ಅವಿರೋಧ ಆಯ್ಕೆ ಮೂಲಕ ಸೌಹಾರ್ದತೆ ಕಾಪಾಡಿ

| Published : Nov 25 2024, 01:01 AM IST

ಅವಿರೋಧ ಆಯ್ಕೆ ಮೂಲಕ ಸೌಹಾರ್ದತೆ ಕಾಪಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ನೌಕರರ ಸಂಘಧ ಪದಾಧಿಕಾರಿಗಳ ಚುನಾವಣೆಗೆ ಅವಕಾಶ ನೀಡದೇ ಎಲ್ಲರೂ ಕುಳಿತು ಮಾತನಾಡಿ, ಒಮ್ಮತದ ಆಯ್ಕೆ ಮಾಡಿಕೊಂಡು ಸಂಘಟನೆಯನ್ನು ನೌಕರರ ಹಿತ ರಕ್ಷಣೆಗೆ ಬಳಸಿಕೊಳ್ಳಬೇಕು. ನೌಕರರ ಭವನ, ಗುರುಭವನ ನಿರ್ಮಾಣದ ಸಂದರ್ಭ ಜಿಲ್ಲಾ ನೌಕರರ ಸಂಘದೊಂದಿಗೆ ತಾವು ಸದಾ ಇರುವುದಾಗಿ ಶಾಸಕ ಕೊತ್ತೂರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರನೌಕರರ ಸಂಘದ ಚುನಾವಣೆಯಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ, ನೀವು ಸಂಘಟಿತರಾಗಿ, ಒಗ್ಗಟ್ಟಾಗಿರಿ, ನೌಕರ ಸ್ನೇಹಿಯಾಗಿ ಅವಿರೋಧ ಆಯ್ಕೆಗೆ ಅವಕಾಶ ನೀಡಿ, ಸೌಹಾರ್ದತೆಯೊಂದಿಗೆ ಸಂಘವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಕರೆ ನೀಡಿದರು.ತಮ್ಮ ನಿವಾಸದಲ್ಲಿ ಸಹಕಾರ ರತ್ನ ಪ್ರಶಸ್ತಿಗೆ ಭಾಜನವಾಗಿರುವ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮತ್ತು ಇತರೆ ಪದಾಧಿಕಾರಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ನೌಕರರ ಭವನ ನಿರ್ಮಾಣ

ಚುನಾವಣೆಗೆ ಅವಕಾಶ ನೀಡದೇ ಎಲ್ಲರೂ ಕುಳಿತು ಮಾತನಾಡಿ, ಒಮ್ಮತದ ಆಯ್ಕೆ ಮಾಡಿಕೊಂಡು ಸಂಘಟನೆಯನ್ನು ನೌಕರರ ಹಿತ ರಕ್ಷಣೆಗೆ ಬಳಸಿಕೊಳ್ಳಿ. ನೌಕರರ ಭವನ, ಗುರುಭವನ ನಿರ್ಮಾಣದ ಸಂದರ್ಭ ಜಿಲ್ಲಾ ನೌಕರರ ಸಂಘದೊಂದಿಗೆ ತಾವು ಸದಾ ಇರುವುದಾಗಿ ತಿಳಿಸಿದ ಅವರು, ಜಿಲ್ಲೆಯ ಜನತೆಯ ಆಶೋತ್ತರಗಳನ್ನು ಈಡೇರಿಸಲು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ನಿಮ್ಮ ಶ್ರಮದ ಹಿಂದೆ ನಾನು ಇರುವುದಾಗಿ ಭರವಸೆ ನೀಡಿದರು.

ಶುಕ್ರವಾರದ ಸಭೆಗೆ ಜಿಲ್ಲಾನೌಕರರ ಸಂಘದ ಅಧ್ಯಕ್ಷರಿಗೆ ಆಹ್ವಾನ ನೀಡದ ಕುರಿತು ಕೇಳಿದಾಗ, ಶಾಸಕರು ಉತ್ತರಿಸಿ ನಾನು ಎಲ್ಲರಿಗೂ ತಿಳಿಸಲು ಸೂಚಿಸಿದ್ದೆ ಆದರೆ ಏಕೆ ಈ ರೀತಿಯಾಯಿತು ಎಂಬುದು ನನಗೆ ತಿಳಿದಿಲ್ಲ. ಅವಿರೋಧ ಆಯ್ಕೆಯೊಂದಿಗೆ ಸಂಘಟನೆಯನ್ನು ನೌಕರ ಸ್ನೇಹಿಯಾಗಿ ಮುನ್ನಡೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಆದರೆ ಒಂದಿಬ್ಬರು ತಮ್ಮ ಅಧಿಕಾರದಾಸೆಗೆ ಇದೀಗ ನೌಕರರಲ್ಲಿ ಗೊಂದಲ ಸೃಷ್ಟಿಸಿ, ಸಣ್ಣ ಸಣ್ಣ ಇಲಾಖೆಗಳಲ್ಲೂ ಚುನಾವಣೆಗೆ ಪ್ರೇರೇಪಿಸಿ ವೈಮನಸ್ಯ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.

ಬಣ ರಾಜಕೀಯಕ್ಕೆ ಅವಕಾಶ ಇಲ್ಲ

ನೌಕರರ ಸಂಘದಲ್ಲಿ ಯಾವುದೇ ಬಣ ರಾಜಕೀಯಕ್ಕೆ ಅವಕಾಶವಿಲ್ಲ, ಇಲ್ಲಿ ಎಲ್ಲಾ ನಿರ್ದೇಶಕರಿಗೂ ಸ್ವಾಭಿಮಾನದಿಂದ ತಮ್ಮ ಅಧ್ಯಕ್ಷ,ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ಸ್ಪರ್ಧಿಸುವ ಸ್ವಾತಂತ್ರ್ಯವಿದೆ ಎಂದು ತಿಳಿಸಿ, ನೌಕರರ ಸಂಘದ ಭವನ ನಿರ್ಮಾಣ, ನೆನೆಗುದಿಗೆ ಬಿದ್ದಿರುವ ಗುರುಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲು ಮನವಿ ಮಾಡಿದರು.

ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್,ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕೋರಗಂಡಹಳ್ಳಿ ನಾರಾಯಣಸ್ವಾಮಿ, ನೌಕರರ ಸಂಘದ ಉಪಾಧ್ಯಕ್ಷ ಪುರುಷೋತ್ತಮ್, ನೂತನ ನಿರ್ದೇಶಕರಾದ ವೆಂಕಟಾಚಲಪತಿಗೌಡ,ಯು.ಗೋವಿಂದು, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಪ್ಪ, ಸರ್ವೆಇಲಾಖೆ ರವಿ, ಶಿಕ್ಷಕರಾದ ಕೃಷ್ಣಪ್ಪ, ವೆಂಕಟರಾಂ, ಮುನಿಬೈರಪ್ಪ, ಇಬ್ರಾಹಿಂ, ಉದ್ದಪ್ಪನಹಳ್ಳಿ ಕೃಷ್ಣಪ್ಪ, ಪಾಪಣ್ಣ, ಪಿ.ಟಿ.ವೆಂಕಟೇಶ್ ಇದ್ದರು.