ಕಡೂರುಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ವೈದ್ಯರ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬರ ಜವಾಬ್ದಾರಿ.. ಬದಲಾದ ಜೀವನಶೈಲಿ, ಅಸಮತೋಲನದ ಆಹಾರ ಪದ್ಧತಿ ಹಾಗೂ ದುಶ್ಚಟಗಳಿಂದ ಯುವಜನರಲ್ಲೂ ಹೃದಯಾಘಾತದ ಸಮಸ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ ಕಡೂರುಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ವೈದ್ಯರ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬರ ಜವಾಬ್ದಾರಿ.. ಬದಲಾದ ಜೀವನಶೈಲಿ, ಅಸಮತೋಲನದ ಆಹಾರ ಪದ್ಧತಿ ಹಾಗೂ ದುಶ್ಚಟಗಳಿಂದ ಯುವಜನರಲ್ಲೂ ಹೃದಯಾಘಾತದ ಸಮಸ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಕಡೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. ಹೃದಯದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು. ಧೂಮ ಪಾನ, ಮದ್ಯಪಾನ ಸೇರಿದಂತೆ ದುಶ್ಚಟಗಳಿಂದ ದೂರವಿದ್ದು, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಹಿಂದೆ ಕಡೂರಿನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಶಿವಮೊಗ್ಗ, ಬೆಂಗ ಳೂರು, ಮಂಗಳೂರು ಹಾಗೂ ಉಡುಪಿಗೆ ತೆರಳಬೇಕಾಗುತ್ತಿತ್ತು. ಇದೀಗ ಕಡೂರಿನಲ್ಲಿಯೇ ಕೆಎಂಹೆಚ್ ಆಸ್ಪತ್ರೆ ಆರಂಭವಾಗಿರುವುದು ಸ್ಥಳೀಯರು ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಅನುಕೂಲವಾಗಿದೆ ಎಂದರು.ಕೆಎಂಹೆಚ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ದಿನೇಶ್ ಮಾತನಾಡಿ, ಹೃದಯದ ಆರೋಗ್ಯದ ಕುರಿತು ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಾಕಥಾನ್ ಹಾಗೂ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ. ಆಸ್ಪತ್ರೆಯಲ್ಲಿ ಹೃದಯರೋಗಕ್ಕೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೆ 50ಕ್ಕೂ ಹೆಚ್ಚು ರೋಗಿಗಳಿಗೆ ಸ್ಟೆಂಟ್ ಅಳವಡಿ ಸ ಲಾಗಿದೆ. ಸರ್ಕಾರದ ಆರೋಗ್ಯ ಸೌಲಭ್ಯಗಳನ್ನು ಅರ್ಹ ಬಡ ರೋಗಿಗಳಿಗೆ ತಲುಪಿಸಲು ಆಸ್ಪತ್ರೆಯಿಂದ ಶ್ರಮಿಸಲಾಗುತ್ತಿದೆ ಎಂದರು.ಹೃದಯರೋಗ ತಜ್ಞ ಡಾ. ದರ್ಶನ್ ಮಾತನಾಡಿ, ದೈಹಿಕ ಶ್ರಮವಿಲ್ಲದ ಜೀವನಶೈಲಿ, ನಿರಂತರ ಕುಳಿತುಕೊಳ್ಳುವ ಅಭ್ಯಾಸ, ಅಸಮತೋಲನದ ಆಹಾರ, ಒತ್ತಡ, ನಿದ್ರೆಯ ಕೊರತೆ, ಧೂಮಪಾನ, ಮದ್ಯಪಾನ, ಮಧುಮೇಹ ಹಾಗೂ ರಕ್ತದೊತ್ತಡ ಹೃದಯರೋಗಕ್ಕೆ ಕಾರಣವಾಗಬಹುದು. ಹಸಿರು ತರಕಾರಿ, ನವಧಾನ್ಯ ಸೇವನೆ, ವ್ಯಾಯಾಮ, ಯೋಗ, ಧ್ಯಾನ ಹಾಗೂ ನಿಯಮಿತ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು. ಕುಟುಂಬದೊಂದಿಗೆ ಸಮಯ ಕಳೆಯುವ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆಸ್ಪತ್ರೆ ವೈದ್ಯರಾದ ಡಾ. ವಾಸುದೇವಮೂರ್ತಿ, ಡಾ. ಯೋಗೇಶ್, ಡಾ. ಪೂರ್ಣಿಮಾ, ಡಾ. ಚಂದಾ ದೀಪಕ್, ಡಾ. ಚೇತನ್, ರೋಟರಿ, ಲಯನ್ಸ್ ಹಾಗೂ ಜೆಸಿಐ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
