ಮಾಹೆ, ಟೆನ್ವಿಕ್ ಸ್ಪೋರ್ಟ್ಸ್‌ ಕ್ರೀಡಾ ವೃತ್ತಿಪರರನ್ನು ಬೆಳೆಸುವ ಒಪ್ಪಂದ

| Published : Mar 07 2025, 12:47 AM IST

ಮಾಹೆ, ಟೆನ್ವಿಕ್ ಸ್ಪೋರ್ಟ್ಸ್‌ ಕ್ರೀಡಾ ವೃತ್ತಿಪರರನ್ನು ಬೆಳೆಸುವ ಒಪ್ಪಂದ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಕ್ರೀಡಾ ಕ್ಷೇತ್ರಕ್ಕೆ ಶಕ್ತಿ ತುಂಬುವ ಪ್ರಯತ್ನವಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಬೆಂಗಳೂರಿನಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿವೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ದೇಶದ ಕ್ರೀಡಾ ಕ್ಷೇತ್ರಕ್ಕೆ ಶಕ್ತಿ ತುಂಬುವ ಪ್ರಯತ್ನವಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಬೆಂಗಳೂರಿನಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿವೆ.ಈ ಸಂದರ್ಭದಲ್ಲಿ ಮಾಹೆಯ ಉಪಕುಲಪತಿ ಲೆಜ (ಡಾ.) ಎಂ. ಡಿ. ವೆಂಕಟೇಶ್, ಕುಲಸಚಿವ ಡಾ.ಗಿರಿಧರ್ ಪೈ, ಟೆನ್ವಿಕ್ ಸ್ಪೋರ್ಟ್ಸ್ ನ ಸಹ ಸಂಸ್ಥಾಪಕರಾದ ಅನಿಲ್ ಕುಂಬ್ಳೆ ಮತ್ತು ವಸಂತ ಭಾರದ್ವಾಜ್ ಉಪಸ್ಥಿತರಿದ್ದರು.

