೊಂಡಿದ್ದ ಮಾಚಿದೇವರು, ಕಲ್ಯಾಣದಲ್ಲಿ ಕ್ರಾಂತಿ ಸಂಭವಿಸಿದಾಗ ಬಸವಣ್ಣನವರ ವಚನಗಳನ್ನು ರಕ್ಷಣೆ ಮಾಡುವ ಸಂಪೂರ್ಣ ಹೊಣೆ ವಹಿಸಿಕೊಂಡು ಅವುಗಳನ್ನು ರಕ್ಷಿಸಿ ಈಗಿನ ಪೀಳಿಗೆಗೆ ಕೊಡುಗೆ ಕೊಟ್ಟ ವೀರ ಶರಣರು ಎಂದರು.
ಕಸಾಪ ವಲಯ ಘಟಕದ ಅಧ್ಯಕ್ಷ ಹಾಗೂ ಶಿಕ್ಷಕ ಮಾತನಾಡಿ, ಬಸವರಾಜ ಮೇಟಿ ಅವರು ಶರಣರಾದ ಚನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೊಮ್ಮಣ್ಣ, ಅವರನ್ನು ರಕ್ಷಿಸಿ ಕಲಚುರ್ಯರಾಯ ಮುರಾರಿಯನ್ನು ಭೀಮಾ ನದಿ ದಾಟಿ ತಲ್ಲೂರ ಮುರಗೋಡ, ಕಡಕೋಳ, ತಡಕೋಡ, ಮುಗಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ಮಾಡಿ ತಮ್ಮ ಧೈರ್ಯ ಅನುಪಮ ಸಾಹಸ ಬಲದಿಂದ ಶರಣರನ್ನು ವಚನ ಸಾಹಿತ್ಯ ರಕ್ಷಿಸಿ ಉಳುವಿಗೆ ತಲುಪಿಸಿದ ಸಾಹಸಿಗ ಮಡಿವಾಳ ಮಾಚಿದೇವ ಎಂದರು.ಜಂಜರವಾಡದ ಶರಣರಾದ ಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಸರ್ಕಲ್ ಉದ್ಘಾಟನೆ : ದೋಬಿ ಘಾಟ್ ಎದುರಗಡೆ ಇರುವ ಕೂಡು ರಸ್ತೆಯಲ್ಲಿ ಶ್ರೀಗುರು ಮಡಿವಾಳ ಮಾಚಿದೇವರ ಸರ್ಕಲ್ ಗೆ ಪೂಜೆ ಸಲ್ಲಿಸಿ ನೂತನ ವರ್ತುಳ ಉದ್ಘಾಟಿಸಲಾಯಿತು.ಸನ್ಮಾನ: ಸಮಾಜದ ವಿವಿಧ ಸಾಧನೆ ಮಾಡಿದ ಹಾಗೂ ಊರಿನ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಸಮಾಜದ ಹಿರಿಯರಾದ ರಮೇಶ ಮಹಾಲಿಂಗಪ್ಪ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಸಂಗಮೇಶ ಮಡಿವಾಳ, ಮುತ್ತಪ್ಪ ಮಡಿವಾಳ, ಪುರಸಭೆ ಸದಸ್ಯರಾದ ರಾಜು ಚಮಕೇರಿ, ರವಿ ಜವಳಗಿ, ಮುಖಂಡರಾದ ಸುನೀಲಗೌಡ ಪಾಟೀಲ, ಅರ್ಜುನ ಮಡಿವಾಳ, ಶಿವನಗೌಡ ಪಾಟೀಲ, ಶಂಕರಗೌಡ ಪಾಟೀಲ, ರವಿಗೌಡ ಪಾಟೀಲ, ವಿಜಯಕುಮಾರ ಕುಳಲಿ, ಬಸವರಾಜ ಮಡಿವಾಳ, ಮಹಾಂತೇಶ ಮಡಿವಾಳ, ಗೋಪಿ ಮಡಿವಾಳ, ಬನಪ್ಪ ಮಡಿವಾಳ, ಪಾಂಡಪ್ಪ ಮಡಿವಾಳ, ಕಲ್ಲಪ್ಪ ಚಿಂಚಲಿ, ಮುತ್ತಪ್ಪ ದಲಾಲ್, ಆರ್.ಎಸ್. ಪರೀಟ. ವಿಜೂಗೌಡ ಪಾಟೀಲ, ಚಂದ್ರಶೇಖರ ಕಾಗಿ ಉಪಸ್ಥಿತರಿದ್ದರು.ಪುರಸಭೆ ಸದಸ್ಯರಾದ ಶೇಖರ ಅಂಗಡಿ ಸಮಾಜದ ಮುಖಂಡರಾದ ಮಲ್ಲಪ್ಪ ಪರೀಟ, ಕಾಂತು ಪರೀಟ, ಬಸವರಾಜ ಪರೀಟ, ಪ್ರಭು ಬೆಳಗಲಿ,ಚನ್ನಪ್ಪ ಪರೀಟ, ಸಿದ್ದಲಿಂಗ ಪರೀಟ, ಮಲ್ಲಪ್ಪ ಪರೀಟ, ದುಂಡಪ್ಪ ಮಡಿವಾಳ, ರಮೇಶ ಮಡಿವಾಳ, ಸುರೇಶ ಮಡಿವಾಳ, ಮಾರುತಿ ಮಡಿವಾಳ, ಶುಭಾಸ ಮಡಿವಾಳ, ಮಡಿವಾಳಪ್ಪ ಮಡಿವಾಳ, ನಂದಗಾಂವ ಕಲ್ಲು ಪರೀಟ, ಶೇಖರ್ ಪರೀಟ, ಪಾಂಡು ಪರೀಟ, ಭೀಮಶಿ ನೇಗಿನಾಳ ಸೇರಿ ಹಲವರು ಇದ್ದರು. ಈರಣ್ಣ ಶಿರೋಳ ನಿರೂಪಿಸಿದರು. ರಮೇಶ ಮಡಿವಾಳ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗಪ್ಪ ಮಡಿವಾಳ ಸ್ವಾಗತಿಸಿ ವಂದಿಸಿದರು.