ಮಹಾವೀರ ಕಾಲೇಜು ಕ್ಯಾಂಪಸ್‌ ರಿಕ್ರೂಟ್‌ಮೆಂಟ್‌: ಶೇ.100 ಮಂದಿ ಆಯ್ಕೆ

| Published : Apr 28 2025, 11:46 PM IST

ಮಹಾವೀರ ಕಾಲೇಜು ಕ್ಯಾಂಪಸ್‌ ರಿಕ್ರೂಟ್‌ಮೆಂಟ್‌: ಶೇ.100 ಮಂದಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜು ತನ್ನ ವಿವಿಧ ಪದವಿ ವಿಭಾಗಗಳ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಹೊಸ ಮೈಲಿಗಲ್ಲನ್ನು ಈ ವರ್ಷ ಸ್ಥಾಪಿಸಿದೆ. ಈ ಅಪೂರ್ವ ಸಾಧನೆಯ ಆಚರಣೆಗೆ, ಎಸ್‌ಎಂಸಿ ಮೈಲ್‌ಸ್ಟೋನ್‌ ಡೇ ವಿಶೇಷ ಕಾರ್ಯಕ್ರಮವನ್ನು ಕಾಲೇಜು ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಶ್ರೀ ಮಹಾವೀರ ಕಾಲೇಜು ತನ್ನ ವಿವಿಧ ಪದವಿ ವಿಭಾಗಗಳ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಹೊಸ ಮೈಲಿಗಲ್ಲನ್ನು ಈ ವರ್ಷ ಸ್ಥಾಪಿಸಿದೆ.

ಈ ಅಪೂರ್ವ ಸಾಧನೆಯ ಆಚರಣೆಗೆ, ಎಸ್‌ಎಂಸಿ ಮೈಲ್‌ಸ್ಟೋನ್‌ ಡೇ ವಿಶೇಷ ಕಾರ್ಯಕ್ರಮವನ್ನು ಕಾಲೇಜು ಆಯೋಜಿಸಿತು.

ಎಸ್‌ಎಂಸಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ, ಈ ಸಾಧನೆ ಕಾಲೇಜಿನ ಇತಿಹಾಸದಲ್ಲೇ ಅಭೂತಪೂರ್ವ ಎಂದರು.ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಾಪ್ಮಿ), ಮಾಹೆಯ ಪ್ಲೇಸ್ಮೆಂಟ್ ಮತ್ತು ಕಾರ್ಪೊರೇಟ್ ಎಂಗೇಜ್‌ಮೆಂಟ್‌ನ ಅಧ್ಯಕ್ಷ ಡಾ. ಗುರುದತ್ ನಾಯಕ್, ನಮ್ಮ ಮಾಹೆ ಪರಿವಾರದ ಎಸ್‌ಎಂಸಿಯನ್ನು ಬೆಂಬಲಿಸಲು ಟ್ಯಾಪ್ಮಿ ಸದಾ ಸಿದ್ಧ ಎಂದರು.

ಉದ್ಯೋಗ ಮೇಳ ನಿಯೋಜನೆಯ ಅತ್ಯುತ್ತಮ ಕಾರ್ಯಕ್ಷಮತೆಗೆ ಕಾಲೇಜಿನ ಹಳೆಯ ವಿದ್ಯಾರ್ಥಿ ಶ್ರೀ ಸಂಜಯ್ ಭಟ್ ಅವರು ನೀಡಿದ ಮಾರ್ಗದರ್ಶನ, ಡಾ. ಗುರುದತ್ ನಾಯಕ್ ಟ್ಯಾಪ್ಮಿ ಅವರ ಸಲಹೆಗಳು ಮತ್ತು ಹಳೆ ವಿದ್ಯಾರ್ಥಿಗಳಾದ ಮುಸ್ತಾಕ್ ಅಹ್ಮದ್ ಮತ್ತು ಬಿ. ನಾಗರಾಜ್ ವಿದ್ಯಾರ್ಥಿಗಳಿಗೆ ಒದಗಿಸಿದ ಸಂದರ್ಶನ ತರಬೇತಿಗಳನ್ನು ಪ್ರಶಂಸಿಸಿ ಗೌರವಿಸಲಾಯಿತು.

ಪ್ರಾಂಶುಪಾಲ ಡಾ. ರಾಧಾಕೃಷ್ಣ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದರು.

ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವ ಗುರಿಯೊಂದಿಗೆ ಎಸ್‌ಎಂಸಿ ಫೈನಾನ್ಷಿಯಲ್ ಫ್ರೀಡಂ ಕ್ಲಬ್‌ ಲಾಂಛನ ಅನಾವರಣಗೊಳಿಸಲಾಯಿತು.

ಪಿ.ಯು. ಕಾಲೇಜು ಪ್ರಾಂಶುಪಾಲ ಪ್ರೊ. ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಪ್ರೊ. ಹರೀಶ್, ಮತ್ತು ಉದ್ಯೋಗ ನಿಯೋಜನೆಗಳ ಅಧ್ಯಾಪಕ ಸಂಯೋಜಕ ಪ್ರೊ. ಸವಿತಾ ಕೋಟ್ಯಾನ್ ಮತ್ತು ಡಾ. ಹರೀಶ್ ಇದ್ದರು.

ವಿದ್ಯಾರ್ಥಿನಿ ಶ್ರೇಯಾ ಶೆಟ್ಟಿ ನಿರೂಪಿಸಿದರು, ಶ್ರುತಿ ಎಸ್. ಪೆರಿ ಸ್ವಾಗತಿಸಿದರು, ಅನನ್ಯಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ರಾಧಾಕೃಷ್ಣ ವಂದಿಸಿದರು.