ಈ ಮೂಲಕ ಕ್ರೀಡಾ ಉದ್ಯಮಕ್ಕೆ ಬೇಕಾದ ಕೌಶಲ್ಯಪೂರ್ಣ ಕ್ರೀಡಾ ವೃತ್ತಿಪರರನ್ನು ಬೆಳೆಸಲು ಮತ್ತು ಕ್ರೀಡಾಪಟುಗಳಿಗೆ ಅವರ ಕ್ರೀಡಾದಿನಗಳನ್ನು ಹೊರತುಪಡಿಸಿ ಅತ್ಯುತ್ತಮ ವೃತ್ತಿ ಮಾರ್ಗಗಳನ್ನು ಹೊಂದಲು ನೆರವಾಗುವ ಸಮಗ್ರ ಶೈಕ್ಷಣಿಕ ಮತ್ತು ಮೂಲಸೌಕರ್ಯ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಮಾಹೆ ತಿಳಿಸಿದೆ.ಈ ಸಹಭಾಗಿತ್ವದ ಮೂಲಕ ಮಾಹೆ ಕ್ಯಾಂಪಸ್‌ ಗಳಲ್ಲಿ ಉನ್ನತ ಕಾರ್ಯಕ್ಷಮತೆಯ ಕ್ರೀಡಾ ಕೇಂದ್ರಗಳ ಸ್ಥಾಪನೆಯಾಗಲಿದ್ದು, ಇಲ್ಲಿ ವೃತ್ತಿಪರ ಕ್ರೀಡಾಪಟುಗಳಿಗೆ ತಮ್ಮ ತರಬೇತಿಯ ಜೊತೆಗೆ ಶೈಕ್ಷಣಿಕ ಪದವಿಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಮತ್ತು ಕ್ರೀಡಾ ಸಂಬಂಧಿತ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್‌ ಶಿಪ್ ಪಡೆಯುವ ಮತ್ತು ಪ್ರಾಯೋಗಿಕ ಕಲಿಕೆ ಕೈಗೊಳ್ಳುವ ಅವಕಾಶಗಳನ್ನು ಒದಗಿಸಲಾಗುತ್ತದೆ. ಅಲ್ಲದೇ ಸಕ್ರಿಯ ಮತ್ತು ನಿವೃತ್ತ ಕ್ರೀಡಾಪಟುಗಳಿಗೆ ಕಾರ್ಪೊರೇಟ್ ಮತ್ತು ಉದ್ಯಮಗಳಲ್ಲಿ ಉತ್ತಮ ಹುದ್ದೆಗಳನ್ನು ಪಡೆಯಲು ಅಗತ್ಯವಾದ ಕೌಶಲ್ಯಗಳು ಮತ್ತು ಅರ್ಹತೆಗಳನ್ನು ಒದಗಿಸಲಾಗುತ್ತದೆ. ಭಾರತದ ಕ್ರೀಡಾ ಉದ್ಯಮವು ಬಹಳ ತೀವ್ರ ಬೆಳೆಯುತ್ತಿದ್ದು, ಈ ವ್ಯವಹಾರವು ಪ್ರಸ್ತುತ 52 ಬಿಲಿಯನ್ ಡಾಲರ್‌ ಗಳಷ್ಟಿದ್ದು, 2030ರ ವೇಳೆಗೆ 130 ಬಿಲಿಯನ್ ಡಾಲರ್‌ ಗಳನ್ನು ಮೀರಲಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ 1 ಕೋಟಿಗಿಂತ ಹೆಚ್ಚು ಕೌಶಲ್ಯಪೂರ್ಣ ಕ್ರೀಡಾ ಸಿಬ್ಬಂದಿಯ ಅಗತ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಉದ್ಯಮಕ್ಕೆ ಅರ್ಹರಾದ ತರಬೇತುದಾರರು, ಕ್ರೀಡಾ ವಿಜ್ಞಾನಿಗಳು, ಕಾರ್ಯಕ್ಷಮತಾ ವಿಶ್ಲೇಷಕರು, ಫಿಸಿಯೋಥೆರಪಿಸ್ಟ್‌ ಗಳು ಮತ್ತು ಕ್ರೀಡಾ ತಂತ್ರಜ್ಞರ ಕೊರತೆಯನ್ನು, ಈ ಸಹಭಾಗಿತ್ವದ ಮೂಲಕ ನೀಗಲು ಪ್ರಯತ್ನಿಸಲಾಗುತ್ತದೆ ಎಂದು ಮಾಹೆ ತಿಳಿಸಿದೆ. ಮಾಹೆ ಅಧ್ಯಕ್ಷ, ಮಣಿಪಾಲ್ ಎಜುಕೇಷನ್ ಆಂಡ್ ಮಣಿಪಾಲ್ ಮೆಡಿಕಲ್ ಗ್ರೂಪ್ ನ ಚೇರ್‌ಮನ್ ರಂಜನ್ ಪೈ ಅವರು, "ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ ಸಹಭಾಗಿತ್ವವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟತೆ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ಸಹಯೋಗದ ಮೂಲಕ ಕ್ರೀಡಾಂಗಣದಲ್ಲಿ ಮತ್ತು ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ಹೊಸ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಳೆಸುವ ಕಾರ್ಯ ನಡೆಯಲಿದೆ. ಇದು ಆರೋಗ್ಯವಂತ ರಾಷ್ಟ್ರ ನಿರ್ಮಾಣದೆಡೆಗೆ ಮತ್ತು ಸ್ಪರ್ಧಾತ್ಮಕ ಕ್ರೀಡಾ ಸಂಸ್ಕೃತಿ ಬೆಳೆಸುವುದರೆಡೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದಭಿಪ್ರಾಯಪಟ್ಟಿದ್ದಾರೆ.