ರಾಜ್ಯ ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿ ಜರುಗುತ್ತಿರುವ ಅರಣ್ಯವಾಸಿಗಳ ಜಂಟಿ ಮಹಜರ್ ಪ್ರಕ್ರಿಯೆಯ ನ್ಯೂನತೆಯ ೬ ಅಂಶಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಸಲ್ಲಿಸಿದ್ದಾರೆ.

ಶಿರಸಿ: ರಾಜ್ಯ ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿ ಜರುಗುತ್ತಿರುವ ಅರಣ್ಯವಾಸಿಗಳ ಜಂಟಿ ಮಹಜರ್ ಪ್ರಕ್ರಿಯೆಯ ನ್ಯೂನತೆಯ ೬ ಅಂಶಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಸಲ್ಲಿಸಿದ್ದಾರೆ.

ಶಿರಸಿ ಉಪ ವಿಭಾಗ ಅಧಿಕಾರಿ ಚಂದ್ರಶೇಖರ್ ಆರ್.ಜಿ. ಅವರ ಮೂಲಕ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಜ. 6ರಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆಯ ಉಸ್ತುವಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಲ್ಲಿ, ದಾಖಲಾತಿ ಅಲಭ್ಯತೆ ಕಾರಣಕ್ಕೆ ಅರ್ಜಿ ತಿರಸ್ಕರಿಸಿದಲ್ಲಿ, ಅರಣ್ಯ ಕಂದಾಯ, ಗ್ರಾಮೀಣಾಭಿವೃದ್ಧಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರನ್ನು ಒಳಗೊಂಡ ತಂಡದಿಂದ ಮುಂದಿನ ೪೫ ದಿನಗಳೊಳಗಾಗಿ ಮಹಜರ್ ಮಾಡಿ, ಮಹಜರ್ ವರದಿಯನ್ನು ದಾಖಲೆಯಾಗಿ ಪರಿಗಣಿಸಲು ಸೂಚನೆ ನೀಡಲಾಗಿತ್ತು. ಆದರೆ, ಅರಣ್ಯ ಹಕ್ಕು ಕಾಯಿದೆ ಮತ್ತು ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ನಿರ್ದೇಶನ ಉಲ್ಲಂಘಿಸಿರುವ ಅಂಶವನ್ನು ನ್ಯೂನತೆಯ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಹರಿಹರ ನಾಯ್ಕ ಓಂಕಾರ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಎಂ.ಆರ್. ನಾಯ್ಕ ಕಂಡ್ರಾಜಿ, ರಾಜು ನರೇಬೈಲ್, ದಿವಾಕರ್ ಮರಾಠಿ ಆನಗೋಡ, ನಾಗಪತಿ ಗೌಡ ಹುಕ್ಕಳಿ, ಚಂದ್ರು ಪೂಜಾರಿ ಮಂಚಿಕೇರಿ, ರಾಮಚಂದ್ರ ನಾಯ್ಕ ವಾಜಗೋಡ, ಚಂದ್ರು ಶಾನಭಾಗ ಬಂಡಲ್, ಮಲ್ಲೇಶಿ ಸಂತೋಳ್ಳಿ, ಸ್ವಾತಿ ಜೈನ್, ಕಲ್ಪನಾ ನರೇಬೈಲ್, ರಾಜು ಗೌಡ, ಕೃಷ್ಣ ಕುಣಬಿ ಆನಗೋಡ, ಬಸ್ತ್ಯಾಂವ್‌ ಕಣ್ಣಿಗೇರಿ, ಶ್ರೀಧರ ಹೆಗಡೆ ಲಂಬಾಪುರ, ಸುಧಾಕರ ಮಡಿವಾಳ ಬಿಳಗಿ, ಸಂಕೇತ ನಾಯ್ಕ ಹಲಗೇರಿ, ಅಬ್ದುಲ್ ಸುಭಾನ್ ಅರೆಂದೂರು, ಸುಬ್ರಾಯ ಹೆಗಡೆ ಆನಗೋಡ, ಗಣಪತಿ ನಾಯ್ಕ ಬೆಡಸಗಾಂವ್ ಮುಂತಾದವರು ಉಪಸ್ಥಿತರಿದ್ದರು.

ತಹಸೀಲ್ದಾರ್‌ ಪಟ್ಟರಾಜ ಗೌಡ, ಸಿಪಿಐ ಶಶಿಕಾಂತ ವರ್ಮಾ ಹಾಜರಿದ್ದರು..ಬೃಹತ್ ಸಭೆ: ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳು, ಸುಪ್ರೀಂ ಕೋರ್ಟ್‌ನಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ವಿಚಾರಿಸುವ ಕುರಿತು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ೩ ಎಕರೆಗಿಂತ ಕಡಿಮೆ ಇರುವ ಅರಣ್ಯವಾಸಿಗಳಿಗೆ ಭದ್ರತೆ ನೀಡುವ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಲು ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಹೋರಾಟದ ಮುಂದಿನ ಕ್ರಿಯಾ ಯೋಜನೆ ಕುರಿತು ರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ಅಧ್ಯಕ್ಷ ರವೀಂದ್ರ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಚರ್ಚಿಸಲಾಯಿತು.