ಸಾರಾಂಶ
- ಲಿಂ. ಸಿದ್ದರಾಮೇಶ್ವರ ಶ್ರೀಗಳ 22ನೇ ಸಂಸ್ಮರಣೋತ್ಸವ, ರಥೋತ್ಸವದಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಮತ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಶ್ರೀ ಸಿದ್ದರಾಮೇಶ್ವರರ ವ್ಯಕ್ತಿತ್ವವು ಹಲವು ಮುಖಗಳಲ್ಲಿ ಅರಳಿದೆ. ಮಹಾನುಭಾವಿ, ಸಮಾಜ ಚಿಂತಕ, ಸಮಾಜ ಸುಧಾರಕ ಹಾಗೂ ಸಮಾನತೆಯ ಗಾರುಡಿಗನಾಗಿದ್ದಾರೆ. ಸರ್ವ ಜೀವದಯಾ ಪರನಾಗಿ, ವೀರ ವೈರಾಗ್ಯ ನಿಧಿಯಾಗಿ, ಜಂಗಮ ಜ್ಞಾನಿಯಾಗಿ, ಕರ್ಮಯೋಗಿಯಾಗಿ ತಮ್ಮ ಜನಾನುರಾಗಿ ಕಾರ್ಯಗಳಿಂದ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನುಡಿದರು. ನಗರದ ವೆಂಕಾ ಭೋವಿ ಕಾಲೋನಿಯಲ್ಲಿ ಸೋಮವಾರ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ ಹಮ್ಮಿಕೊಂಡಿದ್ದ ಶ್ರೀ ಸಿದ್ದರಾಮೇಶ್ವರ ದೇವರ 62ನೇ ರಥೋತ್ಸವ, ಶ್ರೀ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳ 22ನೇ ಸಂಸ್ಮರಣೋತ್ಸವ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಮಾತನಾಡಿ, ಶರಣ ಸಿದ್ಧಾಂತದ ಗುರು-ಲಿಂಗ-ಜಂಗಮದ ಅರಿವಾದ ನಂತರ, ಕಾಯಕ, ದಾಸೋಹ, ಅನುಭಾವಗಳು ಅರ್ಥವಾದಾಗ ವ್ಯಕ್ತಿ ಪೂರ್ಣ ಪರಿವರ್ತನೆಗೊಳ್ಳುತ್ತಾನೆ ಎಂದರು. ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಿದ್ದರಾಮರ ಆದ್ಯ ಉದ್ದೇಶವೇ ವ್ಯಕ್ತಿಗತ ಪರಿವರ್ತನೆ. ವ್ಯಕ್ತಿ ಪರಿವರ್ತನೆಗೊಂಡರೆ, ಸಹಜವಾಗಿಯೇ ಸಮುದಾಯದ ಪರಿವರ್ತನೆ ಆಗುತ್ತದೆ. ಅಂತಹ ವ್ಯಕ್ತಿಗತ ಪರಿವರ್ತನೆಗೆ ಸಿದ್ಧರಾಮರು ಒಂದು ಉಜ್ವಲ ನಿದರ್ಶನ ಎಂದರು. ಅಂಬಿಗರ ಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ, ಯಾದವ ಪೀಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಮಡಿವಾಳ ಪೀಠದ ಬಸವ ಮಾಚಿದೇವ ಶ್ರೀ, ಈಡಿಗ ಪೀಠದ ರೇಣುಕಾನಂದ ಶ್ರೀ, ಹಡಪದ ಅಪ್ಪಣ್ಣ ಪೀಠದ ಅನ್ನದಾನಿ ಭಾರತೀಯ ಅಪ್ಪಣ್ಣ ಶ್ರೀ, ಕುಂಬಾರ ಪೀಠದ ಕುಂಬಾರ ಗುಂಡಯ್ಯ ಶ್ರೀ, ಮೇದಾರ ಪೀಠದ ಇಮ್ಮಡಿ ಮೇದಾರ ಕೇತೇಶ್ವರ ಶ್ರೀ, ಕೊರಟಗೆರೆ ಮಹಾಲಿಂಗ ಶ್ರೀ, ಹೊನಕಲ್ಲಿನ ಬಸವ ರಮಾನಂದ ಶ್ರೀ, ಶಿಕಾರಿಪುರ ಚನ್ನಬಸವ ಶ್ರೀ, ಚೆನ್ನೇನಹಳ್ಳಿ ಬಸವಲಿಂಗಮೂರ್ತಿ ಶ್ರೀ, ಗುರುಮಠಕಲ್ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ, ನಂದ ಪಸಂದ ಸೇವಾಲಾಲ್ ಸ್ವಾಮೀಜಿ, ಹೆಳವ ಪೀಠದ ಬೃಂಗೇಶ್ವರ ಶ್ರೀ, ತಿಳುವಳ್ಳಿ ಬಸವ ನಿರಂಜನ ಸ್ವಾಮೀಜಿ, ಕಲ್ಕೆರೆ ತಿಪ್ಪೇರುದ್ರ ಸ್ವಾಮೀಜಿ, ಅಗಡಿಯ ಗುರುಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಶಾಸಕರಾದ ಮಾಯಕೊಂಡ ಕೆ.