ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗನಗರದ ಶ್ರೀ ಕಬೀರಾನಂದ ಆಶ್ರಮದ ವತಿಯಿಂದ ಆಚರಿಸಲ್ಪಡುವ 95ನೇ ಮಹಾ ಶಿವರಾತ್ರಿ ಮಹೋತ್ಸವ ಫೆ.22ರಿಂದ 27ರವರೆಗೆ ಜರುಗಲಿದೆ ಎಂದು ಆಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್ ತಿಳಿಸಿದರು.
ಈಗಾಗಲೇ ಶಿವನಾಮ ಸಪ್ತಾಹ ಪ್ರಾರಂಭವಾಗಿದ್ದು ಬ್ರಾಹ್ಮೀ ಮಹೂರ್ತದಲ್ಲಿ ಗೋ ಪೂಜೆ ಮಾಡುವುದರ ಮೂಲಕ 95ನೇ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಇದಲ್ಲದೆ ಸಪ್ತಾಹ ಪ್ರಾರಂಭದಿಂದ ಅಂತಿಮ ದಿನದವರೆಗೂ ಭಕ್ತಾಧಿಗಳಿಂದ ಶಿವನಾಮ ಸ್ಮರಣೆ ದಿನದ 24 ಗಂಟೆಯೂ ನಡೆಯಲಿದೆ. ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶಿವಲಿಂಗಾನಂದ ಮಹಾಸ್ವಾಮೀಜಿ ದಿವ್ಯ ಸಮ್ಮುಖದಲ್ಲಿ ಫೆ.22 ರಿಂದ 27 ರವರೆಗೆ 95ನೇ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ ಶ್ರೀ ಮಠದ ಆವರಣದಲ್ಲಿ ನಿರ್ಮಿತವಾಗಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಹಾವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ.ಫೆ. 22 ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೃಂಗೇರಿಯ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ್ ಶ್ರೀಗಳು, ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ್ ಶ್ರೀಗಳು ಹಾಗೂ ಚಳ್ಳಕೆರೆಯ ಶ್ರೀ ಸದ್ಗುರು ನರಹರಿ ಪೀಠದ ಪೀಠಾಧಿಪತಿಗಳಾದ ಶ್ರೀ ರಾಜಾರಾಮ್ ಶ್ರೀಗಳು ವಹಿಸಲಿದ್ದಾರೆ. ಸಭಾಮಂಟಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವಿರೇಂದ್ರ ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್, ಆಯುಕ್ತ ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಭಾಗವಹಿಸಲಿದ್ದಾರೆ. ಫೆ.23 ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀಗಳು, ಹಂಪಿಯ ಹೇಮಕೂಟದ ಶಿವರಾಮಾವಧೂತ ಆಶ್ರಮದ ಶ್ರೀ ವಿದ್ಯಾನಂದ ಭಾರತಿ ಶ್ರೀಗಳು ವಹಿಸಲಿದ್ದಾರೆ. ಮಾಜಿ ಸಚಿವ ಎಚ್.ಅಂಜನೇಯ, ಅದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ನಗರಸಭಾ ಆಧ್ಯಕ್ಷೆ ಸುಮಿತ ರಾಘವೇಂದ್ರ, ಪೌರಾಯುಕ್ತೆ ರೇಣುಕಾ, ಬಿಜೆಪಿ ಮುಖಂಡ ರೇಖಾ, ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. 24 ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಜಗದ್ಗುರು ಡಾ.