ಸಾರಾಂಶ
ಹಿಂದಿನ ಅಧ್ಯಕ್ಷರು ಮತ್ತು ಹಿರಿಯ ನಿರ್ದೇಶಕರು ತಮ್ಮ ಶ್ರಮದ ಮೂಲಕ ಬ್ಯಾಂಕ್ ಅನ್ನು ಸ್ಥಿರತೆ ಮತ್ತು ವಿಶ್ವಾಸಾರ್ಹತೆಯ ಹಾದಿಯಲ್ಲಿ ನಡೆಸಿದ್ದಾರೆ. ಬ್ಯಾಂಕಿನ ಕಟ್ಟುಪಾಡು ಮತ್ತು ಗೌರವ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಲ್ಲ ನಿರ್ದೇಶಕರು ಮತ್ತು ಸದಸ್ಯರು ತಮ್ಮ ಪೂರ್ಣ ಸಹಕಾರ ನೀಡಿದರೆ ಬ್ಯಾಂಕ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು. ಹಿಂದಿನ ಅಧ್ಯಕ್ಷರಾದ ಕೆ. ರಮೇಶ್ ಅವರು ಬ್ಯಾಂಕ್ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಿ ಇತಿಹಾಸ ನಿರ್ಮಿಸಿದ್ದಾರೆ. ನನ್ನ ಮೊದಲ ಅವಧಿಯ ಅಧ್ಯಕ್ಷ ಸ್ಥಾನದಲ್ಲಿ ನಿಮ್ಮ ಮಾರ್ಗದರ್ಶನ ಮತ್ತು ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಅರ್ಬನ್ ಸಹಕಾರ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಬಿ. ಮಹಾಲಿಂಗಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬ್ಯಾಂಕ್‌ನ ಹಿಂದಿನ ಅಧ್ಯಕ್ಷ ಕೆ. ರಮೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹಾಲಿಂಗಸ್ವಾಮಿ ಏಕಮತದಿಂದ ಆಯ್ಕೆಯಾದರು.ಚುನಾವಣಾ ಸಭೆಯ ನಂತರ ಮಾತನಾಡಿದ ನೂತನ ಅಧ್ಯಕ್ಷ ಬಿ. ಮಹಾಲಿಂಗಸ್ವಾಮಿ ಅರ್ಬನ್ ಬ್ಯಾಂಕ್‌ಗೆ ದೀರ್ಘ ಮತ್ತು ಗೌರವಾನ್ವಿತ ಇತಿಹಾಸವಿದೆ. ಹಿಂದಿನ ಅಧ್ಯಕ್ಷರು ಮತ್ತು ಹಿರಿಯ ನಿರ್ದೇಶಕರು ತಮ್ಮ ಶ್ರಮದ ಮೂಲಕ ಬ್ಯಾಂಕ್ ಅನ್ನು ಸ್ಥಿರತೆ ಮತ್ತು ವಿಶ್ವಾಸಾರ್ಹತೆಯ ಹಾದಿಯಲ್ಲಿ ನಡೆಸಿದ್ದಾರೆ. ಬ್ಯಾಂಕಿನ ಕಟ್ಟುಪಾಡು ಮತ್ತು ಗೌರವ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಲ್ಲ ನಿರ್ದೇಶಕರು ಮತ್ತು ಸದಸ್ಯರು ತಮ್ಮ ಪೂರ್ಣ ಸಹಕಾರ ನೀಡಿದರೆ ಬ್ಯಾಂಕ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು. ಹಿಂದಿನ ಅಧ್ಯಕ್ಷರಾದ ಕೆ. ರಮೇಶ್ ಅವರು ಬ್ಯಾಂಕ್ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಿ ಇತಿಹಾಸ ನಿರ್ಮಿಸಿದ್ದಾರೆ. ನನ್ನ ಮೊದಲ ಅವಧಿಯ ಅಧ್ಯಕ್ಷ ಸ್ಥಾನದಲ್ಲಿ ನಿಮ್ಮ ಮಾರ್ಗದರ್ಶನ ಮತ್ತು ಸಹಕಾರ ಅಗತ್ಯವಿದೆ ಎಂದು ಹೇಳಿದರು.ನಿರ್ದೇಶಕ ಅಬ್ದುಲ್ ಜಮೀಲ್ ಮಾತನಾಡಿ, ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿಯೊಳಗಿನ ಸಮಾನ ಮನಸ್ಕತೆ ಮತ್ತು ಒಗ್ಗಟ್ಟೇ ಬ್ಯಾಂಕ್ ಅಭಿವೃದ್ಧಿಗೆ ಕಾರಣವಾಗಿದೆ. ಸದಸ್ಯರ ಆರ್ಥಿಕ ಉನ್ನತಿಗೆ ನಮ್ಮ ಆಶಯ ಬದ್ಧವಾಗಿದೆ. ನೂತನ ಅಧ್ಯಕ್ಷರ ನೇತೃತ್ವದಲ್ಲಿಯೂ ಇದೇ ಉತ್ಸಾಹ ಮುಂದುವರಿಯಲಿ, ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಅಧ್ಯಕ್ಷ ಕೆ. ರಮೇಶ್ ಮಾತನಾಡಿ, ಬ್ಯಾಂಕ್ ಚುನಾವಣೆಯನ್ನು ನಾವು ಸದಾ ಕ್ರೀಡಾತ್ಮಕ ಮನೋಭಾವದಲ್ಲಿ ತೆಗೆದುಕೊಳ್ಳುತ್ತೇವೆ. ಎಲ್ಲ ಸದಸ್ಯರ ಉದ್ದೇಶವೂ ಒಂದೇ ಬ್ಯಾಂಕ್ ಪ್ರಗತಿ ಮತ್ತು ಸದಸ್ಯರ ಕ್ಷೇಮ. ನೂತನ ಅಧ್ಯಕ್ಷರಿಗೆ ನಮ್ಮೆಲ್ಲರ ಬೆಂಬಲ ಇರುತ್ತದೆ. ಸಾಲ ನೀಡುವಾಗ ಸೂಕ್ತ ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೀರ್ತಿ, ನಿರ್ದೇಶಕರು, ಸಿಬ್ಬಂದಿ ಹಾಗೂ ಜೇನುಕಲ್ ಸಿದ್ದೇಶ್ವರ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ವಿ. ಬಸವರಾಜು ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಹಾರೈಸಿದರು.;Resize=(128,128))
;Resize=(128,128))
;Resize=(128,128))
;Resize=(128,128))