ಸಾರಾಂಶ
ತರೀಕೆರೆ, ಋತುಚಕ್ರದ ಶುಚಿತ್ವ ನಿರ್ವಹಣೆಗೆ ಸ್ನಾನ ಮಾಡಬೇಕು ಮತ್ತು ಬಳಸಿದ ಸ್ಯಾನಿಟರಿ ಪ್ಯಾಡ್ ಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಜತೆಗೆ ನಿಯಮಿತವಾಗಿ ಕೈಗಳನ್ನು ತೊಳಯಬೇಕು ಎಂದು ಪಟ್ಟಣದ ಆತ್ರೇಯ ಕ್ಲಿನಿಕ್ ನ.ಡಾ. ಸುಮನಾ ಕಿಶೋರ್ ಹೇಳಿದರು.
ಕನ್ನಡಪ್ರಭ ವಾರ್ತೆ, ತರೀಕೆರೆ
ಋತುಚಕ್ರದ ಶುಚಿತ್ವ ನಿರ್ವಹಣೆಗೆ ಸ್ನಾನ ಮಾಡಬೇಕು ಮತ್ತು ಬಳಸಿದ ಸ್ಯಾನಿಟರಿ ಪ್ಯಾಡ್ ಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಜತೆಗೆ ನಿಯಮಿತವಾಗಿ ಕೈಗಳನ್ನು ತೊಳಯಬೇಕು ಎಂದು ಪಟ್ಟಣದ ಆತ್ರೇಯ ಕ್ಲಿನಿಕ್ ನ.ಡಾ. ಸುಮನಾ ಕಿಶೋರ್ ಹೇಳಿದರು.ಸರ್ಕಾರಿ ಆಯುರ್ವೇದ ಆಸ್ಪತ್ರೆ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (ಜಿಐಒ) ತರೀಕೆರೆ ಶಾಖೆ, ರೋಟರಿ ಕ್ಲಬ್, ಶ್ರೀ ತುಂಗಭದ್ರಾ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಶ್ರೀ ತುಂಗಭದ್ರಾ ಶಿಕ್ಷಣ ಸಂಸ್ಥೆಯ ಬಿಎಡ್ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ಹೆಣ್ಣು ಮಕ್ಕಳಿಗೆ ಋತುಚಕ್ರ ಶುಚಿತ್ವ ನಿರ್ವಹಣೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ ಆರೋಗ್ಯಕ್ಕಾಗಿ ಸಮತೋಲನ ಆಹಾರ, ವ್ಯಾಯಾಮ ಮತ್ತು ಸಾಕಷ್ಚು ನಿದ್ರೆ, ಮುಕ್ತ ಸಂಭಾಷಣೆ ಬಹಳ ಮುಖ್ಯ ಎಂದರು.ಜೆಐಓ ಜಿಲ್ಲಾ ಸಂಚಾಲಕಿ ಬಸಿರಾಬಾನು ಅರಿವು -ಮಾನವೀಯತೆಯ ಜಾಗೃತಿ ಯ ಮಹತ್ವ, ಪ್ರೇರಣೆ, ಹಾಗೂ ಕಾರ್ಯಸೂಚಿಯ ಬಗ್ಗೆ ಸಭೆಗೆ ತಿಳಿಸಿದರು
ಶ್ರೀ ತುಂಗಭದ್ರಾ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರಾದ ಬಿಂದು ಯತೀಶ್, ಡಾ.ಕಿಶೋರ್ ಕುಮಾರ್ ಬಿ.ವಿ., ರೋಟರಿ ಜೋನ್ -7 ನ ಅಸಿಸ್ಟೆಂಟ್ ಗವರ್ನರ್, ಪ್ರವೀಣ್ ನಾಹರ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿಕುಮಾರ್, ಜಿಐಒ ಅಧ್ಯಕ್ಷ ನೂರೈನ್, ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಪುರಸಭಾ ಸದಸ್ಯ ಆದಿಲ್ ಪಾಶ, ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯ ಶೇಕ್ ಜಾವೀದ್, ಉಮಾದೇವಿ ದಯಾನಂದ್, ಲಕ್ಷ್ಮೀ ನಿತಿನ್, ಶಾಹಿದಾ ಬೇಗಂ, ರೇಷ್ಮಾ ಬಾನು, ತುಂಗಭದ್ರಾ ಶಿಕ್ಷಣ ಸಂಸ್ಥೆ ಶಿಕ್ಷಕರು, ವಿದ್ಯಾರ್ಥಿನಿಯರು ಮಕ್ಕಳು ಭಾಗವಹಿಸಿದ್ದರು.-
16ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಜೋನ್ -7 ನ ಅಸಿಸ್ಟೆಂಟ್ ಗವರ್ನರ್, ಪ್ರವೀಣ್ ನಾಹರ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿ ಕುಮಾರ್, ಪಟ್ಟಣದ ಆತ್ರೇಯ ಕ್ಲಿನಿಕ್.ನ.ಡಾ.ಸುಮನ ಕಿಶೋರ್ ಮತ್ತಿತರರು ಭಾಗವಹಿಸಿದ್ದರು.-----------------