ಮಾಗಡಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಕೊಲೆ

| Published : Jul 10 2025, 12:47 AM IST

ಸಾರಾಂಶ

ಮೂಲತಃ ಕೊಪ್ಪಳದ ಅರಳಾಪುರ ಗ್ರಾಮದವರಾಗಿದ್ದ ನಾಗರಾಜು ಕುಟುಂಬ ಕೂಲಿ ಹರಸಿ ಬಂದು ಒಂದೂವರೆ ವರ್ಷದಿಂದ ತಾವರೆಕೆರೆ ಮಾರಮ್ಮ ದೇವಾಲಯದ ಬಳಿ ನೆಲೆಸಿದ್ದರು.

ಮಾಗಡಿ: ತಾವರೆಕೆರೆ ಪಟ್ಟಣದ ಮಾರಮ್ಮ ದೇವಾಲಯದ ಬಳಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ನಡೆದಿದೆ.ತಾವರೆಕೆರೆ ಪಟ್ಟಣದ ಮಾರಮ್ಮ ದೇವಾಲಯದ ಬಳಿ ವಾಸವಿದ್ದ ನಾಗರಾಜು ಮತ್ತು ರೇಣುಕಮ್ಮ ದಂಪತಿಯ ನಾಲ್ಕು‌ಮಕ್ಕಳ ಪೈಕಿ ಮೂರನೇ ಮಗುವಾಗಿದ್ದ ಅರುಣ (14) ಅತ್ಯಚಾರಕ್ಕೊಳಗಾಗಿ ಕೊಲೆಯಾದ ಕಂದಮ್ಮ. ಇದು ಕೂಲಿ ಹರಸಿ ವಲಸೆ ಬಂದಿದ್ದ ಕುಟುಂಬ.

ಮೂಲತಃ ಕೊಪ್ಪಳದ ಅರಳಾಪುರ ಗ್ರಾಮದವರಾಗಿದ್ದ ನಾಗರಾಜು ಕುಟುಂಬ ಕೂಲಿ ಹರಸಿ ಬಂದು ಒಂದೂವರೆ ವರ್ಷದಿಂದ ತಾವರೆಕೆರೆ ಮಾರಮ್ಮ ದೇವಾಲಯದ ಬಳಿ ನೆಲೆಸಿದ್ದರು. ನಾಗರಾಜು ಮತ್ತು ರೇಣುಕಮ್ಮ ಇಬ್ಬರೂ ಕೂಲಿ ಕೆಲಸಕ್ಕೆ ಹೋಗಿದ್ದು ಹಿರಿಯ ಮಗ ಕೂಡಾ ಕೆಲಸಕ್ಕೆ ಹೋಗಿದ್ದರು. ಇನ್ನಿಬ್ಬರು ಗಂಡು ಮಕ್ಕಳು ಶಾಲೆಗೆ ತೆರಳಿದ್ದರು. ಇಂದು ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ, ಘಟನೆಯ ಸಂಬಂದ ತಾವರೆಕೆರೆ ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಹೆಚ್ಚಿನ ತಪಾಸಣೆಗಾಗಿ ರಾಜರಾಜೇಶ್ವರಿ ಅಸ್ಪತ್ರೆ ರವಾನಿಸಲಾಗಿದ್ದು ಪ್ರಕರಣ ದಾಖಲಾಗಿದೆ.