ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ ಅಂಗಸಂಸ್ಥೆ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ)ಯ ಡೀನ್ ಹಾಗೂ ಸಮುದಾಯ ಆರೋಗ್ಯ ವಿಭಾಗದ ಪ್ರೊಫೆಸರ್ ಡಾ. ಬಿ. ಉನ್ನಿಕೃಷ್ಣನ್ ಹಾಗೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಹಾಗೂ ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗದ ಪ್ರೊಫೆಸರ್ ಡಾ. ಶಿರನ್ ಶೆಟ್ಟಿ ಅವರು ಎಡಿನ್‌ಬರ್ಗ್‌ನ ಪ್ರತಿ಼ಷ್ಠಿತ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್‌ನಿಂದ ಫೆಲೋ ಆಗಿ ಆಯ್ಕೆಯಾಗಿದ್ದಾರೆ. ಈ ನಿಮಿತ್ತ ಅವರನ್ನ ಮಾಹೆಯಲ್ಲಿ ಅಭಿನಂದಿಸಲಾಯಿತು.

ಮಣಿಪಾಲ: ಇಲ್ಲಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ ಅಂಗಸಂಸ್ಥೆ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ)ಯ ಡೀನ್ ಹಾಗೂ ಸಮುದಾಯ ಆರೋಗ್ಯ ವಿಭಾಗದ ಪ್ರೊಫೆಸರ್ ಡಾ. ಬಿ. ಉನ್ನಿಕೃಷ್ಣನ್ ಹಾಗೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಹಾಗೂ ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗದ ಪ್ರೊಫೆಸರ್ ಡಾ. ಶಿರನ್ ಶೆಟ್ಟಿ ಅವರು ಎಡಿನ್‌ಬರ್ಗ್‌ನ ಪ್ರತಿ಼ಷ್ಠಿತ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್‌ನಿಂದ ಫೆಲೋ ಆಗಿ ಆಯ್ಕೆಯಾಗಿದ್ದಾರೆ. ಈ ನಿಮಿತ್ತ ಅವರನ್ನ ಮಾಹೆಯಲ್ಲಿ ಅಭಿನಂದಿಸಲಾಯಿತು.ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಫ್ ಎಡಿನ್‌ಬರ್ಗ್ ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಸಂಸ್ಥೆಯಾಗಿದ್ದು, ಅದು ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಹಾಗೂ ಕೊಡುಗೆಗಳನ್ನು ನೀಡಿದ ವೈದ್ಯರಿಗೆ ಜಾಗತಿಕ ಮಟ್ಟದ ಮನ್ನಣೆಯಾಗಿ ಈ ಫೆಲೋಶಿಪ್ ನೀಡುತ್ತದೆ.

ಈ ಬಗ್ಗೆ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು, ಡಾ. ಉನ್ನಿಕೃಷ್ಣನ್ ಹಾಗೂ ಡಾ. ಶಿರನ್ ಶೆಟ್ಟಿ ಅವರು ಎಫ್‌ಆರ್‌ಸಿಪಿ ಫೆಲೋ ಆಗಿ ಆಯ್ಕೆಯಾಗಿರುವುದು ಮಾಹೆಗೆ ಹೆಮ್ಮೆಯ ವಿಷಯ. ಇದು ಆರೋಗ್ಯ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಅವರು ನೀಡಿರುವ ಅತ್ಯುತ್ತಮ ಕೊಡುಗೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಶ್ಲಾಘಿಸಿದರು.ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ಈ ಇಬ್ಬರು ವೈದ್ಯರಿಗೆ ಸಿಕ್ಕಿರುವ ಈ ಮನ್ನಣೆ ಮಾಹೆಯ ವೈದ್ಯಕೀಯ ಮತ್ತು ಶೈಕ್ಷಣಿಕ ಸಮುದಾಯಕ್ಕೆ ದೊಡ್ಡ ಪ್ರೇರಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಹಕುಲಪತಿ (ಮಂಗಳೂರು ಕ್ಯಾಂಪಸ್) ಡಾ. ದಿಲೀಪ್ ನಾಯಕ್, ಕುಲಸಚಿವ ಡಾ. ಗಿರಿಧರ ಕಿಣಿ ಹಾಗೂ ಮಾಹೆಯ ಹಿರಿಯ ಅಧಿಕಾರಿಗಳು ಹಾಗೂ ವೈದ್ಯ ಕಾಲೇಜಿನ ಹಿರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.