ಎಸ್.ಬಸವಂತಪ್ಪ, ಹರಪನಹಳ್ಳಿ ಲತಾ ಮಲ್ಲಿಕಾರ್ಜುನ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ, ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಸದಸ್ಯರಾದ ಎ ನಾಗರಾಜ, ಜಿ.ಎಸ್.ಮಂಜುನಾಥ ಗಡಿಗುಡಾಳ, ಜಿ.ಬಿ.ವಿನಯ ಕುಮಾರ, ಭೋವಿ ನಿಗಮದ ಮಾಜಿ ನಿರ್ದೇಶಕ ಕಾಳಘಟ್ಟ ಹನುಮಂತಪ್ಪ, ಉತ್ಸವ ಸಮಿತಿಯ ಎಚ್.ಜಯಣ್ಣ. ವಿ.ಗೋಪಾಲ, ಎ.ಬಿ.ನಾಗರಾಜ, ಟಿ.ಮಂಜುನಾಥ, ಪಿ.ಶ್ರೀನಿವಾಸ, ಬಿ.ಎಸ್.ವಿನಾಯಕ, ಡಿ.ಬಸವರಾಜ, ಇಂಜಿನಿಯರ್ ವೆಂಕಟೇಶ, ಶ್ರೀನಿವಾಸ, ಟಿ.ಶಿವಶಂಕರ ಶಿಲ್ಪಿ, ಉಮಾ ಕುಮಾರ, ರಾಜಣ್ಣ ಚನ್ನಗಿರಿ, ಅರ್ಜುನ ಜಗಳೂರು, ಜಿ.ಮಂಜುನಾಥ ಹೊನ್ನಾಳಿ, ರಾಜಣ್ಣ ಚಟ್ನಹಳ್ಳಿ, ಅಂಜಿನಪ್ಪ ಹರಪನಹಳ್ಳಿ, ವೀರಭದ್ರಪ್ಪ ಹರಿಹರ, ದಿನೇಶ ನ್ಯಾಮತಿ, ಬಿ.ವೀರೇಶ, ಎಂ.ಚಾಮರಾಜ, ವಿನೋದ ನಗರ, ಮಂಜುನಾಥ ನಲ್ಲಿ, ಪ್ರವೀಣ, ಜಿ.ಸೋಮಶೇಖರ, ಶೇಖರಪ್ಪ, ಜಿ.ಮಂಜಪ್ಪ, ಪಿ.ರವಿಕುಮಾರ ಇತರರು ಇದ್ದರು. ವೆಂಕಾ ಭೋವಿ ಕಾಲೋನಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠದಿಂದ ಪ್ರಾರಂಭವಾದ ಮೆರವಣಿಗೆಯು ಅರಳಿ ಮರ ವೃತ್ತ, ಗಣೇಶ ದೇವಸ್ಥಾನ ಮುಖೇನ ಸಾಗಿ ವೆಂಕಾ ಭೋವಿ ಕಾಲೋನಿ ತಲುಪಿತು. ಪೂಜಾ ಕುಣಿತ, ಹುಲಿವೇಷ, ಕಂಸಾಳೆ, ಗಾರುಡಿಗೊಂಬೆ, ಕೀಲುಕುದುರೆ, ನಂಧಿಕೊಲು ಸಮಾಳ, ಕಹಳೆ, ನಾದಸ್ವರ, ಪೋತರಾಜನ ಕುಣಿತ, ತಮಟೆ ವಾದನ, ಡೊಳ್ಳು ಕುಣಿತಾ, ವಾದ್ಯ ಸಂಗೀತ, ನಾಸಿಕ್ ಡೊಲು, ಹಗಲುವೇಷ ಜಾನಪದ ಕಲಾತಂಡ ವೈಭವ ಹೆಚ್ಚಿಸಿದವು.- - - ಬಾಕ್ಸ್ * ಕನ್ನಡವೇ ಸಿದ್ದರಾಮೇಶ್ವರರ ಉಸಿರು ಸಿದ್ದರಾಮರದು ಶ್ರಮಿಕ ಪರಂಪರೆಯಾಗಿದೆ. ಕನ್ನಡವೇ ಸಿದ್ದರಾಮೇಶ್ವರರ ಉಸಿರು, ಈ ಮಣ್ಣಿನ ಭಾಷೆ. ಬಯಲ ಧರ್ಮ ಅವರ ಮಾಧ್ಯಮವಾಯಿತು. ಕೆರೆ, ಕಟ್ಟೆ, ಕಾಲುವೆ, ಬಾವಿ, ಛತ್ರ, ಮಂದಿರ, ಶಿಕ್ಷಣ ಕ್ಷೇತ್ರಗಳು ಇತರೆ ಸಾಮಾಜಿಕ ಕೆಲಸಗಳೊಡನೆ ಇದ್ದರು. ಜಂಗಮತನ ಸಿದ್ದರಾಮೇಶ್ವರರನ್ನು ಇತರೆ ಅಧ್ಯಾತ್ಮ ಶರಣ ಜೀವಿಗಳಿಗಿಂತ ವಿಭಿನ್ನ ಮಾಡಿತು. ಸಮಾಜ ಸುಧಾರಣೆಯ ಚಿಂತನೆ, ಒಳನೋಟ ಸಿದ್ದರಾಮ ಸಂಸ್ಕೃತಿ ನೆಲೆಯೂರಲು ಕಾರಣವಾಯಿತು ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀ ತಿಳಿಸಿದರು.- - - -5ಕೆಡಿವಿಜಿ6: ದಾವಣಗೆರೆಯಲ್ಲಿ ಶ್ರಾವಣದ ಮೊದಲನೇ ಸೋಮವಾರ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ದೇವರ 62ನೇ ರಥೋತ್ಸವ ವಿವಿಧ ಮಠಾಧೀಶರ ಸಾನಿಧ್ಯ, ನೇತೃತ್ವದಲ್ಲಿ ನಡೆಯಿತು.