ಧರ್ಮದ ಬೆಳಕು ನೀಡಿದ ಮಹರ್ಷಿ ವಾಲ್ಮೀಕಿ

| Published : Oct 08 2025, 01:01 AM IST

ಸಾರಾಂಶ

ಬಸವೇಶ್ವರ ನಗರದಲ್ಲಿ ₹ 30 ಲಕ್ಷ ವೆಚ್ಚದಲ್ಲಿ ನೂತನ ವಾಲ್ಮೀಕಿ ಭವನಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಈ ಹಿಂದೆ ನಗರದಲ್ಲಿ ಭವ್ಯ ವಾಲ್ಮೀಕಿ ಭವನ ನಿರ್ಮಾಣಕ್ಕೆ ₹ 2.80 ಕೋಟಿ, ಈ ವರ್ಷ ಕಾಂಪೌಂಡ್‌ ನಿರ್ಮಾಣಕ್ಕಾಗಿ ₹ 85 ಲಕ್ಷ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ.

ನವಲಗುಂದ:

ಆದಿಕವಿ ಮಹರ್ಷಿ ವಾಲ್ಮೀಕಿ ನಮಗೆ ಧರ್ಮದ ಬೆಳಕು ಕೊಟ್ಟ ದೇವರೆಂದು ನೆನಪಿಸಿಕೊಳ್ಳಬೇಕು ಎಂದು ಶಾಸಕ ಎನ್.ಎಚ್.‌ ಕೋನರಡ್ಡಿ ಹೇಳಿದರು.

ಮಂಗಳವಾರ ತಾಲೂಕಾಡಳಿತ ಹಾಗೂ ವಾಲ್ಮೀಕಿ ಸಮಾಜದಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವೇಶ್ವರ ನಗರದಲ್ಲಿ ₹ 30 ಲಕ್ಷ ವೆಚ್ಚದಲ್ಲಿ ನೂತನ ವಾಲ್ಮೀಕಿ ಭವನಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಈ ಹಿಂದೆ ನಗರದಲ್ಲಿ ಭವ್ಯ ವಾಲ್ಮೀಕಿ ಭವನ ನಿರ್ಮಾಣಕ್ಕೆ ₹ 2.80 ಕೋಟಿ, ಈ ವರ್ಷ ಕಾಂಪೌಂಡ್‌ ನಿರ್ಮಾಣಕ್ಕಾಗಿ ₹ 85 ಲಕ್ಷ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ. ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಲ್ಮೀಕಿ ಭವನ, ಸಮುದಾಯದ ಕಾಲನಿಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಸಮಾಜದ ಅಭಿವೃದ್ಧಿಗೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಸುಧೀರ ಸಾವಕಾರ, ಪಿಎಸ್‌ಐ ಜನಾರ್ಧನ ಬಿ, ತಾಪಂ ಇಒ ಭಾಗ್ಯಶ್ರೀ ಜಹಗೀರದಾರ, ರಾಮಸಿದ್ದಪ್ಪ ಆರೆನ್ನವರ, ಎಸ್.ಬಿ. ಮಲ್ಲಾಡ, ಶಿವಾನಂದ ತಡಸಿ, ಬೋನಪ್ಪ ತಳವಾರ, ಮಾಜಿ ಜಿಪಂ ಅಧ್ಯಕ್ಷೆ ಶಾಂತವ್ವ ಗುಜ್ಜಳ, ನಿಂಗಪ್ಪ ನಾಯ್ಕರ, ಸುಭಾಷ ದುಬ್ಬದಮಟ್ಟಿ, ಮಹಾಲಕ್ಷ್ಮೀ ಮದಗುಣಕಿ, ಫಕ್ಕೀರಪ್ಪ ತಳವಾರ, ಆರ್.ಎನ್. ಚಿಗರಿ, ಕುಮಾರ ಮಾದರ, ಸಂತೋಷ್ ಗುಜ್ಜಳ, ನಂದಿನಿ ಹಾದಿಮನಿ, ನರಸಿಂಹ ಇನಾಮತಿ, ದೇವಪ್ಪ ಉಡಚಣ್ಣವರ, ಜಗದೀಶ ಗುಜ್ಜಳ, ಹೊನಕೇರಪ್ಪ ದಿಂಡಲಕೊಪ್ಪ, ಮಂಜುನಾಥ, ಮೊದಿನ್ ಶಿರೂರ, ಹುಸೆನಬಿ ಧಾರವಾಡ, ಶಿವು ನಾಯ್ಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.