ನಿರ್ಮಲಾನಂದಸ್ವಾಮಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಬೆಂಗಳೂರಿನ ಗವಿಪುರಂನ ಶ್ರೀ ಭವಾನಿ ಪೀಠದ ಗೋಸಾಯಿಮಠದ ಪೀಠಾಧ್ಯಕ್ಷ ಮಂಜುನಾಥ ಭಾರತಿ ಶ್ರೀಗಳು ಹಾಗೂ ಉದಯಚಲದ ಶ್ರೀ ಸದ್ಗುರು ಸೇವಾಶ್ರಮ ಟ್ರಸ್ಟ್‍ನ ಶ್ರೀ ಶ್ರೀಕಾಂತಾನಂದ ಭಗವಾನ್ ಸರಸ್ವತಿ ಶ್ರೀಗಳು ವಹಿಸಲಿದ್ದಾರೆ. ಸಂಸದರಾದ ಗೋವಿಂದ ಕಾರಜೋಳ, ಐಜಿಪಿ ರವಿಕಾಂತೇಗೌಡ, ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ನಗರಸಭೆಯ ಉಪಾಧ್ಯಕ್ಷ ಶ್ರೀದೇವಿ ಚಕ್ರವರ್ತಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. 25ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೂಸದುರ್ಗದ ಶೀಲಾಪುರಿ ಉಪ್ಪಾರ ಭಗೀರಥ ಮಹಾ ಸಂಸ್ಥಾನದ ಶ್ರೀ ಪುರುಷೋತ್ತಮಾನಂದ ಶ್ರೀಗಳು, ಹುಬ್ಬಳ್ಳಿಯ ವಿಜಯಪುರದ ಶ್ರೀ ಷಣ್ಮುಖಾರೂಢ ಮಠದ ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಢ ಶ್ರೀಗಳು, ಹೆಬ್ಬಾಳ್‍ನ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಶ್ರೀಗಳು ಹಾಗೂ ಬಾಗಲಕೋಟೆಯ ಕೌದಿಶ್ವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ವಹಿಸಲಿದ್ದಾರೆ. 26ರ ಮಧ್ಯಾಹ್ನ 2.30ರಿಂದ ಶ್ರೀ ಸದ್ಗುರು ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ನಡೆಯಲಿದೆ. ಸಂಜೆ 7ಕ್ಕೆ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀಗಳು ಹಾಗೂ ಹಾವೇರಿಯ ಕೂಸನೂರಿನ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಶ್ರೀಗಳು ವಹಿಸಲಿದ್ದಾರೆ. ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ್, ಎಂ. ಚಂದ್ರಪ್ಪ, ಉಮೇಶ್ ಕಾರಜೋಳ, ನಗರಸಭಾ ಸದಸ್ಯರಾದ ವೆಂಕಟೇಶ್, ಮಂಜುನಾತ್ ಗೊಪ್ಪೆ, ಭಾಸ್ಕರ್, ರಮೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.ಫೆ. 27ರ ಬೆಳಿಗ್ಗೆ ಬ್ರಾಹ್ಮೀ ಮಹೋರ್ತದಲ್ಲಿ ಶಿವನಹಿಮ್ನಾ ಸ್ತೂತ್ರ ವಿಭೂತಿ ಸ್ನಾನದೊಂದಿಗೆ ಸಪ್ತಾಹ ಸಮಾಪ್ತಿಯಾಗಲಿದೆ, ಸಂಜೆ 5.30ರಿಂದ ಸನ್ಯಾಸಿ ವಿಧಿಯಂತೆ ಕೌದಿ ಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಶಾಂತ್ ಹೇಳಿದರು. ಶಿವಲಿಂಗಾನಂದ ಸ್ವಾಮೀಜಿ, 95ನೇ ಮಹಾ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಬದರಿನಾಥ್, ಸದಸ್ಯರಾದ ಓಂಕಾರ್, ಮಂಜುನಾಥ್ ಗುಪ್ತ, ಉತ್ಸವ ಸಮಿತಿ ಸದಸ್ಯರಾದ ಗೋಪಾಲಸ್ವಾಮಿ ನಾಯ್ಕ್, ಸತೀಶ್, ನಾಗರಾಜ್ ಸಂಗಂ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ ನಿರಂಜನ ಮೂರ್ತಿ, ಯೋಗಿಶ್, ರೂಪ ಜರ್ನಾರ್ಧನ್, ಸೋಮನಾಥ್ ಇದ್ದರು.