ಮುಖ್ಯರಸ್ತೆ ಅಗಲೀಕರಣಕ್ಕೆ ತೆರವು ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದ್ದು, ಅವಶೇಷ ತೆರವು ಕಾರ್ಯಾಚರಣೆ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳುವ ಲಕ್ಷಗಳಿವೆ.
ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣಕ್ಕೆ ತೆರವು ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದ್ದು, ಅವಶೇಷ ತೆರವು ಕಾರ್ಯಾಚರಣೆ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳುವ ಲಕ್ಷಗಳಿವೆ. ತೆರವು ಕಾರ್ಯಾಚರಣೆ 13ನೇ ದಿನಕ್ಕೆ ಕಾಲಿಟ್ಟಿದೆ. ಅವಶೇಷ ತೆರವುಗೊಳಿಸುವ ಕಾರ್ಯ 12 ದಿನವಾದ ಬುಧವಾರವೂ ಭರದಿಂದ ಸಾಗಿತು.
ಕಳೆದ ಐದಾರು ದಿನದಿಂದ ಸತತವಾಗಿ ಸುರಿದಿದ್ದ ಮಳೆ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿತ್ತು. ಮಂಗಳವಾರ ಮತ್ತು ಬುಧವಾರ ಮಳೆ ಸ್ಥಗಿತಗೊಂಡಿದ್ದು ತೆರವು ಕಾರ್ಯಕ್ಕೆ ಮತ್ತಷ್ಟು ವೇಗ ದೊರೆತಿದೆ. ಜಿಲ್ಲಾಡಳಿತ ಕಾರ್ಯಾಚರಣೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಬೃಹತ್ ಟಿಪ್ಪರ್ ಹಾಗೂ ಜೆಸಿಬಿ ಸಹಾಯದಿಂದ ಕಾರ್ಯ ನಡೆಸಿತು.ಸ್ವಯಂಪ್ರೇರಿತ ತೆರವು ಮಾಡಿದ ಶೆಟ್ಟರ
ಅಗಲೀಕರಣ ಕಾರ್ಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ತಮ್ಮ ಬೃಹತ್ ಕಟ್ಟಡವನ್ನು ಸ್ವಯಂಪ್ರೇರಿತರಾಗಿ ತೆರವು ಮಾಡಿಕೊಂಡು ಅಗಲೀಕರಣಕ್ಕೆ ಸಾಥ್ ನೀಡಿದರು. 1941ರಲ್ಲಿ ನಿರ್ಮಾಣ ಮಾಡಿದ್ದ ತಮ್ಮ ಕಟ್ಟಡವನ್ನ ಉಳಿಸಿಕೊಳ್ಳಲು ಹೋರಾಟ ನಡಸಿದ್ದ ಅವರು, ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ತೆರವುಗೊಳಿಸಿದರು. ಉಳಿದಂತೆ ಪಟ್ಟಣದ ಸುಭಾಸ ಸರ್ಕಲ್ ನಿಂದ ಹಿಡಿದು ಹಳೆಯ ಗುಮ್ಮನಹಳ್ಳಿ ರಸ್ತೆ ವರೆಗೆ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರೆದಿದೆ.