ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ನೀಡಿ ಸೂರ್ಯ, ಚಂದ್ರ ಇರೊವರೆಗೂ ನಾವು ಬದುಕಲು ಹಾದಿ ಮಾಡಿಕೊಟ್ಟ ಅವರ ಕೊಡುಗೆ ಅಪಾರ.
ಗದಗ: ಡಾ. ಬಿ.ಆರ್. ಅಂಬೇಡ್ಕರ್ ಜನರ ಜೀವನಮಟ್ಟ ಸುಧಾರಿಸಲು ಶಿಕ್ಷಣ ಪ್ರಮುಖವಾದ ಅಸ್ತ್ರವಾಗಿದೆ ಎಂದು ತೋರಿಸಿಕೊಟ್ಟ ಮಹಾನ್ ನಾಯಕರು. ಮೇಲು- ಕೀಳು ಎಂಬ ಜಾತಿ ಪದ್ಧತಿಯನ್ನು ಹೋಗಲಾಡಿಸಿದರು. ಮಹಿಳೆಯರ ರಕ್ಷಣೆಗೆ ಸಾಕಷ್ಟು ಹೋರಟವನ್ನು ಮಾಡಿ ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಬಾಬು ಜಗಜೀವನ್‌ರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ನೀಡಿ ಸೂರ್ಯ, ಚಂದ್ರ ಇರೊವರೆಗೂ ನಾವು ಬದುಕಲು ಹಾದಿ ಮಾಡಿಕೊಟ್ಟ ಅವರ ಕೊಡುಗೆ ಅಪಾರ. ಅಂಬೇಡ್ಕರ್ ಹುಟ್ಟಿ ಬೆಳೆದು ಹಾಗೂ ಅವರು ವಿದ್ಯಾಭ್ಯಾಸ ಮಾಡಿದ 5 ಸ್ಥಳಗಳನ್ನು ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಪಡಿಸಿರುವುದು ಶ್ಲಾಘನೀಯ. ಅಂಬೇಡ್ಕರ್ ಅವರು ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡಲು ವಸತಿ ಇದ್ದ ಮನೆಯನ್ನು ಖರೀದಿ ಮಾಡಿ ಅದನ್ನು ಜಗತ್ತಿಗೆ ಮಾದರಿ ಸ್ಥಳವನ್ನಾಗಿ ಮಾಡಿರುವುದು ಇತಿಹಾಸದ ಪಟ್ಟಿಗೆ ಸೇರ್ಪಡೆಯಾಗಿದೆ ಎಂದರು.ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮುಳಗುಂದ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಅತಿದೊಡ್ಡ ತಡೆಗೋಡೆ ಜಾತಿ ವ್ಯವಸ್ಥೆಯಾಗಿದ್ದು, ಅದರ ಪ್ರಕಾರ ಅವರು ಜನಿಸಿದ ಕುಟುಂಬವನ್ನು ಅಸ್ಪೃಶ್ಯತೆ ಎಂದು ಪರಿಗಣಿಸಲಾಗಿತ್ತು. ಆದರೆ ಅದನ್ನು ಹೋಗಲಾಡಿಸಿ ಜೀವನ ಮತ್ತು ಬೋಧನೆಗಳ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಅಪಾರ. ಅವರ ತತ್ವಾದರ್ಶಗಳು ಮಾದರಿ ಎಂದರು.ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಮಾತನಾಡಿದರು. ಪಕ್ಷದ ಹಿರಿಯರಾದ ಎಂ.ಎಸ್. ಕರೀಗೌಡ್ರ, ಜಗನ್ನಾಥಸಾ ಭಾಂಡಗೆ, ಶ್ರೀಪತಿ ಉಡುಪಿ, ಅಶೋಕ ಕುಡತಿನಿ, ಲಿಂಗರಾಜ ಪಾಟೀಲ, ವಿಜಯಕುಮಾರ ಗಡ್ಡಿ, ಸುರೇಶ ಚಲವಾದಿ, ನಿರ್ಮಲಾ ಕೊಳ್ಳಿ, ಶಂಕರ ಕಾಕಿ, ಸುರೇಶ ಚಿತ್ತರಗಿ, ಉಷಾ ದಾಸರ, ನಾಗರಾಜ ತಳವಾರ, ಲಕ್ಷ್ಮಣ ದೊಡ್ಡಮನಿ, ಕೇಶವ ಕೊಟ್ನಿಕಲ್, ಉಡಚಪ್ಪ ಹಳ್ಳಿಕೇರಿ, ಮಂಜುನಾಥ ಕೊಟ್ನಿಕಲ್, ಮಹೇಶ ದಾಸರ, ಪದ್ಮಿನಿ ಮುತ್ತಲದಿನ್ನಿ, ಎಂ.ಎಂ. ಹಿರೇಮಠ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ಸ್ವಾತಿ ಅಕ್ಕಿ, ಜಯಶ್ರೀ ಉಗಲಾಟದ, ಅಶ್ವಿನಿ ಜಗತಾಪ್, ಅನಿಲ ಅಬ್ಬಿಗೇರಿ, ಅಶೋಕ ಸಂಕಣ್ಣವರ, ಸಂತೋಷ ಅಕ್ಕಿ, ಪುಷ್ಪಾ ಪೂಜಾರ, ರೇಖಾ ಗವಳಿ, ಆನಂದ ಚಲವಾದಿ ಹಲವರು ಇದ್ದರು.