ಶಿವಯೋಗಿಗಳ ಚರಿತಾಮೃತ ಮಹಾಮಂಗಲ ಧರ್ಮ ಸಭೆ

| Published : Feb 04 2024, 01:35 AM IST

ಸಾರಾಂಶ

ಸಮೀಪದ ಉಟಕನೂರು ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳವರ ಜಾತ್ರಾಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಶ್ರೀಗಳ ಚರಿತಾಮೃತ ಪ್ರವಚನ ಕಾರ್ಯಕ್ರಮ ಮಹಾಮಂಗಲ ಹಾಗೂ ಧರ್ಮಸಭೆ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಯಶಸ್ವಿಯಾಗಿ ಜರುಗಿತು.

ಮಸ್ಕಿ/ಕವಿತಾಳ: ಸಮೀಪದ ಉಟಕನೂರು ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳವರ ಜಾತ್ರಾಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಶ್ರೀಗಳ ಚರಿತಾಮೃತ ಪ್ರವಚನ ಕಾರ್ಯಕ್ರಮ ಮಹಾಮಂಗಲ ಹಾಗೂ ಧರ್ಮಸಭೆ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಯಶಸ್ವಿಯಾಗಿ ಜರುಗಿತು.

ಧರ್ಮಸಭೆಯ ಸಾನಿಧ್ಯವಹಿಸಿದ್ದ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು, ಡಾ.ಚೆನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮೆದಕಿನಾಳ, ಮಸ್ಕಿಯ ಖ್ಯಾತ ವೈದ್ಯ ಡಾ.ಬಸವಲಿಂಗಪ್ಪ ದಿವಟರ ಸೇರಿ ಗಣ್ಯರು ಸಸಿಗೆ ನೀರು ಹಾಕುವುದರ ಧರ್ಮಸಭೆಯನ್ನು ಉದ್ಘಾಟಿಸಿದರು.

ಮೆದಕಿನಾಳ ಚೆನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಅಡಿವಿ ಪಶುಸಿದ್ದೇಶ್ವರ ಮಠದಲ್ಲಿ ಮರಿಬಸವ ಲಿಂಗ ದೇಶಿಕೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ 18 ದಿನಗಳ ಚರಿತಾಮೃತ ಆಲಿಸಿರುವುದು ನಿಮ್ಮ ಸೌಭಾಗ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಕಳೆದ ಸಾಲಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ಸೇವಾಧಾರಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಡಾ.ಬಸವಲಿಂಗಪ್ಪ ದಿವಟರ, ಹಾಸ್ಯಕಲಾವಿದರಾದ ವೆಂಕನಗೌಡವಟಗಲ್ ಸಭೆ ಕುರಿತು ಮಾತನಾಡಿದರು.

ಪ್ರವಚನಕಾರರಾದ ಬಳಗಾನೂರು ಡಾ.ಶರಭಯ್ಯ ಸ್ವಾಮಿಗಣಾಚಾರಿ, ಗವಾಯಿ ಮನೋಹರ ಪಿ.ಹಿರೇಮಠ ತಲೆಕಟ್ಟು, ತಬಲಾವಾದಕ ಜಾನೆಕಲ್ ಆರ್.ಮಲ್ಲಿನಾಥಸ್ವಾಮಿ ಹಿರೇಮಠ ಅವರ ಕಲಾಬಳಗದೊಂದಿಗೆ ಪ್ರವಚನ ಮಹಾಮಂಗಲಗೊಂಡಿತು. ನಿಮಿತ್ತ ಸಾವಿರಾಉ ಭಕ್ತರಿಗೆ ಅನ್ನಸಂತರ್ಪಣೆ ಸೇರಿ ಇತರೆ ಕಾರ್ಯಕ್ರಮಗಳು ಶ್ರೀಗಳ ಸಾನಿಧ್ಯದಲ್ಲಿ ಜರುಗಿದವು.