ಸಾರಾಂಶ
ಮಾಹೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಮೇಘಮಲ್ಹಾರ್’ ವಿಭಾಗದಲ್ಲಿ ಇಂದ್ರಾನಿಲ್ ಸೇನ್‌ಗುಪ್ತಾ ಅವರ ‘ರೋಮ್ಯಾನ್ಸ್’ ಎಂಬ ಛಾಯಾಚಿತ್ರ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ.
ಮಣಿಪಾಲ: ಮಾಹೆ ಆಯೋಜಿಸಿದ್ದ ರಾಷ್ಟ್ರಮಟ್ಟದ ‘ಛಾಯಾಚಿತ್ರ ಸ್ಪರ್ಧೆ 2025’ಯಲ್ಲಿ ಕೊಲ್ಕೊತ್ತಾದ ಇಂದ್ರನೀಲ್ ಗುಪ್ತಾ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ.
ಸ್ಪರ್ಧೆಯನ್ನು ‘ಮೇಘಮಲ್ಹಾರ್’ ಎಂಬ ಸಾರ್ವಜನಿಕ ವಿಭಾಗ ಮತ್ತು ‘ಮೈ ಮಾಹೆ, ಮೈ ಕ್ಯಾಂಪಸ್’ ವಿದ್ಯಾರ್ಥಿ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು.‘ಮೇಘಮಲ್ಹಾರ್’ ವಿಭಾಗದಲ್ಲಿ ಇಂದ್ರಾನಿಲ್ ಸೇನ್‌ಗುಪ್ತಾ ಅವರ ‘ರೋಮ್ಯಾನ್ಸ್’ ಎಂಬ ಛಾಯಾಚಿತ್ರ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ. ಎನಾಮುಲ್ ಕಬೀರ್ ಅವರ ‘ವೆನ್ ಇನ್ ರಿವರ್’ ದ್ವಿತೀಯ ಮತ್ತು ಮಧುಸೂಧನ್ ಎಸ್. ಆರ್. ಅವರ ‘ಇಲ್ಯುಮಿನೇಷನ್ ಆಫ್ ರೇನ್’ ತೃತೀಯ ಬಹುಮಾನಗಳನ್ನು ಗೆದ್ದುಕೊಂಡಿದೆ.‘ಮೈ ಮಾಹೆ, ಮೈ ಕ್ಯಾಂಪಸ್’ ವಿದ್ಯಾರ್ಥಿ ವಿಭಾಗದಲ್ಲಿ ಸ್ವರೂಪ್ ದಿಡ್ಡಿ ಅವರ ‘ಎ ಕ್ರಿಮ್ಸನ್ ಟ್ವಿಲೈಟ್’ ಪ್ರಥಮ, ಕ್ಷಿತಿಜ್ ಖತ್ರಿ ಅವರ ‘ವೆನ್ ದಿ ಸ್ಕೈ ಸ್ಮೈಲ್ಸ್’ ದ್ವಿತೀಯ ಮತ್ತು ಅರ್ಜುನ್ ಕೆಂಜಾಲೆ ಅವರ ‘ಬ್ಯಾಸ್ಕೆಟ್‌ಬಾಲ್’ ತೃತೀಯ ಬಹುಮಾನಗಳನ್ನು ಗೆದ್ದುಕೊಂಡಿವೆ.ವಿಜೇತರ ಮತ್ತು ಅಂತಿಮ ಸುತ್ತಿಗೆ ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನವು ಸೆ. 17, 18 ಮತ್ತು 19, 2025 ರಂದು ಮಣಿಪಾಲದ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆಯಲಿದೆ. ಈ ಸ್ಪರ್ಧೆಯನ್ನು ಮಾಹೆ ಕುಲಪತಿ ಪದ್ಮಭೂಷಣ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬದ ಆಚರಣೆಯಂಗವಾಗಿ ಆಯೋಜಿಸಲಾಗಿತ್ತು.