ಸಾರಾಂಶ
ಈವರೆಗೆ ಅಧ್ಯಕ್ಷರಾಗಿದ್ದ ಸಿ.ಎಸ್. ದಿಲೀಪ್ ಕುಮಾರ್ ಅವರ ರಾಜೀನಾಮೆಯಿಂದ ತೆರನಾಗಿದ್ದ ಸ್ಥಾನ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ತಾಲೂಕಿನ ಅರ್ಜುನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎ. ಆರ್. ಮಹದೇವಪ್ಪ ಅವಿರೋಧವಾಗಿ ಆಯ್ಕೆಯಾದರು.ಈವರೆಗೆ ಅಧ್ಯಕ್ಷರಾಗಿದ್ದ ಸಿ.ಎಸ್. ದಿಲೀಪ್ ಕುಮಾರ್ ಅವರ ರಾಜೀನಾಮೆಯಿಂದ ತೆರನಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಎ.ಆರ್. ಮಹದೇವಪ್ಪ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣೆ ಅಧಿಕಾರಿಯಾಗಿದ್ದ ಸಿ.ಎಂ. ಅಣ್ಣಯ್ಯ ಆಯ್ಕೆ ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷೆ ಕಾಳಮ್ಮ, ಸದಸ್ಯರಾದ ಸಿ.ಎಸ್. ದಿಲೀಪ್ ಕುಮಾರ್, ಆರ್. ಚಂದ್ರಕಲಾ, ಅನಿತಾ, ಶಿರಿ, ರತ್ನ, ಹೇಮಾವತಿ, ಆಶಾದೇವು, ಕೆ. ಬಸವರಾಜು, ಶಿವಣ್ಣ, ಕೃಷ್ಣಮೂರ್ತಿ, ಎ. ವಿ. ವಜ್ರ ಕುಮಾರ್, ಪಿಡಿಓ ಜಿ. ಟಿ. ಸಂತೋಷ್, ಕಾರ್ಯದರ್ಶಿ ದುಶ್ಯಂತ್ ಇದ್ದರು.ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹೇಶ್, ತಾಲೂಕು ಜೆಡಿಎಸ್ ಮಾಜಿ ಕಾರ್ಯದರ್ಶಿ ಗಣೇಶ್, ಜೆಡಿಎಸ್ ಮುಖಂಡರಾದ ಶಂಭು, ರಾಜೇಂದ್ರ, ಚಂದ್ರಶೇಖರ್, ಕೀರ್ತಿ, ಮುತ್ತುರಾಜು ಇದ್ದರು.