ಮಹಾತ್ಮರ ಜಯಂತಿಗಳು ಜಾತಿಗೆ ಸೀಮಿತ ಬೇಡ: ಶಾಸಕ ಲಕ್ಷ್ಮಣ ಸವದಿ

| Published : Oct 18 2024, 12:07 AM IST

ಮಹಾತ್ಮರ ಜಯಂತಿಗಳು ಜಾತಿಗೆ ಸೀಮಿತ ಬೇಡ: ಶಾಸಕ ಲಕ್ಷ್ಮಣ ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಭಾರತ ದೇಶದಲ್ಲಿ ಅನೇಕ ಸಂತ ಮಹಾಂತರು, ಮಹಾಪುರುಷರು, ಸಮಾಜ ಸುಧಾರಕರು, ಜನರ ಉದ್ಧಾರಕ್ಕಾಗಿ, ನಾಡಿನ ಏಳ್ಗೆಗಾಗಿ ಕೊಡುಗೆ ನೀಡಿದ್ದಾರೆ. ಅವರ ಸ್ಮರಣೆ, ಉತ್ಸವ, ಜಯಂತಿಗಳನ್ನು ಆಯಾ ಜಾತಿಗಳಿಗೆ ಮಾತ್ರ ಸೀಮಿತವಾಗದೇ ಎಲ್ಲ ಜಾತಿ ಜನಾಂಗದವರು ಒಟ್ಟಾಗಿ ಆಚರಿಸುವಂತಾಗಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ನಮ್ಮ ಭಾರತ ದೇಶದಲ್ಲಿ ಅನೇಕ ಸಂತ ಮಹಾಂತರು, ಮಹಾಪುರುಷರು, ಸಮಾಜ ಸುಧಾರಕರು, ಜನರ ಉದ್ಧಾರಕ್ಕಾಗಿ, ನಾಡಿನ ಏಳ್ಗೆಗಾಗಿ ಕೊಡುಗೆ ನೀಡಿದ್ದಾರೆ. ಅವರ ಸ್ಮರಣೆ, ಉತ್ಸವ, ಜಯಂತಿಗಳನ್ನು ಆಯಾ ಜಾತಿಗಳಿಗೆ ಮಾತ್ರ ಸೀಮಿತವಾಗದೇ ಎಲ್ಲ ಜಾತಿ ಜನಾಂಗದವರು ಒಟ್ಟಾಗಿ ಆಚರಿಸುವಂತಾಗಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕು ಪಂಚಾಯತಿ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರ ತತ್ವ ಸಂದೇಶಗಳನ್ನು, ಅವರ ವಿಚಾರಧಾರೆಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕಿ ಡಾ.ರತ್ನಾ ಬಾಳಪ್ಪನವರ ಮಾತನಾಡಿ, ಮಹರ್ಷಿ ವಾಲ್ಮೀಕಿ ಒಬ್ಬ ರಾಜ, ನೀತಿವಂತ, ತತ್ವಜ್ಞಾನಿ, ವಿಜ್ಞಾನಿ ಹಾಗೂ ಆರೋಗ್ಯ ಶಾಸ್ತ್ರವನ್ನು ಬಲ್ಲವನಾಗಿದ್ದ. ಆತನ ವಿಚಾರಧಾರೆಗಳನ್ನು ನಾವೆಲ್ಲ ಅಳವಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ತಹಸೀಲ್ದಾರ್‌ ಸಿದರಾಯ ಭೋಸಗಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪೂರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಯಾದವಾಡ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಪುರಸಭೆ ಸದಸ್ಯರಾದ ರಾಜು ಗುಡೋಡಗಿ, ಪ್ರಮೋದ ಬಿಳ್ಳೂರ, ಮಲ್ಲಿಕಾರ್ಜುನ ಬುಟಾಳಿ, ಅಧಿಕಾರಿಗಳಾದ ವೆಂಕಟೇಶ ಕುಲಕುರ್ಣಿ, ವೀರಣ್ಣ ವಾಲಿ, ರವಿಂದ್ರ ಮುರಗಾಲಿ, ರೇಣುಕಾ ಹೊಸಮನಿ, ರಾಮಗೌಡ ಪಾಟೀಲ, ಉಪತಹಸೀಲ್ದಾರ್ ಮಹಾದೇವ ಬಿರಾದಾರ, ಡಾ.ಬಸಗೌಡ ಕಾಗೆ, ಪ್ರವೀಣ ಹುಣಸಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು. ತಹಸೀಲ್ದಾರ್‌ ಸಿದರಾಯ ಭೋಸಗಿ ಸ್ವಾಗತಿಸಿದರು. ಸಂಗಮೇಶ ಹಚಡದ ನಿರೂಪಿಸಿದರು. ಬಸವರಾಜ ಯಾದವಾಡ ವಂದಿಸಿದರು.ವಿವಿಧ ಸಮುದಾಯದವರಿಗಾಗಿ ಕಟ್ಟಿದ ಅನೇಕ ಸಮುದಾಯ ಭವನಗಳು ಸದ್ಬಳಕೆ ಆಗುತ್ತಿಲ್ಲ. ಆ ಭವನಗಳಲ್ಲಿ ತಿಂಗಳಿಗೊಮ್ಮೆಯಾದರೂ ಆಯಾ ಸಮುದಾಯದ ಮಹಾಪುರಷರ, ಮಹಾತ್ಮರ ಕುರಿತು ಚಿಂತನ, ಮಂಥನ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಸರ್ಕಾರದ ಮೀಸಲಾತಿ ಸೌಲಭ್ಯವು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಿಗಬೇಕು. ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆದು ಪರಿಶ್ರಮದಿಂದ ಮುಂದೆ ಬಂದು ಸಮಾಜಕ್ಕೆ ಮಾದರಿಯಾಗಬೇಕು.

-ಲಕ್ಷ್ಮಣ ಸವದಿ, ಶಾಸಕರು.ವಾಲ್ಮೀಕಿ ಸಮಾಜದವರಿಗೆ ಶೇ.7 ರಷ್ಟು ಎಸ್ಟಿ ಮೀಸಲಾಯಿತಿ ಇದೆ. ಇದರಲ್ಲಿ ಬೇರೆ ಬೇರೆ ಸಮಾಜದವರನ್ನು ತಂದು ಸೇರಿಸುವುದು ಸರಿಯಲ್ಲ. ಇದರಿಂದ ವಾಲ್ಮೀಕಿ ಸಮಾಜಕ್ಕೆ ಸಿಗಬೇಕಾದ ಸೌಲಭ್ಯ ಸಿಗುವುದು ಕಷ್ಟವಾಗುತ್ತದೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡುವುದು ಅಗತ್ಯವಿದೆ.

-ಡಾ.ರತ್ನಾ ಬಾಳಪ್ಪನವರ, ಉಪನ್ಯಾಸಕಿ.