ಸಾರಾಂಶ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (ಎಂಸಿಎಚ್‌ಪಿ) ವತಿಯಿಂದ ಇಂಡಿಯನ್ ಅಸೋಸಿಯೇಶನ್ ಆಫ್ ರೆಸ್ಪಿರೇಟರಿ ಕೇರ್ (ಐಎಆರ್‌ಸಿ) ಇದರ ವಾರ್ಷಿಕ ಸಮ್ಮೇಳನ ರೆಸ್‌ಕೇರ್- 2025ನ್ನು ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (ಎಂಸಿಎಚ್‌ಪಿ) ವತಿಯಿಂದ ಇಂಡಿಯನ್ ಅಸೋಸಿಯೇಶನ್ ಆಫ್ ರೆಸ್ಪಿರೇಟರಿ ಕೇರ್ (ಐಎಆರ್‌ಸಿ) ಇದರ ವಾರ್ಷಿಕ ಸಮ್ಮೇಳನ ರೆಸ್‌ಕೇರ್- 2025ನ್ನು ಆಯೋಜಿಸಲಾಗಿತ್ತು.3 ದಿನಗಳ ಈ ರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿದ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ ಮತ್ತು ಸಹಉಪಕಲಪತಿ ಡಾ. ಶರತ್ ಕೆ. ರಾವ್, ಆಧುನಿಕ ಆರೋಗ್ಯ ರಕ್ಷಣೆಯಲ್ಲಿ ಉಸಿರಾಟದ ಸಮಸ್ಯೆಗಳ ಚಿಕಿತ್ಸಕರ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು.ವಿಷಯ ತಜ್ಞರಾದ ಡಾ. ಇಫ್ತಿಕರ್ ಅಲಿ, ರಾಷ್ಟ್ರೀಯ ಅಲೈಡ್ ಮತ್ತು ಹೆಲ್ತ್‌ಕೇರ್ ವೃತ್ತಿಗಳ ಆಯೋಗ ಮತ್ತು ಅದರ ವಿಸ್ತೃತ ವ್ಯಾಪ್ತಿಯ ಕುರಿತು ವರ್ಚುವಲ್ ಭಾಷಣ ಮಾಡಿದರು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಅರಿವಳಿಕೆ ವಿಭಾಗದ ಮಾಜಿ ಮುಖ್ಯಸ್ಥ ಡಾ. ವಿ.ರಾಮಕುಮಾರ ಮತ್ತು ಡಾ. ಅನಿತಾ ಶೆಣೈ ಅವರು ಮುಖ್ಯ ಭಾಷಣ ಮಾಡಿದರು.ಐಎಆರ್‌ಸಿ ಅಧ್ಯಕ್ಷ ಡಾ. ಹರೀಶ್ ಎಂ.ಎಂ. ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಸೌಮಿ ಜಾನ್ಸನ್ ಉಪಸ್ಥಿತರಿದ್ದರು. ಎಂಸಿಎಚ್‌ಪಿ ಇದರ ಡೀನ್ ಡಾ. ಅರುಣ್ ಜಿ. ಮಯ್ಯ ಸ್ವಾಗತಿಸಿದರು. ಕೆಎಂಸಿಯ ಉಸಿರಾಟದ ಚಿಕಿತ್ಸೆಯ ವಿಭಾಗದ ಮುಖ್ಯಸ್ಥೆ (ಪ್ರಭಾರ) ಡಾ. ಪ್ರತಿಭಾ ತೋಡೂರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಈ ಸಮ್ಮೇಳನದಲ್ಲಿ ಸಂಶೋಧಕರು, ಶಿಕ್ಷಣ ತಜ್ಞರು, ವೈದ್ಯರು ಮತ್ತು ಉದ್ಯಮ ವೃತ್ತಿಪರರು ಸೇರಿದಂತೆ ಭಾರತಾದ್ಯಂತ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.;Resize=(128,128))
;Resize=(128,128))
;Resize=(128,128))