ಹೊಸಪೇಟೆಯಲ್ಲಿ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ

| Published : Jan 31 2024, 02:16 AM IST

ಸಾರಾಂಶ

ತಾವು ಬದುಕಿದ ರೀತಿಯನ್ನೇ ಸಂದೇಶವಾಗಿ ಮಾರ್ಪಡಿಸುವುದು ಇನ್ನೂ ಕಷ್ಟ. ಇದನ್ನು ಸಾಧಿಸಿ ಮಹಾನ್‌ ದಾರ್ಶನಿಕನಾಗಿ ನಮಗೆಲ್ಲ ಸ್ವಾತಂತ್ರ್ಯದ ಬೆಳಕು ನೀಡಿದ ಮಹಾತ್ಮ ಗಾಂಧೀಜಿ ನಮ್ಮ ನಿತ್ಯ ಜೀವನದ ಆದರ್ಶವಾಗಬೇಕು.

ಹೊಸಪೇಟೆ: ನಗರದ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ಹಾಗೂ ಹುತಾತ್ಮರ ದಿನಾಚರಣೆಯನ್ನು ಮಂಗಳವಾರ ನಡೆಸಲಾಯಿತು.

ಜಿಲ್ಲಾ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ಡಿ. ವೆಂಕಟರಮಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಜಿ. ತಮ್ಮನಳ್ಳೆಪ್ಪ, ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಾಯಕ ಶೆಟ್ಟರ್, ಮುಖಂಡರಾದ ಓಬಣ್ಣ, ಎಸ್.ಬಿ. ಮಂಜುನಾಥ, ದೇವರ ಮನೆ ಕನ್ನೇಶ್ವರ, ರಮೇಶ, ತಾಯಪ್ಪ ನಾಯಕ, ಬಾಣದ ಗಣೇಶ, ಮೊಹಮ್ಮದ್ ಜಾವೇದ್, ವೀರಭದ್ರ ನಾಯಕ ಮತ್ತಿತರರಿದ್ದರು.

ಪತಂಜಲಿ ಯೋಗ ಸಮಿತಿ: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪತಂಜಲಿ ಯೋಗ ಸಮಿತಿವತಿಯಿಂದ ಹುತಾತ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು.

ಕಂಪ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ವಾಗೀಶ್ ಮಾತನಾಡಿ, ನುಡಿದಂತೆ ನಡೆಯುವುದು ಕಷ್ಟ. ತಾವು ಬದುಕಿದ ರೀತಿಯನ್ನೇ ಸಂದೇಶವಾಗಿ ಮಾರ್ಪಡಿಸುವುದು ಇನ್ನೂ ಕಷ್ಟ. ಇದನ್ನು ಸಾಧಿಸಿ ಮಹಾನ್‌ ದಾರ್ಶನಿಕನಾಗಿ ನಮಗೆಲ್ಲ ಸ್ವಾತಂತ್ರ್ಯದ ಬೆಳಕು ನೀಡಿದ ಮಹಾತ್ಮ ಗಾಂಧೀಜಿ ನಮ್ಮ ನಿತ್ಯ ಜೀವನದ ಆದರ್ಶವಾಗಬೇಕು ಎಂದರು.

ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಪ್ರೊ. ಎಫ್‌.ಟಿ. ಹಳ್ಳಿಕೇರಿ ಮಾತನಾಡಿದರು. ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್‌ ಕುಮಾರ್‌, ಜಿಲ್ಲಾ ಪ್ರಭಾರಿ ವೀರೇಶ್‌, ಪತಂಜಲಿ ಯೋಗ ಸಮಿತಿ ಬಳ್ಳಾರಿ ಉಸ್ತುವಾರಿ ರಾಜೇಶ್‌ ಕಾರ್ವಾ, ಯೋಗ ಸಾಧಕರಾದ ಅಶೋಕ್‌ ಚಿತ್ರಗಾರ್, ಯರಿಯಪ್ಪ, ಶ್ರೀರಾಮ್‌, ಚಂದ್ರಿಕಾ ಶ್ರೀರಾಮ್‌, ಅನಂತ ಜೋಶಿ ಮತ್ತಿತರರಿದ್ದರು. ಇದಕ್ಕೂ ಮೊದಲು ನಿತ್ಯದಂತೆ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಯೋಗ ಶಿಬಿರದ ಉದ್ದಕ್ಕೂ ಮಹಾತ್ಮ ಗಾಂಧೀಜಿ ಅವರಿಗೆ ಇಷ್ಟವಾದ ಹಾಡುಗಳು ಝೇಂಕರಿಸಿದವು.

ಕಿರಣ್‌ ಕುಮಾರ್ ಅವರು ಯೋಗ ಮಾರ್ಗದರ್ಶನ ಮಾಡುತ್ತಲೇ ಮಹಾತ್ಮನ ಸರಳ ಜೀವನದ ಬಗ್ಗೆ ಮಾಹಿತಿ ನೀಡಿದರೆ, ಜಯಣ್ಣ ಅವರು ವೈಷ್ಣವ ಜನತೋ, ರಘುಪತಿ ರಾಘವ ಸಹಿತ ಹಲವು ಗಾಂಧೀಜಿ ಪ್ರಿಯ ಹಾಡುಗಳನ್ನು ಹಾಡಿ ಇಡೀ ಯೋಗ ಕಕ್ಷೆಯನ್ನು ಗಾಂಧಿ ಸ್ಮರಣೆಯ ಕಕ್ಷೆಯನ್ನಾಗಿ ಮಾರ್ಪಡಿಸಿದರು.

ಜಿಲ್ಲಾಡಳಿತ ಭವನದಲ್ಲಿ ಮೌನಾಚರಣೆ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳ ಮೂಲಕ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಜಿಲ್ಲಾಡಳಿತದಿಂದ ಜನವರಿ 30ರಂದು ಮೌನಾಚರಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿ, ಹುತಾತ್ಮರಿಗೆ ಗೌರವ ಸಮರ್ಪಿಸಿದರು.