ಸಾರಾಂಶ
ಬೈಲಹೊಂಗಲ: ಪಟ್ಟಣದ ಇಂಚಲ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಶುಕ್ರವಾರ ಸಡಗರ ಸಂಭ್ರಮದಿಂದ ನೆರವೇರಿತು. ಜಾತ್ರಾ ಮಹೋತ್ಸವ ನಿಮಿತ್ತ ದೇವಿಗೆ ಪ್ರಾಥಕಾಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಪುಷ್ಪಗಳಿಂದ ಅಲಂಕರಿಸಿ ಕುಂಕುಮರ್ಚನೆ, ಮಹಾಮಂಗಳಾರತಿ ಜರುಗಿತು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಇಂಚಲ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಶುಕ್ರವಾರ ಸಡಗರ ಸಂಭ್ರಮದಿಂದ ನೆರವೇರಿತು.ಜಾತ್ರಾ ಮಹೋತ್ಸವ ನಿಮಿತ್ತ ದೇವಿಗೆ ಪ್ರಾಥಕಾಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಪುಷ್ಪಗಳಿಂದ ಅಲಂಕರಿಸಿ ಕುಂಕುಮರ್ಚನೆ, ಮಹಾಮಂಗಳಾರತಿ ಜರುಗಿತು.ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ಹೂ, ಕಾಯಿ, ಹಣ್ಣು ನೈವೇದ್ಯ ಸಲ್ಲಿಸಿ, ಭಕ್ತಿ ಭಾವದಿಂದ ನಮಿಸಿದರು. ದೇವಿಗೆ ಹಾಲು, ತುಪ್ಪ, ಎಳನೀರು, ಅರಿಷಿನ, ಜೇನುತುಪ್ಪ, ಸಕ್ಕರೆ, ಹಣ್ಣು ಹಂಪಲ, ಕುಂಕುಮ ಸೇರಿ ಅನೇಕ ರೀತಿಯ ಅಭಿಷೇಕಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು. ಲೋಕಕಲ್ಯಾಣಾರ್ಥವಾಗಿ ಶ್ರೀ ಮಹಾಲಕ್ಷ್ಮಿ ಹೋಮ ಹವನ ಶಾಂತಯ್ಯ ಶಾಸ್ತ್ರೀ ಹಿರೇಮಠ ಬಸಯ್ಯ ಶಾಸ್ತ್ರಿ ಹಾಗೂ ವೀರೇಶ ಶಾಸ್ತ್ರೀಗಳ ನೇತೃತ್ವದಲ್ಲಿ ಜರುಗಿತು. ದೇವಸ್ಥಾನ ಕಮಿಒಟಿ ಸದಸ್ಯರು, ಸಾವಿರಾರು ಭಕ್ತರು ಇದ್ದರು. ಅನ್ನಪ್ರಸಾದ ಜರುಗಿತು.