ಸಾರಾಂಶ
ಮಳೆ, ಬೆಳೆ ಹಾಗೂ ಲೋಕಕಲ್ಯಾಣಾರ್ಥ ಮೇ ೧೦ರಂದು ಆರಂಭಗೊಂಡ ಅಂದಾಜು ₹೧೫ ಲಕ್ಷ ವೆಚ್ಚದ ಮಹಾರುದ್ರಯಾಗವು ಸಂಪನ್ನ
ಮಲೇಬೆನ್ನೂರು: ಸಮೀಪದ ಕುಂಬಳೂರಿನ ಹೊರವಲಯದಲ್ಲಿನ ವೀರಭದ್ರೇಶ್ವರ ದೇವಾಲಯದಲ್ಲಿ ಮೂರು ದಿನಗಳಿಂದ ನಡೆಯುವ ಜಾನುವಾರುಗಳು ಮತ್ತು ರೈತರು ನಿರೀಕ್ಷಿಸುವ ಮಳೆ, ಬೆಳೆ ಹಾಗೂ ಲೋಕಕಲ್ಯಾಣಾರ್ಥ ಮೇ ೧೦ರಂದು ಆರಂಭಗೊಂಡ ಅಂದಾಜು ₹೧೫ ಲಕ್ಷ ವೆಚ್ಚದ ಮಹಾರುದ್ರಯಾಗವು ಭಾನುವಾರ ರಾತ್ರಿ ಸಂಪನ್ನಗೊಂಡಿತು.
ವೇ.ಬೆನಕಯ್ಯಶಾಸ್ತ್ರಿ ಹಾಗೂ ಬೂದಿಸ್ವಾಮಿ ಹಿರೇಮಠ ಇವರ ನೇತೃತ್ವದಲ್ಲಿ ೬೦ ಪುರೋಹಿತರು, ೩೬೫ ಕಳಸಗಳ ಸ್ಥಾಪನೆ ಮಾಡಿ ೧೧ ಹೋಮ ಕುಂಡಗಳು, ಮೂರು ದಿನಗಳು ೧೩೩೩ ರುದ್ರಪಾರಾಯಣ ಮಾಡಿ ಅಂತಿಮ ದಿನ ರಾತ್ರಿ ಮಹಾ ಮಂಗಳಾರತಿಯೊಂದಿಗೆ ಪೂರ್ಣಾಹುತಿ ಕೊಡಲಾಯಿತು.ಭಾನುವಾರ ಸಂಜೆ ೬ರಿಂದ ರಾತ್ರಿ ೧೦ ಗಂಟೆವರೆಗೆ ಮಾಜಿ ಶಾಸಕ ಎಚ್‌ಎಸ್.ಶಿವಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಟ್ರಸ್ಟ್ ಉಪಾಧ್ಯಕ್ಷ ಬಿ. ಚಿದಾನಂದಪ್ಪನವರು ಸು. ಆರು ಗಂಟೆಗಳ ಕಾಲ ಮಡಿಯೊಂದಿಗೆ ರುದ್ರಹೋಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಚನ್ನೇಶ್‌ಶಾಸ್ತ್ರಿ ಮಾತನಾಡಿ ರುದ್ರ ಎಂದರೆ ರೋಧನೆ ಕಳೆಯುವುದು, ಹೋಮ ಮಾಡುವುದರಂದ ಸುಭಿಕ್ಷ ಕಾಲ ಬರುತ್ತದೆ ಎಂದರು. ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಬಿ ಪಂಚಣ್ಣ, ಪದಾಧಿಕಾರಿಗಳು ೧೦ ಪುರೋಹಿತರು, ಜಿಲ್ಲೆಯ ವಿವಿಧ ಮುಖಂಡರು, ವಟುಗಳು ಇದ್ದರು.
ಮೂರು ದಿನಗಳ ರುದ್ರಯಾಗದಲ್ಲಿ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.