ಸಾರಾಂಶ
ದಾಬಸ್‍ಪೇಟೆ: ರೈತರು ಮಣ್ಣಿನ ಆರೋಗ್ಯ ಕಾಪಾಡಬೇಕು, ಸಾವಯವ ಗೊಬ್ಬರ ಬಳಸಬೇಕು, ಘನ ತ್ಯಾಜ್ಯ ಜೀವಾಮೃತ, ಸೇರಿದಂತೆ ಸಮಗ್ರ ಕೃಷಿಯ ಹಲವು ಆಯಾಮಗಳನ್ನು ಅನುಸರಿಸಬೇಕೆಂದು ಬೆಂ.ಗ್ರಾ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಕಲಾವತಿ ತಿಳಿಸಿದರು.
ದಾಬಸ್‍ಪೇಟೆ: ರೈತರು ಮಣ್ಣಿನ ಆರೋಗ್ಯ ಕಾಪಾಡಬೇಕು, ಸಾವಯವ ಗೊಬ್ಬರ ಬಳಸಬೇಕು, ಘನ ತ್ಯಾಜ್ಯ ಜೀವಾಮೃತ, ಸೇರಿದಂತೆ ಸಮಗ್ರ ಕೃಷಿಯ ಹಲವು ಆಯಾಮಗಳನ್ನು ಅನುಸರಿಸಬೇಕೆಂದು ಬೆಂ.ಗ್ರಾ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಕಲಾವತಿ ತಿಳಿಸಿದರು.
ಮರಳಕುಂಟೆ ಗ್ರಾಮದಲ್ಲಿ ಮರಳಕುಂಟೆ ವಿಎಸ್ಸೆಸ್ಸೆನ್ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಜಲಾನಯನ ಅಭಿವೃದ್ಧಿ ಘಟಕದ ಯೋಜನೆಯಡಿ ಆಯೋಜಿಸಿದ್ದ ಜಲಾನಯನ ಯಾತ್ರಾ-2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಣ್ಣು ಹಾಗೂ ನೀರಿನ ಸಂರಕ್ಷಣೆ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಿ ರೈತರು, ಕೃಷಿ ಜಮೀನುಗಳಲ್ಲಿ ನೀರನ್ನು ಸಂರಕ್ಷಿಸುವ ಜೊತೆಗೆ ಮಣ್ಣಿನ ಸವಕಳಿ ತಪ್ಪಿಸಲು ಇಳಿಜಾರಿಗೆ ವಿರುದ್ಧವಾಗಿ ಕೃಷಿ ಹೊಂಡ ನಿರ್ಮಿಸಿಕೊಳ್ಳಬೇಕು. ಕೃಷಿಗೆ ಮಣ್ಣು ಮುಖ್ಯವಾಗಿದ್ದು ಅದರ ಫಲವತ್ತತೆ ಕಾಪಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮರಳಕುಂಟೆ ರೈತ ದಯಾನಂದರ ಜಮೀನಿನಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಭೂಮಿಪೂಜೆ ನೆರವೇರಿಸಿದರು. ಉಪಕೃಷಿ ನಿರ್ದೇಶಕಿ ಗಾಯತ್ರಿ, ಗ್ರಾಪಂ ಅಧ್ಯಕ್ಷೆ ಶೋಭಾರಾಣಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ.ಸಿ.ಸಿ.ಕಾವಟಿ, ಸಹಾಯಕ ಕೃಷಿ ನಿರ್ದೇಶಕ ಸಿದ್ದಲಿಂಗಯ್ಯ, ಕೃಷಿಕ ಸಮಾಜದ ಅಧ್ಯಕ್ಷ ಚನ್ನೇಗೌಡ, ಗುರುರಾಜ್, ರೈತ ಮುಖಂಡರಾದ ನರಸಿಂಹಮೂರ್ತಿ, ನರಸಿಂಹಯ್ಯ, ಕೃಷಿ ಅಧಿಕಾರಿಗಳಾದ ಅಂಜನಾ, ಪ್ರಭು, ಶಿವಕುಮಾರ್, ಶಭಾನ, ರಂಜಿತ, ರವಿಕುಮಾರ್, ಆತ್ಮ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.ಪೋಟೋ 1 : ಮರಳಕುಂಟೆಯಲ್ಲಿ ಆಯೋಜಿಸಿದ್ದ ಜಲಾನಯನ ಯಾತ್ರಾ ಕಾರ್ಯಕ್ರಮಕ್ಕೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಕಲಾವತಿ ಸಸಿ ನೆಟ್ಟು ಚಾಲನೆ ನೀಡಿದರು.