ಸಾರಾಂಶ
ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾಯೋಜನೆಯಡಿ ನಿರ್ಮಾಣವಾಗುವ ಸಿಸಿ ರಸ್ತೆಗಳು, ಚರಂಡಿ ಕಾಮಗಾರಿಗಳು ಉತ್ತಮಗುಣಮಟ್ಟದಿಂದಕೂಡಿರಬೇಕು.
ಕುರುಗೋಡು: ಗ್ರಾಪಂ ಮಟ್ಟದಲ್ಲಿ ನಡೆಯುವ ಸಿಸಿ ರಸ್ತೆ, ಚರಂಡಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ಅವಧಿ ಒಳಗೆ ಪೂರ್ಣಗೊಳ್ಳಿಸಿ ಜನರಿಗೆ ಅನುಕೂಲ ಪಡಿಸುವಂತೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್ ಸೂಚನೆ ನೀಡಿದರು.
ಪಟ್ಟಣ ಸಮೀಪದ ಸಿದ್ದಮ್ಮನಹಳ್ಳಿ, ಗೆಣಿಕೆಹಾಳ್, ದಮ್ಮೂರು ಗ್ರಾಪಂಗಳ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾಯೋಜನೆಯಡಿಯಲ್ಲಿ ನಡೆಯುವಗ್ರಾವೆಲ್ರಸ್ತೆ, ಸಿಸಿ ರಸ್ತೆ, ಚರಂಡಿ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಉದ್ಯೋಗಖಾತ್ರಿಯ ಕಾಮಗಾರಿಗಳ ಕಡತ, ಗುಣಮಟ್ಟ, ಅಳತೆ ಪರಿಶೀಲನೆ ಮಾಡಿದರು. ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾಯೋಜನೆಯಡಿ ನಿರ್ಮಾಣವಾಗುವ ಸಿಸಿ ರಸ್ತೆಗಳು, ಚರಂಡಿ ಕಾಮಗಾರಿಗಳು ಉತ್ತಮಗುಣಮಟ್ಟದಿಂದಕೂಡಿರಬೇಕು. ಗುಣಮಟ್ಟದಲ್ಲಿಯಾವುದೇರೀತಿಯ ಲೋಪವಾಗದಂತೆ ನಿಗಾ ವಹಿಸುವ ಮೂಲಕ ಕಾಮಗಾರಿಯು ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಮಾಡಬೇಕುಎಂದು ಸೂಚಿಸಿದರು.ಈ ಸಂದರ್ಭದಲ್ಲಿ ಜಿಪಂ ಸಿಇಓ ರಾಹುಲ್ ಶರಣಪ್ಪ ಸಂಕನೂರು, ತಾಪಂ ಇಒ ಕೆ.ವಿ.ನಿರ್ಮಲಾ, .ಪಿಡಿಒ ಮಲ್ಲಿಕಾರ್ಜುನಇದ್ದರು. ಕಾರ್ಯದರ್ಶಿ. ಮಲ್ಲಿಕಾರ್ಜುನ, ಐ.ಇ.ಸಿ.ಸಂಯೋಜಕ ಚಂದ್ರಶೇಖರ ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ, ಸೇರಿತಾಪಂ ಸಿಬ್ಬಂದಿಗಳು ಇದ್ದರು.ಪಟ್ಟಣ ಸಮೀಪದ ಸಿದ್ದಮ್ಮನಹಳ್ಳಿ, ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾಯೋಜನೆಯಡಿಯಲ್ಲಿ ನಿರ್ಮಾಣಗೊಂಡಗ್ರಾವೆಲ್ರಸ್ತೆಕಾಮಗಾರಿ ಸ್ಥಳಕ್ಕೆ ಜಿಪಂ ಸಿಇಓ ರಾಹುಲ್ ಶರಣಪ್ಪ ಸಂಕನೂರ್ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.