ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿವಿ ಮತ್ತು ದೇಶದ ಪ್ರಮುಖ ರಾಸಾಯನಿಕ ಕಂಪನಿ ಗುಜರಾತ್ ಹೆವಿ ಕೆಮಿಕಲ್ ಲಮಿಟೆಡ್ (ಜಿಎಚ್‌ಸಿಎಲ್) ಜತೆ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿವಿ ಮತ್ತು ದೇಶದ ಪ್ರಮುಖ ರಾಸಾಯನಿಕ ಕಂಪನಿ ಗುಜರಾತ್ ಹೆವಿ ಕೆಮಿಕಲ್ ಲಮಿಟೆಡ್ (ಜಿಎಚ್‌ಸಿಎಲ್) ಜತೆ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.

ಇಂಗಾಲ ಆಧರಿತ ಇಂಧನಗಳ ಒಟ್ಟು ಕ್ಯಾಲೋರಿಫಿಕ್ ಮೌಲ್ಯವನ್ನು (ಜಿಸಿವಿ) ತ್ವರಿತವಾಗಿ ಪತ್ತೆಹಚ್ಚುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ಈ ತಂತ್ರಜ್ಞಾನದ ಅಭಿವೃದ್ಧಿಗೆ ಜಎಚ್‌ಸಿಎಲ್‌ನ ವಾಣಿಜ್ಯ ವಿಭಾಗದ ಉಪಾಧ್ಯಕ್ಷ ಸಂಜಯ್ ಗುಪ್ತ ಹಾಗೂ ಮಾಹೆ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರು ಒಪ್ಪಂದದ ಪತ್ರಗಳಿಗೆ ಸಹಿ ಮಾಡಿದರು.

ಈ ಒಪ್ಪಂದವು ಅತ್ಯಾಧುನಿಕ ಸ್ಪೆಕ್ಟ್ರೋಸ್ಕೋಪಿ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್‌) ತಂತ್ರಜ್ಞಾನಗಳನ್ನು ಬಳಸಿ ಸ್ಥಳದಲ್ಲೇ ಇಂಧನದ ಗುಣಮಟ್ಟವನ್ನು ಕ್ಷಿಪ್ರವಾಗಿ ಪರೀಕ್ಷಿಸುವ ವ್ಯವಸ್ಥೆಯನ್ನು ಮಾಹೆಯ ‘ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಫಿಸಿಕ್ಸ್’ (ಎಂಐಎಪಿ) ಅಭಿವೃದ್ಧಿಪಡಿಸಲಿದೆ.

ಈ ತಂತ್ರಜ್ಞಾನದಲ್ಲಿ ಕ್ಷಣಾರ್ಧದಲ್ಲಿ ಇಂಧನ ಗುಣಮಟ್ಟ ನಿಖರವಾಗಿ ಪತ್ತೆ ಹಚ್ಚಬಹುದಾಗಿದ್ದು, ಇದರಿಂದ ಕೈಗಾರಿಕೆ ಮತ್ತು ಪ್ರಯೋಗಾಲಯದ ನಡುವಿನ ಅಂತರ ಕಡಿಮೆಯಾಗಿ, ಸಮಯ ಉಳಿತಾಯವಾಗಿ, ಕೈಗಾರಿಕಾ ವಲಯದಲ್ಲಿ ತ್ವರಿತ ಹಾಗೂ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ.

ಜಿಎಚ್‌ಸಿಎಲ್‌ನ ಸುತ್ರಾಪ ಘಟಕದ ಕಾರ್ಯಾಚರಣೆ ಮುಖ್ಯಸ್ಥ ಮಯೂರೇಶ್ ಹೆಡೆ, ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, ಎಂಐಎಪಿಯ ಪ್ರಧಾನ ಸಂಶೋಧಕರಾಗಿ ಡಾ. ಉಣ್ಣಿಕೃಷ್ಣನ್ ವಿ.ಕೆ., ಎಂಐಎಪಿ ನಿರ್ದೇಶಕ ಡಾ. ಸಾಜನ್ ಡೇನಿಯಲ್ ಜಾರ್ಜ್ ಮತ್ತು ಮಾಹೆಯ ಕಾರ್ಪೊರೇಟ್ ಸಂಪರ್ಕ ವಿಭಾಗದ ನಿರ್ದೇಶಕ ಡಾ. ಹರೀಶ್‌ ಕುಮಾರ್ ಹಾಜರಿದ್ದರು.