ಸಾರಾಂಶ
ಕೊಳ್ಳೇಗಾಲದ ಲಯನ್ಸ್ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಕಣ್ಣಿನ ತಪಾಸಣಾ ಶಿಬಿರದಲ್ಲಿ ಡಾ.ವರ್ಸಿನಾ, ಲಯನ್ಸ್ ಸಂಸ್ಥೆಯ ನಾಗರಾಜು, ವೀರೂಪಾಕ್ಷ, ಚಿಕ್ಕಬಸವಯ್ಯ ಇನ್ನಿತರರಿದ್ದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾನವ ದೇಹದಲ್ಲಿನ ಅಂಗಗಳಲ್ಲಿ ಕಣ್ಣು ಅತಿ ಮುಖ್ಯವಾದ ಅಂಗವಾಗಿದ್ದು, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಮೈಸೂರಿನ ಡಾ.ವರ್ಸಿನ್ ಹೇಳಿದರು.ಪಟ್ಟಣದ ಲಯನ್ಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕಣ್ಣು ಬಹಳ ಅಮೂಲ್ಯವಾದ ಅಂಗ, ನೇತ್ರ ದಾನದಲ್ಲಿ ಪಾಲ್ಗೊಳ್ಳುವುದು ಕೂಡ ಅಷ್ಟೇ ಅಮೂಲ್ಯವಾದುದು, ಈ ಹಿನ್ನೆಲೆ ಪ್ರತಿಯೊಬ್ಬರು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಕಣ್ಣಿನ ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು ಎಂದರು.
ಲಯನ್ ಸಂಸ್ಥೆಯ ಮಾಜಿ ಅದ್ಯಕ್ಷ ಕೊಂಗರಹಳ್ಳಿ ಎಸ್.ನಾಗರಾಜು ಮಾತನಾಡಿ, ಲಯನ್ಸ್ ಸಂಸ್ಥೆ ಅನೇಕ ಸೇವಾ ಕೆಲಸಗಳನ್ನು ಹಲವು ದಶಕಗಳಿಂದಲೂ ಮಾಡುತ್ತಾ ಬಂದಿದ್ದು, ಇಲ್ಲಿವರೆವಿಗೂ 1,05,627 ಜನ ಇದರ ಪ್ರಯೋಜನ ಪಡೆದಿದ್ದಾರೆ. ಉಚಿತ ಕಣ್ಣಿನ ತಪಾಸಣಾದಲ್ಲೂ 11,638 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಶಸ್ತ್ರಚಿಕಿತ್ಸೆಗೊಳಗಾದವರು ತೊಂದರೆ ಇಲ್ಲದೆ ಆರೋಗ್ಯವಾಗಿದ್ದಾರೆ. ಒಟ್ಟಾರೆ 236 ಕ್ಯಾಂಪ್ ನಡೆಸಿದ ಹೆಗ್ಗಳಿಗೆ ಕೊಳ್ಳೇಗಾಲ ಲಯನ್ಸ್ ಸಂಸ್ಥೆಗಿದೆ ಎಂದರು.ಪ್ರತಿದಿನವೂ ಕಣ್ಣಿನ ತಪಾಸಣೆ ಇದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು, ಸಂಸ್ಥೆಯ ಸಾವಿರಾರು ಮಂದಿ ಪದಾಧಿಕಾರಿಗಳ ಮಾರ್ಗದರ್ಶನದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು. ಶಿಬಿರದಲ್ಲಿ 45 ಜನ ಪಾಲ್ಗೊಂಡಿದ್ದು 30 ಮಂದಿಯನ್ನು ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ನುರಿತ ವೈದ್ಯರ ಸಮ್ಮುಖದಲ್ಲಿ ಕರೆದೊಯ್ಯಲಾಯಿತು. ಈ ವೇಳೆ ಲಯನ್ಸ್ ಕ್ಲಬ್ ಅಧ್ಯಕ್ಷ ಚಿಕ್ಕಬಸವಯ್ಯ, ಆನಂದ ರಾಮ್ ಶೆಟ್ಟಿ, ಇಂದ್ರೇಶ್, ವಿರೂಪಾಕ್ಷ ಸ್ವಾಮಿ ಇನ್ನಿತರರಿದ್ದರು.