ಶ್ರದ್ಧಾ ಭಕ್ತಿಯ ಮಹಾವೀರ ಜಯಂತಿ

| Published : Apr 22 2024, 02:03 AM IST

ಸಾರಾಂಶ

ಜೈನ ಧರ್ಮದ ೨೪ನೇ ತೀರ್ಥಂಕರ, ಅಹಿಂಸೆಯ ತತ್ವವನ್ನು ಮಾನವ ಕುಲಕ್ಕೆ ಸಾರಿದ ತ್ಯಾಗಮೂರ್ತಿ ಮಹಾವೀರರ ಜಯಂತಿಯನ್ನು ನಗರದಲ್ಲಿ ಜೈನ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜೈನ ಧರ್ಮದ ೨೪ನೇ ತೀರ್ಥಂಕರ, ಅಹಿಂಸೆಯ ತತ್ವವನ್ನು ಮಾನವ ಕುಲಕ್ಕೆ ಸಾರಿದ ತ್ಯಾಗಮೂರ್ತಿ ಮಹಾವೀರರ ಜಯಂತಿಯನ್ನು ನಗರದಲ್ಲಿ ಜೈನ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ನಗರದ ಪಾರ್ಶ್ವನಾಥ ಜೈನ ಬಸದಿಯಲ್ಲಿ ಸಮಾವೇಶಗೊಂಡ ಜೈನ ಬಾಂಧವರು ಮಹಾವೀರ ಸ್ವಾಮಿಗೆ ವಿವಿಧ ಅಭಿಷೇಕಗಳನ್ನು ಮಾಡುವ ಮೂಲಕ ಜಯಂತಿಯನ್ನು ಆಚರಿಸಿದರು. ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕನಕಾಭಿಷೇಕ, ಕುಂಕುಮ ಅಭಿಷೇಕ, ಗಂಧಾಭಿಷೇಕ, ಅಷ್ಟಗಂಧಾಭಿಷೇಕ, ಮಹಾಮಂಗಳಾರತಿ, ಚಾಮರಸೇವೆ ಸೇರಿದಂತೆ ವಿವಿಧ ಅಭಿಷೇಕಗಳಿಗೆ ಬಿಡ್ ಮೂಲಕ ಸಾರಲಾಯಿತು, ನಂತರ ಸೇವೆಯನ್ನ ಕೊಂಡವರು ತಮ್ಮ ಪರಿವಾರ ಸಮೇತ ಅಭಿಷೇಕಗಳನ್ನು ನೆರವೇರಿಸಿ, ಮಹಾವೀರ ಸ್ವಾಮಿಯನ್ನು ಸ್ಮರಿಸಿದರು.

ಮಹಿಳೆಯರು, ಬಸದಿಯಲ್ಲಿ ಉಯ್ಯಾಲೆ ಉತ್ಸವ ನಡೆಸಿದರು. ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಮಹಾವೀರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಅಹಿಂಸೆಯೇ ಪರಮಧರ್ಮ, ಹಿಂಸೆಯನ್ನು ಮಾಡಬಾರದು, ಮಾನವ ಮತ್ತೊಬ್ಬ ಮಾನವನ್ನಾಗಲೀ, ಪ್ರಾಣಿ ಪಕ್ಷಿಗಳನ್ನಾಗಲಿ, ಸಣ್ಣ ಕೀಟಗಳನ್ನಾಗಲಿ ಹಿಂಸಿಸಬಾರದು ಎಂಬ ತತ್ವದಡಿಯಲ್ಲಿ ಮಹಾವೀರನನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಪಾರ್ಶ್ವನಾಥ ಜೈನ ಸಂಘದ ಪದಾಧಿಕಾರಿಗಳು, ಜಯಶಾಮದೇವಿ ಮಹಿಳಾ ಸಂಘದ ಪದಾಧಿಕಾರಿಗಳು ಮುಖಂಡರಾದ ನಿರ್ಮಲ ಕುಮಾರ್, ಸಿ.ಬಿ ನಾಗೇಂದ್ರಯ್ಯ, ಸಿ.ಪಿ. ಮಹೇಶ್‌ಕುಮಾರ್, ಕೆ. ಸುಭಾಷ್, ಸತೀಶ್, ವಿಜಯಕುಮಾರ್, ಸಿ.ಎನ್. ಬ್ರಹ್ಮೇಶ್, ಸುನೀಲ್, ಕುಮಾರ್, ರಾಜೇಂದ್ರಕುಮಾರ್, ಪದ್ಮನಾಭ, ರಮೇಶ್, ರಶ್ಮಿತಾ ಬ್ರಹ್ಮೇಶ್, ಲಕ್ಮ್ಮೀ ನವೀನ್, ವನಿತಾ, ವಾಣಿ, ಇತರರು ಭಾಗವಹಿಸಿದ್ದರು.