ಮಹಾಯೋಗಿ ವೇಮನ ರೆಡ್ಡಿ ಸಮಾಜದ ಅಮೂಲ್ಯ ರತ್ನ: ಭಾಸರೆಡ್ಡಿ

| Published : Jan 21 2024, 01:32 AM IST

ಸಾರಾಂಶ

ರೆಡ್ಡಿ ಸಮಾಜವು ದೊಡ್ಡ ಸಮಾಜವಾಗಿದ್ದು, ಹೇಮರೆಡ್ಡಿ ಮಲ್ಲಮ್ಮ ಟ್ರಸ್ಟ್ ವತಿಯಿಂದ ಮನೆ ಮನೆ ಹೋಗಿ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮನವರ ಸಂದೇಶಗಳನ್ನು ತಿಳಿಸಿ ಸಮಾಜ ಒಗ್ಗೂಡಿಸು ಕಾರ್ಯ ಯುವಕರು ಮಾಡಬೇಕು

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರು ಇಬ್ಬರು ರೆಡ್ಡಿ ಸಮಾಜದ ಎರಡು ರತ್ನಗಳಿದಂತೆ ಎಂದು ವೀರಶೈವ ಸಮಾಜದ ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ ಹೇಳಿದ್ದಾರೆ.

ತಾಲೂಕಿನ ಅಳೋಳ್ಳಿ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೆಡ್ಡಿ ಸಮಾಜವು ದೊಡ್ಡ ಸಮಾಜವಾಗಿದ್ದು, ಹೇಮರೆಡ್ಡಿ ಮಲ್ಲಮ್ಮ ಟ್ರಸ್ಟ್ ವತಿಯಿಂದ ಮನೆ ಮನೆ ಹೋಗಿ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮನವರ ಸಂದೇಶಗಳನ್ನು ತಿಳಿಸಿ ಸಮಾಜ ಒಗ್ಗೂಡಿಸು ಕಾರ್ಯ ಯುವಕರು ಮಾಡಬೇಕು ಎಂದು ಕರೆ ನೀಡಿದರು. ಈ ಟ್ರಸ್ಟ್ ವತಿಯಿಂದ ಅನೇಕ ಸಮಾಜಮುಖಿ ಕೆಲಸಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಭೀಮರೆಡ್ಡಿ ಕುರಾಳ್ ಮಾತನಾಡಿ, ಪಕ್ಷ ಭೇದ ಮರೆತು ರೆಡ್ಡಿ ಸಮಾಜದವರು ಒಗ್ಗೂಡಿ ಹೆಮ್ಮರೆಡ್ಡಿ ಮಲ್ಲಮ್ಮನವರ ದೇವಸ್ಥಾನ ಕಟ್ಟುವ ಕೆಲಸದಲ್ಲಿ ಶ್ರಮವಹಿಸಬೇಕು ಮುಂಬರುವ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಇದೆ ಸ್ಥಳದಲ್ಲಿ ಅದ್ಧೂರಿಯಾಗಿ ನಡೆಸಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಸೋಮಶೇಖರ್ ಮೊಸೇನಿ, ರವಿ ಪಡ್ಲ, ಶ್ರೀಶೈಲರೆಡ್ಡಿ ಭಂಕಲಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಗುರು ಇಟಗಿ, ರಾಜಶೇಖರ ಮಾಲಿಪಾಟೀಲ್, ಅಯ್ಯಣಗೌಡ ಕರದಾಳ್, ಸುಭಾಷ್ ಸ್ವಾಮಿ ತೊಟ್ನಳ್ಳಿ, ಶಿವಣ್ಣ ಹೂಗಾರ್, ನಿಜಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನರೆಡ್ಡಿ ಇಜಾರ್, ಉಮಾರೆಡ್ಡಿಗೌಡ ಸೇಡಂ, ವಿಶ್ವರಾಧ್ಯ ಕರದಾಳ, ವೆಂಕಟರೆಡ್ಡಿ ಯರಗಲ್, ರವೀಂದ್ರರೆಡ್ಡಿ ಭಂಕಲಗಿ, ನಂದಾರೆಡ್ಡಿ ತರಕಸಪೇಟ, ಮಲ್ಲರೆಡ್ಡಿ ಗೋಪಸೆನ್, ವಿಜಕುಮಾರ ದೇಶಮುಖ, ಅಶೋಕರೆಡ್ಡಿ ಆಲ್ಲೂರ್, ಅಮೀನರೆಡ್ಡಿ ನಾಚವಾರ್, ಭೀಮರೆಡ್ಡಿ ಗಡೆಸುರ, ತಿಪ್ಪರೆಡ್ಡಿ ಗೌನಳ್ಳಿ, ರವೀಂದ್ರರೆಡ್ಡಿ ಅನಪೂರ್, ಸಾಹೇಬರೆಡ್ಡಿ ಬಂಗಾರಿ ಸೇರಿದಂತೆ ಅನೇಕರು ಇದ್ದರು.