ಐಎಎಸ್ ಹಿರಿಯ ಅಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
- ದಲಿತ ಸಂಘರ್ಷ ಸಮಿತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಿ.ಜೆ.ಮಹಾಂತೇಶ್ ಸ್ಮರಣೆ
- - -ಹರಿಹರ: ಐಎಎಸ್ ಹಿರಿಯ ಅಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಕಡುಬಡತನ ಹಿನ್ನೆಲೆಯಿಂದ ಬಂದವರಾದರೂ ಐಎಎಸ್‌ನಂತಹ ಅಖಿಲ ಭಾರತಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರತಿಭಾವಂತರು ಮಹಾಂತೇಶ್ ಬೀಳಗಿ. ಅವರ ಶ್ರಮದ ಬದುಕು ನಮಗೆಲ್ಲಾ ಮಾದರಿ ಎಂದರು.ಬಸವಣ್ಣನವರ ಕಟ್ಟಾ ಅಭಿಯಾನಿಯಾಗಿದ್ದ ಅವರು ಬಡವರ ಏಳಿಗೆಗೆ ಶ್ರಮಿಸಿದ್ದರು. ಜನಸಾಮಾನ್ಯರ ಕಷ್ಟ, ಕಾರ್ಪಣ್ಯಗಳನ್ನು ಆಲಿಸಿ ಪರಿಹರಿಸುತ್ತಿದ್ದರು. ಕೋವಿಡ್ ಹಾವಳಿಯಿದ್ದ ಅವಧಿಯಲ್ಲಿ ಜಿಲ್ಲಾಧಿಕಾರಿ ಆಗಿದ್ದ ಅವರು ಕ್ವಾರಂಟೈನ್, ರೋಗಿಗಳ ಚಿಕಿತ್ಸೆ ವಿಷಯಗಳಲ್ಲಿ ಹಗಲು, ರಾತ್ರಿ ಶ್ರಮಿಸಿದ್ದರು ಎಂದು ಸ್ಮರಿಸಿದರು.
ನಗರದ ಎ.ಕೆ. ಕಾಲೋನಿಯ ಕದಸಂಸ ಸ್ಥಾಪಕ ಪ್ರೊ. ಬಿ.ಕೃಷ್ಣಪ್ಪರ ಶಿಥಿಲಗೊಂಡಿದ್ದ ಮನೆಗೆ ಭೇಟಿ ನೀಡಿ ಮನೆಯ ಜೀರ್ಣೋದ್ದಾರಕ್ಕೆ ₹೫ ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಆ ಅನುದಾನ ಬಿಡುಗಡೆಯಾಗಿಲ್ಲ ಎಂದು ವಿಷಾದಿಸಿದರು.ಬೆಸ್ಕಾಂ ಎ.ಇ.ಗಳಾದ ಮಾರ್ಕಂಡೇಯ ಎಂ., ಮನೋಜ್, ವಿನಾಯಕ ಬೆಳ್ಳೂಡಿ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳಾದ ಎಚ್.ಕೆ. ಕೊಟ್ರಪ್ಪ, ಎ.ಕೆ.ಭೂಮೇಶ್, ಕೃಷ್ಣಮೂರ್ತಿ ಯಶಸ್ವಿನಿ, ಎಂ.ಎಸ್. ಆನಂದಪ್ಪ, ಕೇಶವ, ರಮೇಶ್ ಮಾನೆ, ಪ್ರೀತಂ ಬಾಬು, ಬಿ.ಮಗ್ದುಮ್, ಇಲಿಯಾಸ್ ಅಹ್ಮದ್, ಪ್ರಕಾಶ್ ಬೆಳ್ಳೂಡಿ, ಪ್ರವೀಣ್, ಮಂಜುನಾಥ್ ನಡುವಲಕೇರಿ, ನಾಗರಾಜ್ ಬೆಂಡಿಗೇರಿ, ಪ್ರಕಾಶ್ ಜಿ.ಎಂ., ಮಂಜುನಾಥ್ ಕಾಯಿ, ಗಂಗಾಧರ, ಆಕಾಶ್ ಎಂ.ಡಿ., ನಗರಸಭಾ ಸದಸ್ಯ ಆಟೋ ಹನುಮಂತಪ್ಪ ಹಾಗೂ ಇತರರು ಇದ್ದರು.
- - --26HRR.02:
ಹರಿಹರದ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ನಿಧನರಾದ ಐಎಎಸ್ ಹಿರಿಯ ಅಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.