ಮಾಹೆ ಪಿಎಸ್‌ಪಿಎಚ್‌: ಸ್ವಸ್ಥ್‌ 2025 ವಾರ್ಷಿಕ ಸಮ್ಮೇಳನ

| Published : Oct 18 2025, 02:02 AM IST

ಸಾರಾಂಶ

ಮಾಹೆಯ ಪ್ರಸನ್ನ ಸ್ಕೂಲ್ ಆಫ್‌ ಪಬ್ಲಿಕ್ ಹೆಲ್ತ್‌ (ಪಿಎಸ್‌ಪಿಎಚ್‌) ಇದರ ವಿದ್ಯಾರ್ಥಿಗಳೇ ನೇತೃತ್ವ ವಹಿಸಿದ್ದ 3ನೇ ವಾರ್ಷಿಕ ಸಮ್ಮೇಳನ - ಸ್ವಸ್ಥ್ 2025 ಯಶಸ್ವಿಯಾಗಿ ಸಂಪನ್ನಗೊಂಡಿತು.

ಮಣಿಪಾಲ: ಮಾಹೆಯ ಪ್ರಸನ್ನ ಸ್ಕೂಲ್ ಆಫ್‌ ಪಬ್ಲಿಕ್ ಹೆಲ್ತ್‌ (ಪಿಎಸ್‌ಪಿಎಚ್‌) ಇದರ ವಿದ್ಯಾರ್ಥಿಗಳೇ ನೇತೃತ್ವ ವಹಿಸಿದ್ದ 3ನೇ ವಾರ್ಷಿಕ ಸಮ್ಮೇಳನ - ಸ್ವಸ್ಥ್ 2025 ಯಶಸ್ವಿಯಾಗಿ ಸಂಪನ್ನಗೊಂಡಿತು.

‘ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಸ್ಥಿರ ಕಾರ್ಯಸಾಧ್ಯ ಪರ್ಯಾಯ ಪರಿಹಾರಗಳು’ ಎಂಬ ವಿಷಯದ ಕುರಿತು ನಡೆದ ಈ ಸಮ್ಮೇಳನವನ್ನು ಸಂಸ್ಥೆಯ ಆರೋಗ್ಯ ರಕ್ಷಣೆ ಮತ್ತು ಆಸ್ಪತ್ರೆ ನಿರ್ವಹಣಾ ವಿಭಾಗವು ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿತ್ತು. ಡಿಜಿಟಲ್ ಆರೋಗ್ಯ ರಕ್ಷಣೆಯಲ್ಲಿ ಬದಲಾಗುತ್ತಿರುವ ವಿಚಾರಗಳನ್ನು ಚರ್ಚಿಸಲು ಈ ಸಮ್ಮೇಳನದಲ್ಲಿ 185 ವಿದ್ಯಾರ್ಥಿಗಳು, ಆರೋಗ್ಯ ವೃತ್ತಿಪರರು, ಶಿಕ್ಷಣ ತಜ್ಞರು, ಆಸ್ಪತ್ರೆಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.ಬೆಳಗಾವಿಯ ಕೆಎಲ್ಇ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ ಸಮ್ಮೇ‍ಳನ ಉದ್ಘಾಟಿಸಿ, ನೈಜ ಪ್ರಪಂಚದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ವಿದ್ಯಾರ್ಥಿಗಳು ಯೋಚಿಸಬೇಕು ಎಂದು ಹೇಳಿದರು.

ನಂತರ ನಡೆದ ‘ಬಿಲ್ಡಿಂಗ್ ರೆಸಿಲೆಂಟ್ ಟೀಚಿಂಗ್ ಹಾಸ್ಪಿಟಲ್ಸ್ : ಸಸ್ಟೈನಬಲ್ ಮಾಡೆಲ್ಸ್ ಫಾರ್ ದಿ ಫ್ಯೂಚರ್’ ವಿಷಯದ ಕುರಿತಾದ ಪ್ಯಾನಲ್ ಚರ್ಚೆಯಲ್ಲಿ ಮಂಗಳೂರಿನ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಸೈನ್ಸಸ್, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್‌ನ ತಜ್ಞರು ಭಾಗವಹಿಸಿದ್ದರು.ವಿದ್ಯಾರ್ಥಿಗಳಿಗಾಗಿ ನಡೆದ ಪೋಸ್ಟರ್ ಪ್ರಸ್ತುತಿಯು ಆಸ್ಪತ್ರೆಗಳಲ್ಲಿನ ಸುಸ್ಥಿರತೆಯಿಂದ ಹಿಡಿದು ಟೆಲಿಮೆಡಿಸಿನ್ ಮತ್ತು ಔಷಧ ಶಾಸ್ತ್ರದವರೆಗೆ ವ್ಯಾಪಕ ಶ್ರೇಣಿಯ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು. ಸಮ್ಮೇಳನ ಪೂರ್ವ ಸುಸ್ಥಿರ ಆರೋಗ್ಯ ರಕ್ಷಣಾ ಉದ್ಯಮಗಳಿಗೆ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು, ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ , ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ, ಆಸ್ಪತ್ರೆ ಯೋಜನೆ ಮತ್ತು ವಿನ್ಯಾಸ, ಆರೋಗ್ಯ ಕ್ಷೇತ್ರದಲ್ಲಿ ನಾಯಕತ್ವ ಹೀಗೆ 5 ಕಾರ್ಯಾಗಾರಗಳನ್ನು ನಡೆಸಲಾಗಿತ್ತು.