ಸಾರಾಂಶ
ರಾಷ್ಟ್ರದ ಐಐಟಿ, ಎನ್‌ಐಟಿ, ಐಐಐಟಿ, ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ 2025ರಲ್ಲಿ ನಡೆಸಲಾದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಡಿ.ಎಸ್. ಯಶವಂತ ರಾಷ್ಟ್ರಮಟ್ಟದಲ್ಲಿ 64ನೇ ರ‍್ಯಾಂಕ್ ಗಳಿಸಿ, ದಾವಣಗೆರೆ ಜಿಲ್ಲೆಗೆ ಟಾಪರ್ ಆಗಿದ್ದಾರೆ.
ದಾವಣಗೆರೆ: ರಾಷ್ಟ್ರದ ಐಐಟಿ, ಎನ್‌ಐಟಿ, ಐಐಐಟಿ, ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ 2025ರಲ್ಲಿ ನಡೆಸಲಾದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಡಿ.ಎಸ್. ಯಶವಂತ ರಾಷ್ಟ್ರಮಟ್ಟದಲ್ಲಿ 64ನೇ ರ‍್ಯಾಂಕ್ ಗಳಿಸಿ, ದಾವಣಗೆರೆ ಜಿಲ್ಲೆಗೆ ಟಾಪರ್ ಆಗಿದ್ದಾರೆ.
ಸಿ.ವಿ. ನಂದನ್ ಕುಮಾರ್ 95.15 ಪರ್ಸಂಟೈಲ್ ಪಡೆದಿದ್ದಾರೆ. ಕೆ.ವಿ.ವರುಣ್ 237ನೇ ರ‍್ಯಾಂಕ್, ಬಿ.ಜೆ.ಶ್ರೀನಿವಾಸ್ 244 ನೇ ರ‍್ಯಾಂಕ್, ಎಂ.ಸಾನಿಧ್ಯ 253ನೇ ರ‍್ಯಾಂಕ್, ಡಿ.ಜೆ.ಹಾಲಸ್ವಾಮಿ 313ನೇ ರ‍್ಯಾಂಕ್, ಎನ್.ಬಿ. ಮಹಮ್ಮದ್ ಮೊಹಸಿನ್ 806ನೇ ರ‍್ಯಾಂಕ್, ನಿರಂಜನ್ ಬಡಿಗೇರ್ 904ನೇ ರ‍್ಯಾಂಕ್ ಪಡೆದಿದ್ದಾರೆ.500 ರ‍್ಯಾಂಕ್ ಒಳಗೆ 6, 2000 ರ‍್ಯಾಂಕೊಳಗೆ 13 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. ಮಾಗನೂರು ಬಸಪ್ಪ ಕಾಲೇಜಿನ ಒಟ್ಟು 38 ವಿದ್ಯಾರ್ಥಿಗಳು ಜೆಇಇ-ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಸಂಸ್ಥೆ ಕಾರ್ಯದರ್ಶಿ ಸಂಗಮೇಶ್ವರ ಗೌಡ, ನಿರ್ದೇಶಕ ಡಾ: ಜಿ.ಎನ್.ಎಚ್. ಕುಮಾರ್, ಪ್ರಾಚಾರ್ಯ ಡಾ: ಎಸ್.ಪ್ರಸಾದ್ ಬಂಗೇರ, ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿದೆ.- - -
-19ಕೆಡಿವಿಜಿ37: ಡಿ.ಎಸ್.ಯಶವಂತ-19ಕೆಡಿವಿಜಿ38: ಸಿ.ವಿ.ನಂದನ್ ಕುಮಾರ್
-19ಕೆಡಿವಿಜಿ39: ಕೆ.ವಿ.ವರುಣ್-19ಕೆಡಿವಿಜಿ40: ಬಿ.ಜೆ.ಶ್ರೀನಿವಾಸ್
-19ಕೆಡಿವಿಜಿ41: ಎಂ.ಸಾನಿಧ್ಯ