ಯುವ ಸಾಹಿತಿಗಳಿಗೆ ಮಹರ್ಷಿ ವಾಲ್ಮೀಕಿ ಸ್ಫೂರ್ತಿ

| Published : Oct 08 2025, 01:00 AM IST

ಸಾರಾಂಶ

ವಾಲ್ಮೀಕಿ ದೇಶ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿ ಯುವ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ವಾಲ್ಮೀಕಿ ದೇಶ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿ ಯುವ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ವಾಲ್ಮೀಕಿ ಸಂಘ ಸಂಯುಕ್ತಾಶ್ರಯದಲ್ಲಿ ತಾಲೂಕು ಕಛೇತಿ ಸಭಾಂಗಂಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಾಲ್ಮೀಕಿ ಮಹರ್ಷಿಗಳು ರಚಿಸಿರುವ ರಾಮಾಯಣದಲ್ಲಿ ಪ್ರೀತಿ, ಸಹೋದರತ್ವ, ವಿಶ್ವಾಸ, ಭಕ್ತಿ, ಆಡಳಿತ, ತ್ಯಾಗ ಹಾಗೂ ಸಮರ್ಪಣೆ ಸಂಸ್ಕೃತಿ, ಸಂಸ್ಕಾರಗಳೊಂದಿಗೆ ಜೀವನ ಮೌಲ್ಯಯ ಬಗ್ಗೆ ವಿವರಿಸಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ೨೪,೦೦೦ ಶ್ಲೋಕಗಳು ಮತ್ತು ೭ ಕಾಂಡಗಳು ಇದ್ದು, ಇವುಗಳ ವಿವಿಧ ಅಧ್ಯಾಯಗಳಾಗಿ ವಿಂಗಡಿಸಲ್ಪಟ್ಟಿದ್ದು ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಅತಿಮುಖ್ಯವಾಗಿವೆ ಎಂದರು.

ಸಮುದಾಯದ ಮುಖಂಡ ರಾಘವೇಂದ್ರ ಮಾತನಾಡಿ, ಭಾರತದಲ್ಲಿ ವಾಲ್ಮೀಕಿ ದೇವಾಲಯಗಳಿವೆ, ಆದರೆ ಅತ್ಯಂತ ಪ್ರಮುಖವಾದದ್ದು ತಮಿಳುನಾಡಿನ ತಿರುವನ್ನಿಯೂರಿನಲ್ಲಿ ವಾಲ್ಮೀಕಿ ಋಷಿಗೆ ಸಮರ್ಪಿತವಾದ ದೇವಾಲಯ. ಇದು ೧೩೦೦ ವರ್ಷಗಳ ಹಳೆಯದಾಗಿದ್ದು ರಾಮಾಯಣವನ್ನು ರಚಿಸಿದ ನಂತರ ವಾಲ್ಮೀಕಿ ಋಷಿ ಶಿವನನ್ನು ಪೂಜಿಸಿದ ಸ್ಥಳ ಎಂದು ಹೇಳಲಾಗುತ್ತದೆ ಎಂದು ತಿಳಿಸಿದರು. ಸಮುದಾಯದ ಮುಖಂಡ ಗೊಂದಿಹಳ್ಳಿ ರಂಗರಾಜು ಮತನಾಡಿದರು. ಕಾರ್ಯಕ್ರಮದ ನಂತರ ತಾಲೂಕು ವಾಲ್ಮೀಕಿ ಸಮಾಜದ ವತಿಯಿಂದ ಪಟ್ಟಣದ ಪಟ್ಟಣ ಪಚಾಯಿತಿ ಮುಂಭಾಗ ವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪ ನಮನ ಮಾಡಿ ಸರ್ವಾಜನಿಕರಿಗೆ ಸಿಹಿ ಹಂಚಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ. ಇಒ ಅಪೂರ್ವ ಅನಂತರಾಮು, ಸಿಪಿಐ ಅನಿಲ್, ಪಿಎಸೈ ತೀಥೇಶ್, ಗ್ರೇಡ್೨ ತಹಸೀಲ್ದಾರ್ ರಾಮಪ್ರಸಾದ್, ಸಮಾಜ ಕಲ್ಯಾಣಾಧಿಕಾರಿ ಯಮುನಾ, ರುದ್ರಪ್ಪ, ವಿಜಯ್‌ಕುಮಾರ್, ಉಮೇಶ್, ಬಸವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಕೆ.ಎನ್.ಲಕ್ಷ್ಮಿನಾರಾಯಣ್, ಸಂಜೀವಪ್ಪ, ಎಚ್.ಎನ್.ಕವಿತಾ, ಕೆ.ಆರ್.ಓಬಳರಾಜು, ಪುಟ್ಟನರಸಪ್ಪ, ಕೆ.ವಿ.ಮಂಜುನಾಥ್, ಸತ್ಯಾನಾರಾಯಣ್, ರಮೇಶ್, ಗನೇಶ್, ವಿನಯ್‌ಕುಮಾರ್, ಕಾರ್ ಮಹೇಶ್, ಗೋಪಾಲಕೃಷ್ಣ, ಲಾರಿ ಸಿದ್ದಪ್ಪ, ರಂಗನಾಥ್, ಮೀಸೆ ಗಂಗಾಧರಯ್ಯ, ರಾಜಣ್ಣ, ಸೇರಿದಂತೆ ತಾಲೂಕಿನ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.