ಸಾರಾಂಶ
ಭಾನುವಾರ ಸಂಜೆ ಬಡಾವಣೆ ಮುಖ್ಯಬೀದಿಗಳಲ್ಲಿ ಚಂಡೆ ಮೇಳದೊಂದಿಗೆ ಶ್ರೀ ವಿನಾಯಕ ಮೂರ್ತಿಯ ಮೆರವಣಿಗೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬೃಂದಾವನ ಬಡಾವಣೆಯಲ್ಲಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಹಾಗೂ ಶ್ರೀ ಮಹಾಗಣಪತಿ ದೇವಸ್ಥಾನದ ವತಿಯಿಂದ ಶ್ರೀ ಸ್ವರ್ಣಗೌರಿ ಮತ್ತು ಶ್ರೀ ವಿನಾಯಕ ವಿಜೃಂಭಣೆಯಿಂದ ನೆರವೇರಿತು. ಶ್ರೀ ವಿನಾಯಕ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಹೋಮ ಹವನಗಳನ್ನು ಹಾಗೂ ಪೂಜಾ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ವೈಭವದಿಂದ ನಡೆಯಿತು.ಭಾನುವಾರ ಸಂಜೆ ಬಡಾವಣೆ ಮುಖ್ಯಬೀದಿಗಳಲ್ಲಿ ಚಂಡೆ ಮೇಳದೊಂದಿಗೆ ಶ್ರೀ ವಿನಾಯಕ ಮೂರ್ತಿಯ ಮೆರವಣಿಗೆ ನಡೆಸಿ ನಂತರ ವಿಸರ್ಜಿಸಲಾಯಿತು.