ಸಾರಾಂಶ
ಮಹಾವೀರರು ಐದು ತತ್ವ ನೀಡಿದ್ದಾರೆ, ಅದು ಸಮೃದ್ಧ ಜೀವನ ಮತ್ತು ಶಾಂತಿಯ ಮಾರ್ಗವಾಗಿದೆ. ಅಹಿಂಸೆ, ಸತ್ಯ ಹಾಗೂ ಅಸೆ ಹುಟ್ಟಿಸುವ ಎಲ್ಲ ವಸ್ತು ಗಳಿಂದ ದೂರವಿರುವುದು ಮತ್ತು ಮಹಿಳೆಯರ ಸಬಲೀಕರಣದ ಕುರಿತು ಸುಮಾರು 2500 ವರ್ಷಗಳ ಹಿಂದೆ ಅವರು ಬೋಧಿಸಿದ ಬಹಳಷ್ಟು ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಡಾ. ಸತೀಶಗೌಡ. ಎಂ. ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಮಹಾವೀರರು ಐದು ತತ್ವ ನೀಡಿದ್ದಾರೆ, ಅದು ಸಮೃದ್ಧ ಜೀವನ ಮತ್ತು ಶಾಂತಿಯ ಮಾರ್ಗವಾಗಿದೆ. ಅಹಿಂಸೆ, ಸತ್ಯ ಹಾಗೂ ಅಸೆ ಹುಟ್ಟಿಸುವ ಎಲ್ಲ ವಸ್ತು ಗಳಿಂದ ದೂರವಿರುವುದು ಮತ್ತು ಮಹಿಳೆಯರ ಸಬಲೀಕರಣದ ಕುರಿತು ಸುಮಾರು 2500 ವರ್ಷಗಳ ಹಿಂದೆ ಅವರು ಬೋಧಿಸಿದ ಬಹಳಷ್ಟು ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೂನ್ನೂರಿನ ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸತೀಶಗೌಡ. ಎಂ. ಹೇಳಿದರು.ನಗರದ ಬಿಎಲ್ಡಿಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ ಇಡಿ)ದಲ್ಲಿ ಏರ್ಪಡಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಹಾವೀರರು ಬೋಧಿಸಿದ ಶಾಂತಿ, ಅಹಿಂಸಾ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.ಪ್ರಶಿಕ್ಷಣಾರ್ಥಿಗಳಾದ ಚೇತನ ದೈಗೊಂಡ, ತೇಜಸ್ವಿನಿ ದೇಗೌಡ ಮಹಾವೀರ ಜಯಂತಿಯ ಕುರಿತು ಮಾತನಾಡಿದರು. ಪ್ರೊ. ಎಲ್. ಎಮ್. ಮಾರ್ಕಪನಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಸಾಂಸ್ಕೃತಿಕ ವಿಭಾಗದ ಕಾರ್ಯಧ್ಯಕ್ಷ ಪ್ರೊ.ಪ್ರೇಮಾನಂದ ಹಿರೇಮಠ, ಪ್ರೊ.ಅಶ್ವಿನಿ ಅನಂತಪೂರ, ದೈಹಿಕ ನಿರ್ದೇಶಕರಾದಮಹಾದೇವ ಗಲಬಿ ಉಪಸ್ಥಿತರಿದ್ದರು.
ಶ್ರುತಿ ಕೋಲಕಾರ ಹಾಗು ದೇವಮ್ಮ ಪ್ರಾರ್ಥಿಸಿದರು. ಸಂಗಮೇಶ ಪಾಟೀಲ ಸ್ವಾಗತಿಸಿದರು. ಬಸಮ್ಮ ಉಪ್ಪಲದಿನ್ನಿ ಪರಿಚಯಿಸಿದರು. ನವೀನಕುಮಾರ ವಂದಿಸಿದರು. ಸ್ವಾತಿ ಚಿಂಚಕಂಡಿ ಹಾಗೂ ಪವನ ಸದಲಗಿ ನಿರೂಪಿಸಿದರು.